NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

KSRTC: ಅಧಿಕಾರಿಗಳಿಗೆ ಬೇಡದ ಹೋರಾಟ ನಮಗೆ ಬೇಕಾ- ಎಚ್ಚೆತ್ತ ನೌಕರರ ಪ್ರಶ್ನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ವೇತನ ಹೆಚ್ಚಳವಾಗಬೇಕು ಅದಾದ ಬಳಿಕ ಅರಿಯರ್ಸ್‌ ಕೊಡಬೇಕು ಎಂದು ಹೋರಾಟ ಮಾಡುತ್ತಿರುವವರು ನೌಕರರು ಮಾತ್ರ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇವರಿಗೆ ಮಾತ್ರ ವೇತನ, ವೇತನ ಹೆಚ್ಚಳದ ಅರಿಯರ್ಸ್‌ ಬೇಕಾ ಅಥವಾ ಅಧಿಕಾರಿ ವರ್ಗದವರಿಗೂ ಬೇಕಾ ಎಂಬ ಪ್ರಶ್ನೆ ಕಾಡುತ್ತಿದೆ.

ಈ ಪ್ರಶ್ನೆ ಕಾಡುತ್ತಿರುವುದಕ್ಕೆ ಕಾರಣವೂ ಇದೇ. ಅದೇನೆಂದರೆ ಅಧಿಕಾರಿಗಳು ಈವರೆಗೂ ನಮಗೆ ವೇತನ ಹೆಚ್ಚಳ ಮಾಡಿ, ಆ ಬಳಿಕ ಅರಿಯರ್ಸ್‌ ಕೂಡಲೇ ಕೊಡಬೇಕು ಎಂದು ಎಂಡಿಗಳಿಗಾಗಲೀ ಅಥವಾ ಆಡಳಿತ ಮಂಡಳಿಗಾಗಲೀ ಇಲ್ಲ ಸರ್ಕಾರಕ್ಕಾಗಲಿ ಈವರೆಗೂ ಒಂದೇವೊಂದು ಮನವಿ ಪತ್ರವನ್ನು ನೀಡಿಲ್ಲ. ಆದರೆ, ನೌಕರರು ಮತ್ತವರ ಸಂಘಟನೆಗಳು ಮಾತ್ರ ನೂರಾರು ಮನವಿ ಪತ್ರಗಳನ್ನು ಸಲ್ಲಿಸಿವೆ.

ಇದನ್ನು ಗಮನಿಸಿದರೆ, ಅಧಿಕಾರಿಗಳೇ ವೇತನ ಹೆಚ್ಚಳದ ಅರಿಯರ್ಸ್‌ ಬೇಡವೆಂದು ಸರ್ಕಾರ ಮತ್ತು ಆಡಳಿ ಮಂಡಳಿಗೆ ಪರೋಕ್ಷವಾಗಿ ಹೇಳುತ್ತಿರುವಂತೆ ಕಾಣಿಸುತ್ತಿದೆ. ಈ ಅರಿಯರ್ಸ್‌ ಹೆಚ್ಚಾಗಿ ಅಂದರೆ 5 ಲಕ್ಷದಿಂದ 15 ಲಕ್ಷ ರೂ.ಗಳರೆಗೆ ಸಿಗುವುದು ಈ ಅಧಿಕಾರಿಗಳಿಗೆಯೇ ಇದರಲ್ಲಿ ಬೇರೆ ಮಾತಿಲ್ಲ. ಆದರೆ ಇವರೇ ಮೌನವಾಗಿದ್ದಾರೆ ಎಂದರೆ 1-2 ಲಕ್ಷ ರೂ.ಗಳ ವರೆಗೆ ಅರಿಯರ್ಸ್‌ ಪಡೆದುಕೊಳ್ಳುವ ನೌಕರರು ಏಕೆ ಹೋರಾಟ ಮಾಡಬೇಕು?

5-15 ಲಕ್ಷ ರೂ.ಗಳ ಅರಿಯರ್ಸ್‌ ಪಡೆದುಕೊಳ್ಳುವವರೆ ಈ ಬಗ್ಗೆ ಮೌನವಹಿಸಿರುವಾಗ ನೀವು ಹೋರಾಟಕ್ಕೆ ಇಳಿದು ನಿಮ್ಮ ಕುಟುಂಬವನ್ನು ಬೀದಿಗೆ ತರುವ ಕೆಲಸವನ್ನೇಕೆ ಮಾಡಬೇಕು. ಅಂದರೆ ಅಧಿಕಾರಿಗಳು ಹೋರಾಟಕ್ಕೆ ಇಳಿದರೆ ನೀವು ಕೈ ಜೋಡಿಸಿ ಇಲ್ಲ ಅವರಿಗೆ ಆದಂತೆಯೇ ನಮಗೂ ಅಗುತ್ತದೆ ಎಂದು ಯಾವುದೇ ಹೋರಾಟ ಮಾಡದೆ ನಿಮ್ಮ ಕೆಲಸವನ್ನು ನೀವು ಮಾಡಿಕೊಂಡಿರಿ.

ದಶಕ ಶಕಗಳಿಂದಲೂ ಇದೇ ನಡೆದುಕೊಂಡು ಬರುತ್ತಿರುವುದು: ಇದು ಇಂದಿನ ಕತೆಯಲ್ಲ ದಶಕ ಶಕಗಳಿಂದಲೂ ಇದೇ ನಡೆದುಕೊಂಡು ಬರುತ್ತಿರುವುದು. ಇತ್ತ ಅಗ್ರಿಮೆಂಟ್‌ ಸಮಯದಲ್ಲಿ ನೌಕರರ ಅಭಿಪ್ರಾಯ ಪಡೆಯದೆಯೇ ತಾವೇ ನೌಕರರು ಎಂಬಂತೆ ಸಾರಿಗೆ ಸಂಸ್ಥೆಗಳ ಎಂಡಿಗಳು ಮತ್ತು ಸಚಿವರ ಬಳಿ ನಮಗೆ ಶೇ. ಇಷ್ಟು ಕೊಡಬೇಕು, ಅದರ ಜತೆಗೆ ಅದು ಇದನ್ನು ಕೊಡಬೇಕು ಎಂದು ಚರ್ಚೆ ಮಾಡುವ ರೀತಿ ಕೆಲ ಸಂಘಟನೆಗಳ ಮುಖಂಡರೆನಿಸಿಕೊಂಡವರು ನಾಟಕವಾಡುತ್ತಾರೆ. ಬಳಿಕ ನಮ್ಮ ಬೇಡಿಕೆಗೆ ಸರ್ಕಾರ ಮತ್ತು ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ಹೋರಾಟಕ್ಕೆ ಕರೆ ನೀಡುತ್ತಾರೆ.

ಯಾವುದೇ ಮಾನ್ಯತೆ ಇಲ್ಲದ ಈ ಸಂಘಟನೆಗಳು ಕರೆ ನೀಡುವ ಹೋರಾಟಕ್ಕೆ ಈ ಅಧಿಕಾರಿಗಳಂತು ಬರುವುದೇ ಇಲ್ಲ. ಇನ್ನು ಬರುವುದು ನೌಕರರು. ಹೋಗಲಿ ನಮ್ಮ ಪರವಾಗಿ ಈ ನೌಕರರು ರಸ್ತೆಗಿಳಿದಿದ್ದಾರೆ ಅಂತ ಅಂದುಕೊಳ್ಳುತ್ತಾರೆಯೇ ಈ ಅಧಿಕಾರಿಗಳು. ಖಂಡಿತ ಇಲ್ಲ. ಇದರಿಂದ ನೌಕರರಿಗೆ ಲಾಭ ಎಂಬಂತೆ ವರ್ತಿಸಿ ಈ ನೌಕರರಿಗೆ ಪೊಲೀಸ್‌ ಕೇಸ್‌, ವಜಾ, ಅಮಾನತು ಮಾಡುತ್ತಾರೆ ಈ ಅಧಿಕಾರಿಗಳು.

ಇತ್ತ ಹೋರಾಟಕ್ಕೆ ಕರೆ ನೀಡಿ ಯಾವುದನ್ನು ಮಾಡಿಕೊಡದ ಈ ಸಂಘಟನೆಗಳು ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೆ ಏಕಪಕ್ಷೀಯವಾಗಿ ನಿರ್ಧಾರತೆಗೆದುಕೊಂಡಿದೆ ಇದಕ್ಕೆ ನಮ್ಮ ವಿರೋಧವಿದೆ ಎಂದು ಕೊನೆಗೆ ಒಳ ಒಪ್ಪಂದ ಮಾಡಿಕೊಂಡು …. ಅದನ್ನು ಪಡೆದು ಹೋರಾಟಕ್ಕೆ ಇಳಿದ ನೌಕರರು ಶಿಕ್ಷೆಗೊಳಗಾದರೂ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಾರೆ.

ಇತ್ತ ಹೋರಾಟಕ್ಕೆ ಇಳಿಯದ ಅಧಿಕಾರಿಗಳಿಗೇ ಹೆಚ್ಚಿನ ಲಾಭ: ಇನ್ನು ಹೋರಾಟದಿಂದಾಗಿ ವಜಾ, ಆಮಾನತು, ಪೊಲೀಸ್‌ ಕೇಸ್‌ ಹಾಕಿಸಿಕೊಂಡ ನೌಕರರು ಇತ್ತ ಕೆಲಸವು ಇಲ್ಲ, ಅತ್ತ ನ್ಯಾಯಾಲಯಗಳಿಗೂ ಅಲೆಯಬೇಕಾದ ಪರಿಸ್ಥಿತಿ ಎದುರಿಸುತ್ತಾರೆ. ಈ ನಡುವೆ ಹೋರಾಟಕ್ಕೆ ಕರೆ ನೀಡಿದ ಈ ಮೂರ್ಖರ ಬಳಿ ಹೋದರೆ ನೀನು ಯಾವ ಸಂಘಟನೆಯವನು ಎಂದು ಪ್ರಶ್ನೆ ಮಾಡಿ ಹೊರಹಾಕುತ್ತಾರೆ. ಈ ರೀತಿ ಮಾಡುತ್ತಿರುವುದರಿಂದ ಸಾರಿಗೆ ನೌಕರರ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಆದರೆ ಯಾವುದೇ ಹೋರಾಟವನ್ನು ಮಾಡದೆ 10-15 ಸಾವಿರ ವೇತನ ಹೆಚ್ಚಳದ ಲಾಭ ಪಡೆದು ಈ ಅಧಿಕಾರಿಗಳು ನೌಕರರ ಮೇಲೆಯೆ ದರ್ಪ ಮೆರೆಯುತ್ತಾರೆ.

ಇತ್ತ ವೇತನ ಹೆಚ್ಚಳದಿಂದ ಅತೀ ಹೆಚ್ಚಿನ ಲಾಭ ಪಡೆಯುವವರು ಈ ಅಧಿಕಾರಿ ವರ್ಗದವರೆ ಆದರೂ ಒಂದೇವೊಂದು ದಿನವು ಹೋರಾಟದಲ್ಲಿ ಭಾಗವಹಿಸುವುದಿಲ್ಲ. ಆದರೆ ಭಾಗವಹಿಸಿ ಇವರಿಗೆ ಲಾಭ ಮಾಡಿಕೊಡುವ ನೌಕರರನ್ನೇ ಇವರು ವಜಾ, ಅಮಾನತು ಮಾಡುತ್ತಾರೆ. ಆದರೂ ಈ ಅಧಿಕಾರಿಗಳಿಗೆ ಒಂಚೂರು ನಾಚಿಕೆ ಎಂಬುವುದೇ ಆಗುವುದಿಲ್ಲ.

ಅಧಿಕಾರಿಗಳು ಭಾಗವಹಿಸಿದ್ದರೆ ಮಾತ್ರ ನೌಕರರು ಭಾಗವಹಿಸಿ: ಇನ್ನಾದರೂ ಇಂಥ ಕುಂತಂತ್ರಿಗಳ ಕರೆಗೆ ನೌಕರರು ಮೋಸಹೋಗದೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗಬೇಕು. ಅಧಿಕಾರಿಗಳು ಹೋರಾಟದಲ್ಲಿ ಭಾಗವಹಿಸಿದ್ದರೆ ಮಾತ್ರ ನೌಕರರು ಭಾಗವಹಿಸಬೇಕು ಇಲ್ಲದಿದ್ದರೆ ಯಾವುದೇ ಸಂಘಟನೆಗಳು ಕರೆ ನೀಡುವ ಹೋರಾಟ ಮುಷ್ಕರಕ್ಕೆ ಹೋಗಬಾರದು. ಇದರಿಂದ ನಿಮ್ಮ ಕುಟುಂಬ ಬೀದಿಗೆ ಬೀಳುವುದು ಅಲ್ಲದೆ ನೀವುಗಳು ಕೂಡ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಅನುಭವಿಸುವುದು ತಪ್ಪುತ್ತದೆ. ಇನ್ನಾದರೂ ಅರ್ಥ ಮಾಡಿಕೊಳ್ಳಿ ಕೆಇಬಿ ಸೇರಿದಂತೆ ಯಾವುದೇ ನಿಗಮಗಳಲ್ಲೂ ಈ ರೀತಿ ಅಧಿಕಾರಿಗಳ ಹೊರತುಪಡಿಸಿ ನೌಕರರಷ್ಟೇ ಹೋರಾಟ ಮಾಡಿರುವ ಇತಿಹಾಸವಿಲ್ಲ.

ಆದರೆ ನಿಮ್ಮ ಅಧಿಕಾರಿಗಳು ಹೋರಾಟಕ್ಕೆ ಇಳಿಯದೆ ನಿಮ್ಮಿಂದಲೇ ಲಾಭ ಪಡೆಯುತ್ತಾ ಬಂದಿದ್ದಾರೆ. ಅಲ್ಲದೆ ನಿಮಗೆ ಮೊಗ್ಗಲು ಮುಳ್ಳಾಗುತ್ತಿದ್ದಾರೆ ಈ ಬಗ್ಗೆ ಎಚ್ಚರ .. ನೌಕರರೇ ಎಚ್ಚರ..!! ನಿಮಗೂ ಕಟುಂಟುವಿದೆ, ಆ ಕುಟುಂಬಕ್ಕೆ ಸಮಾಜದಲ್ಲಿ ಒಂದು ಗೌರರವೂ ಇದೆ. ಇದನ್ನು ಹಾಳು ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಬೇಡಿ ಎಂಬುವುದು ನಮ್ಮ ಕಳಕಳಿ.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ