NEWSದೇಶ-ವಿದೇಶನಮ್ಮರಾಜ್ಯ

KSRTC: ಲೋಕಸಭಾ ಚುನಾವಣೆಯಂದು ನಮಗೂ ರಜೆ ಕೊಡಿ- ಇಲ್ಲ ಹೆಚ್ಚುವರಿ ವೇತನ ಮಂಜೂರು ಮಾಡಿ – ಚಾಲನಾ, ತಾಂತ್ರಿಕ ಸಿಬ್ಬಂದಿಗಳ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳೂ ನೌಕರರ ವರ್ಗದವರಿಗೆ ಇದೇ ಏ.26 ಮತ್ತು ಮೇ 7ರಂದು ರಾಜ್ಯದಲ್ಲಿ ನಡೆಯಲಿರುವ 2 ಹಂತದ ಲೋಕಸಭಾ ಚುನಾವಣೆಗೆ ವೇತನ ಸಹಿತ ರಜೆ ನೀಡಲಾಗುತ್ತಿದೆ.

ಅದೇ ರೀತಿ ಸಾರಿಗೆ ನಿಗಮಗಳ ಕೇಂದ್ರ ಕಚೇರಿಗಳು, ವಿಭಾಗದ ಕಚೇರಿಗಳು , ಮುದ್ರಣಾಲಯ ಹಾಗೂ ಕಾರ್ಯಾಗಾರಗಳು ಹೀಗೆ ಎಲ್ಲರಿಗೂ ಚುನಾವಣೆ ನಡೆಯುವ ಎರಡು ದಿನಗಳ ಕಾಲ ರಜೆಯನ್ನು ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಘೋಷಣೆ ಮಾಡಿದ್ದಾರೆ.

ಆದರೆ ಜಾಲಕ – ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳಿಗೆ ಡ್ಯೂಟಿಗೆ ಹತ್ತುವ ಮೊದಲು ಮತ್ತು ಡ್ಯೂಟಿ ಇಳಿದ ನಂತರ ಮತ ಚಲಾಯಿಸಲು ಸೂಚಿಸಿದ್ದಾರೆ. ಇದು ತಾರತಮ್ಯತೆಯ ಆದೇಶವಲ್ಲವೇ? ಇನ್ನು ನಮ್ಮದು ಅಗತ್ಯ ಸೇವೆಯಾಗಿರುವುದರಿಂದ ಓಕೆ ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಡ್ಯೂಟಿ ಮಾಡುವ ನಮ್ಮೆಲ್ಲ ಸಿಬ್ಬಂದಿಗಳು ಒಂದೇ ಊರಿನಲ್ಲಿ ಇದ್ದರೆ ಮತ ಚಲಾಯಿಸಬಹುದು. ಬೇರೆ ಊರಿನಲ್ಲಿ ಇದ್ದರೆ ವೋಟ್‌ ಮಾಡಲು ಹೇಗೆ ಸಾಧ್ಯವಾಗುತ್ತದೆ?

ಇನ್ನು ಪ್ರಮುಖವಾಗಿ ಇಡೀ ರಾಜ್ಯದ ಸಮಸ್ತ ಅಧಿಕಾರಿಗಳು, ನೌಕರರಿಗೂ ಮತದಾನದ ದಿನಗಳಂದು ಸಾರ್ವತ್ರಿಕ ರಜೆ ಮಂಜೂರು ಮಾಡಿದ್ದು ಅದೂ ಕೂಡ ವೇತನ ಸಹಿತ ರಜೆ ನೀಡಿದ್ದಾರೆ. ಅದರಂತೆ ಈ ದಿನಗಳಂದು ಜಾಲಕ – ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳಿಗೂ ರಜೆ ಕೊಡಿ ಇಲ್ಲ ಹೆಚ್ಚುವರಿ ವೇತನ ಮಂಜೂರು ಮಾಡುವ ಆದೇಶ ಹೊರಡಿಸಿ ಎಂದು ನೌಕರರು ಒತ್ತಾಯಿಸಿದ್ದಾರೆ.

ಇಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸಾರಿಗೆ ನಿಗಮಗಳ ಕೇಂದ್ರ ಕಚೇರಿಗಳು, ವಿಭಾಗದ ಕಚೇರಿಗಳು, ಮುದ್ರಣಾಲಯ ಹಾಗೂ ಕಾರ್ಯಾಗಾರಗಳು ಹೀಗೆ ಎಲ್ಲರಿಗೂ ಚುನಾವಣೆ ನಡೆಯುವ ಎರಡು ದಿನಗಳ ಕಾಲ ರಜೆಯನ್ನು ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಘೋಷಣೆ ಮಾಡಿದ್ದು, ನಮಗೆ ಯಾವುದೇ ರಜೆಯನ್ನು ನೀಡಿಲ್ಲ. ಜತೆಗೆ ಕೆಲಸ ಮಾಡಿಕೊಂಡೇ ವೋಟ್‌ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ. ಇದು ಇವರಿಗೇ ಸರಿ ಎನಿಸುತ್ತದೆಯೇ?

ಇನ್ನು ಡ್ಯೂಟಿ ಮಾಡುವ ನಮಗೆ ರಜೆ ಕೊಡಿ ಇದು ಸಾಧ್ಯವಿಲ್ಲ ಎಂದರೆ ಹೆಚ್ಚುವರಿ ಅಂದರೆ ಡಬಲ್‌ ವೇತನ ಮಂಜೂರು ಮಾಡಿ ಆದೇಶ ಹೊರಡಿಸಿ ಅದನ್ನು ಬಿಟ್ಟು ಈ ರೀತಿ ಒಂದುಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸವನ್ನು ಏಕೆ ಮಾಡುತ್ತೀರಿ? ಇದು ನಿಮಗೆ ನ್ಯಾಯವೆನಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಅದು ಏನೆ ಇರಲಿ ಡ್ಯೂಟಿ ಮಾಡದೆ ಮನೆಯಿಂದ ಬಂದು ವೋಟ್‌ ಮಾಡಿ ಹೋಗುವವರಿಗೆ ವೇತನ ಸಹಿತ ರಜೆ ಕೊಡುತ್ತೀರಿ ಡ್ಯೂಟಿ ಮಾಡುವ ನಮಗೆ ಏಕೆ ಡಬಲ್‌ ವೇತನ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತೀರಿ? ನಾವು ಕೆಲಸ ಮಾಡುತ್ತಿಲ್ಲವೇ? ನಮಗೂ ಕಾನೂನಾತ್ಮಕವಾಗಿಯೇ ನಿರ್ಧಾರ ತೆಗೆದುಕೊಂಡು ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಒಂದು ದೃಢ ನಿರ್ಧಾರ ತೆಗೆದುಕೊಳ್ಳದೆ ಹೋದರೆ ಸಂಘಟನೆಗಳ ಮುಖಂಡರು ಏನು ಹೇಳುತ್ತಾರೋ ಅದರಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಕೂಡಲೇ ಈ ಬಗ್ಗೆ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಕಾನೂನಿನಡಿಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲದೆ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಕೂಡ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ