NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಟಿಕೆಟ್‌ ರಹಿತ ಮಹಿಳೆಯರಿಗೆ ದಂಡಹಾಕಿದರೆ ಅಮಾನತು ಶಿಕ್ಷೆಯಿಂದ ನಾಲ್ಕೂ ನಿಗಮದ ನೌಕರರು ಪಾರು!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ನಾಡಿನ ಮಹಿಳೆಯರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣ ಆರಂಭಿಸಿದ ದಿನದಿಂದ ಈವರೆಗೂ ನೂರಾರು ಚಾಲನಾ ಸಿಬ್ಬಂದಿಗಳು ಅಮಾನತು, ದಂಡ ಕಟ್ಟಿದ್ದಾರೆ. ಆದರೆ, ಟಿಕೆಟ್‌ ರಹಿತ ಪ್ರಯಾಣಿಕ ಮಹಿಳೆಯರಿಗೆ ಮಾತ್ರ ಯಾವುದೆ ದಂಡ ವಿಧಿಸಿಲ್ಲ.

ಇದು ತೆಲಂಗಾಣದಲ್ಲಿ ಇದೇ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಡಿ.9ರಿಂದ ತೆಲಂಗಾಣ ರಾಜ್ಯದ ಮಹಿಳೆಯರಿಗೂ ಟಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗಿದೆ. ಆದರೆ, ಅಲ್ಲಿನ ಪ್ರಯಾಣಿಕ ಮಹಿಳೆಯರು ಟಿಕೆಟ್‌ ರಹಿತ ಪ್ರಯಾಣ ಮಾಡಿದರೆ ಅವರಿಗೆ 500 ರೂ. ದಂಡ ವಿಧಿಸಲಾಗುವುದು ಎಂದು ನಿಗಮದ ಎಂಡಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಎಂಡಿ ಅವರ ರೀತಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಎಂಡಿ ಅನ್ಬುಕುಮಾರ್‌ ಅವರು ಕೂಡ ಈ ರೀತಿ ಆದೇಶ ಹೊರಡಿಸಿದ್ದರೆ, ಕೆಲ ಮಹಿಳಾ ಪ್ರಯಾಣಿಕರು ಮಾಡಿದ ತಪ್ಪಿಗೆ ಅಮಾನತು, ದಂಡದಂಥ ಶಿಕ್ಷೆ ಅನುಭವಿಸುವುದು ರಾಜ್ಯದ ಸಾರಿಗೆ ನೌಕರರಿಗೂ ತಪ್ಪುತ್ತಿತ್ತು.

ಆದರೆ, ಈ ರೀತಿಯ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡದೆ ಬರಿ ಸಾರಿಗೆ ನಿಗಮಗಳ ನೌಕರರ ಮೇಲೆ ಪ್ರತಿಯೊಂದನ್ನು ಹೊರಿಸಿ ಅವರನ್ನು ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಲ್ಲದೆ. ಅವರಿಗೆ ಅಮಾನತು, ದಂಡ ಕಟ್ಟುವ ಶಿಕ್ಷೆಯನ್ನು ವಿಧಿಸುತ್ತಿರವುದು ಎಷ್ಟರ ಮಟ್ಟಿಗೆ ಸರಿ. ಇನ್ನಾದರೂ ಈ ಬಗ್ಗೆ ಎಂಡಿ ಅನ್ಬುಕುಮಾರ್‌ ಅವರು ಪ್ರತಿಯೊಂದಕ್ಕೂ ಸರ್ಕಾರದ ಆಜ್ಞೆಗಾಗಿ ಕಾಯದೆ ತಮ್ಮ ಅಧಿಕಾರ ವ್ಯಾಪ್ತಿಗೆ ಬರುವ ಅಧಿಕಾರವನ್ನು ಚಲಾಯಿಸಿ ಪ್ರಯಾಣಿಕ ಮಹಿಳೆಯರ ಜವಾಬ್ದಾರಿ ಏನು ಎಂಬುದನ್ನು ತೋರಿಸಬೇಕಿದೆ.

ಈಗಾಗಾಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಲ್ಲಿ ನೌಕರರಿಗಷ್ಟೇ ನಿಯಮಗಳಡಿ ಶಿಕ್ಷೆ ವಿಧಿಸಲಾಗುತ್ತಿದೆ. ಆದರೆ, ತಪ್ಪು ಮಾಡಿದ ಪ್ರಯಾಣಿಕ ಮಹಿಳೆಯರಿಗೆ ಯಾವುದೆ ದಂಡ ವಿಧಿಸಿಲ್ಲ ಇದರಿಂದ ಬಹುತೇಕ ಮಹಿಳೆಯರು ನಿರ್ವಾಹಕರ ಜತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.

ಅಲ್ಲದೆ ಕಂಡಕ್ಟರ್‌ ಟಿಕೆಟ್‌ ತೆಗೆದುಕೊಳ್ಳಿ ಎಂದು ಹಲವಾರು ಬಾರಿ ಹೇಳಿದರೂ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ಕುಳಿತಿರುತ್ತಾರೆ. ಇನ್ನು ಕಂಡಕ್ಟರ್‌ಗಳೇ ಹತ್ತಿರ ಹೋಗಿ ನೀವು ಟಿಕೆಟ್‌ ತೆಗೆದುಕೊಂಡಿದ್ದಾರ ಎಂದು ಕೇಳಿದಾಗ ಇಲ್ಲ ಕೊಡಿ ಎನ್ನುತ್ತಾರೆ ಎಂಬ ಆರೋಪವು ಇದೆ. ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸುವ ಮಹಿಳಾ ಪ್ರಯಾಣಿಕರಿಗೆ ದಂಡದ ಬಿಸಿ ಮುಟ್ಟಿಸಿದರೆ ನಂತರ ಬಸ್‌ ಹತ್ತಿದ ಕೂಡಲೇ ಟಿಕೆಟ್‌ ತೆಗೆದುಕೊಳ್ಳುತ್ತಾರೆ.

ಹೀಗಾಗಿ ಇನ್ನಾದರ ನಿಗಮದ ತೆಲಂಗಾಣ ಟಿಎಸ್‌ಆರ್‌ಟಿಸಿ ಎಂಡಿ ಸಜ್ಜನರ್‌ ತೆಗೆದುಕೊಂಡ ರೀತಿ ಕರ್ನಾಟಕ ರಾಜ್ಯ ರಸ್ತೆಯ 4ನಿಗಮಗಳ ಎಂಡಿಗಳು ತೆಗೆದುಕೊಂಡರೆ, ಚಾಲನಾ ಸಿಬ್ಬಂದಿ ಮತ್ತು ಪ್ರಯಾಣಿಕ ಮಹಿಳೆಯರ ನಡುವೆ ಆಗುತ್ತಿರುವ ಘರ್ಷಣೆ ಮತ್ತು ಚಾಲನಾ ಸಿಬ್ಬಂದಿಗೆ ಆಗುತ್ತಿರುವ ಶಿಕ್ಷೆಯಿಂದ ಪರುಮಾಡಬಹುದಾಗಿದೆ.

ಈ ನಿಯಮ ಕರ್ನಾಟಕದಲ್ಲಿ ಈ ರೀತಿಯ ನಿಯಮ ಜಾರಿಯಾದರೆ ನಿರ್ವಾಹಕರ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಪ್ರಕರಣ ದಾಖಲಾಗದಿದ್ದರೆ ಅಮಾನತು ಮಾಡಲು ಸಾಧ್ಯವಿಲ್ಲ. ಅಮಾನತು ಆಗದಿದ್ದರೆ ಆ ನಿರ್ವಾಹಕ ಅಧಿಕಾರಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರುವುದಿಲ್ಲ. ಇದರಿಂದ ಸಂಸ್ಥೆಯ ನೌಕರರು ಮತ್ತು ಅಧಿಕಾರಿಗಳ ನಡುವೆ ಉತ್ತಮ ಬಾಂಧ್ಯವ ವೃದ್ಧಿಯಾಗುತ್ತದೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ