KSRTC ಹಾವೇರಿ: ಮಾ.29ರಂದು ನೌಕರರ ಸಮಸ್ಯೆ, ಬೇಡಿಕೆ ಈಡೇರಿಕೆ ಕುರಿತು ಹೋರಾಟ ರೂಪಿಸಿಲು ಕೂಟದ ಪದಾಧಿಕಾರಿಗಳ ಸಭೆ

ಹಾವೇರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಸಮಸ್ಯೆ ಮತ್ತು ಬೇಡಿಕೆಗಳ ಈಡೇರಿಕೆ ಕುರಿತು ಮುಂದಿನ ಹೋರಾಟಗಳ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲು ಮಾ.29ರಂದು ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರ ಸಭೆ ಕರೆಯಲಾಗಿದೆ.

ಅಂದು ಬೆಳಗ್ಗೆ 10ಗಂಟೆಗೆ ಹಾವೇರಿಯ APMC ಮಾರ್ಕೆಟ್ ಮುಂಭಾಗ ಹಾನಗಲ್ ರಸ್ತೆಯಲ್ಲಿರುವ ಶ್ರೀ ಸಮರ್ಥ ಸದ್ಗುರು ನರಸಿಂಹೇಶ್ವರ ಮಹಾರಾಜರ ಆಧ್ಯಾತ್ಮಿಕ ಮತ್ತು ಯೋಗ ಕೇಂದ್ರಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಭೆಗೆ ನೌಕರರ ಕೂಟದ ಎಲ್ಲ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಭಾಗವಹಿಸಿ ತಮ್ಮ ಅಮೂಲವ್ಯಾದ ಸಲಹೆ ಸೂಚನೆಗಳನ್ನು ಕೊಡಬೇಕು ಎಂದು ಕೂಟದ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಇನ್ನು ಈಗಾಗಲೇ ಕೂಟದಿಂದ ಮೂರು ಸಭೆಗಳು ನಡೆದಿದ್ದು, ಆ ಸಭೆಗಳಲು ಹವವಾರು ಚರ್ಚೆಗಳು ನಡೆದು ಸಲಹೆಗಳನ್ನು ನೀಡಿದ್ದೀರಿ. ಅದರಂತೆ ಮತ್ತೆ ಈ ಸಭೆಯಲ್ಲೂ ಭಾಗವಹಿಸಿ ನೌಕರರ ಹಿತ ಕಾಯುವ ನಿಟ್ಟಿನಲ್ಲಿ ಸಲಹೆಗಳನ್ನು ಕೊಡಬೇಕು. ಹೀಗಾಗಿ ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ತಪ್ಪದೆ ಬನ್ನಿ ಎಂದು ಕೋರಿದ್ದಾರೆ.
ನೌಕರರ ಪ್ರಮುಖ ಬೇಡಿಕೆಗಳಾದ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಹಾಗೂ ಇದರ 24 ತಿಂಗಳ ಹಿಂಬಾಕಿ ಮತ್ತು 2020 ಜನವರಿ 1ರಿಂದ ಅನ್ವಯವಾಗುವಂತೆ ಆಗಿರುವ ಶೆ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬಗ್ಗೆಯೂ ಸದಸ್ಯರು ಚರ್ಚಿಸಲಿದ್ದು, ಸರ್ಕಾರದ ಗಮನವನ್ನು ಹೇಗೆ ಸೆಳೆಯಬೇಕು ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ಸದಸ್ಯರು ನೀಡಲಿದ್ದಾರೆ ಎನ್ನಲಾಗಿದೆ.
Related









