NEWSನಮ್ಮಜಿಲ್ಲೆನಮ್ಮರಾಜ್ಯ

KSRTC ದರ್ಜೆ-3 ಮತ್ತು ದರ್ಜೆ-4 ನೌಕರರು ಮುಕ್ತ ವೇತನ ಶ್ರೇಣಿಗೆ ಅರ್ಹರು: ನಿರ್ದೇಶಕರ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಮುಕ್ತ ವೇತನ ಶ್ರೇಣಿಯನ್ನು ನೀಡಲು ಕ್ರಮ ತೆಗೆದುಕೊಳ್ಳುವಂತೆ KSRTC ನಿರ್ದೇಶಕರು (ಸಿಬ್ಬಂದಿ & ಜಾಗೃತ) ಇಂದು ಆದೇಶ ಹೊರಡಿಸಿದ್ದಾರೆ.

ಇಂದು ಈ ಸಂಬಂಧ ಎಲ್ಲ ನಿಗಮಗಳಿಗೂ ಆದೇಶ ಹೊರಡಿಸಿದ್ದು, ಅದರಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಅಂದರೆ ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಮುಕ್ತ ವೇತನ ಶ್ರೇಣಿ ನೀಡುವ ಬಗ್ಗೆ KSRTC ವ್ಯವಸ್ಥಾಪಕ ನಿರ್ದೇಶಕರು ಇದೇ ಜುಲೈ 9 ಆದೇಶ ಹೊರಡಿಸಿದ್ದಾರೆ.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ, 1996 ರ ನಂತರ ಮತ್ತು 2002ರ ನಂತರ ನೇಮಕಗೊಂಡ ದರ್ಜೆ-3 ಮತ್ತು ದರ್ಜೆ-4 ರ ನೌಕರರ ನೇಮಕಾತಿ ಆದೇಶದಲ್ಲಿ ಮುಕ್ತ ವೇತನ ಶ್ರೇಣಿಗೆ ಅರ್ಹರಿರುವುದಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಆದರೆ, ಈ ನೌಕರರು ಗರಿಷ್ಠ ವೇತನ ಬಡ್ತಿ ಹಂತವನ್ನು ತಲುಪಿದ್ದು, ಅವರಿಗೆ ಸ್ಥಗಿತ ವೇತನ ಬಡ್ತಿ ನೀಡಲು ಯಾವುದೇ ನಿರ್ದೇಶನವಿಲ್ಲ. ಆದ್ದರಿಂದ, ಈ ನೌಕರರಿಗೆ ಸ್ಥಗಿತ ವೇತನ ಬಡ್ತಿ ನೀಡುವ ಅಥವಾ ಮುಕ್ತ ವೇತನ ಶ್ರೇಣಿ ನೀಡುವ ಕುರಿತು ಮಾರ್ಗದರ್ಶನ ನೀಡುವಂತೆ NWKRTC ಮತ್ತು KKRTC ವ್ಯವಸ್ಥಾಪಕ ನಿರ್ದೇಶಕರು ಕೋರಿರುವುದನ್ನು ಪರಿಶೀಲಿಸಲಾಯಿತು.

ಸ್ಥಗಿತ ವೇತನ ಬಡ್ತಿ ಸೌಲಭ್ಯ ನೀಡಲು ಅವಕಾಶ: 1. ಸರ್ಕಾರದಲ್ಲಿ ಕಾಲಿಕ ವೇತನದಲ್ಲಿ ಗರಿಷ್ಠ ವೇತನ ಹಂತವನ್ನು ತಲುಪಿದ ರಾಜ್ಯ ಸರ್ಕಾರಿ ನೌಕರರಿಗೆ ಸ್ಥಗಿತ ವೇತನ ಬಡ್ತಿ ಸೌಲಭ್ಯ ನೀಡಲು ಅವಕಾಶವಿದೆ. ಅದರಂತೆ, ನಿಗಮದಲ್ಲಿ ಅಧಿಕಾರಿಗಳಿಗೆ ಮಾತ್ರ ಸುತ್ತೋಲೆ ಸಂಖ್ಯೆ: 743ರ 20.04.1989 ರನ್ವಯ ಸರ್ಕಾರದಲ್ಲಿರುವಂತೆ ಸ್ಥಗಿತವೇತನ ಬಡ್ತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ದರ್ಜೆ-3 ಮತ್ತು 4 ನೌಕರರಿಗೆ ಸ್ಥಗಿತ ವೇತನ ಬಡ್ತಿ ಕುರಿತು ಯಾವುದೇ ನಿರ್ದೇಶನ ಇಲ್ಲ.

2. ಹೀಗಾಗಿ ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಮುಕ್ತ ವೇತನ ಶ್ರೇಣಿಯನ್ನು ನೀಡಲು ಕೈಗಾರಿಕಾ ಒಪ್ಪಂದ 1989ರ ಅಂಶ ಸಂಖ್ಯೆ 3 h (ii) ರನ್ವಯ ಈ ಕೆಳಗಿನಂತೆ ಅವಕಾಶವಿದೆ.

“In case an employee reaches the maximum in the revised pay scale at any time on or after 1-1-1988, he shall be granted increment at the last incremental rate annually from 01-01-1988 to 31-12-1991 or till the date of signing next settlement whichever is later.

ಈ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಲ್ಲಿರುವ ನಿರ್ದೇಶನದಂತೆ ಸ್ಥಗಿತ ವೇತನ ಬಡ್ತಿಯನ್ನು ನಿಗಮದ ಅಧಿಕಾರಿಗಳಿಗೆ ಮಾತ್ರ ಅಳವಡಿಸಿಕೊಳ್ಳಲಾಗಿದೆ. ಉಳಿದ, ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಸ್ಥಗಿತ ವೇತನ ಬಡ್ತಿಯ ಕುರಿತಾಗಿ ಯಾವುದೇ ಆದೇಶ ಇಲ್ಲದೇ ಇರುವುದರಿಂದ ಈ ಹಿಂದೆ ನೀಡುತ್ತಿರುವಂತೆ ದರ್ಜೆ-3 ಮತ್ತು ದರ್ಜೆ-4 ನೌಕರರಿಗೆ ಮುಕ್ತ ವೇತನ ಶ್ರೇಣಿಯನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.

Megha
the authorMegha

Leave a Reply

error: Content is protected !!