KSRTC ಜಂಟಿ ಕ್ರಿಯಾ ಸಮಿತಿ ಸಿಎಂಗೇ ಶಾಕ್ ಕೊಟ್ಟಿತು- ಸಿಎಂ ಜಂಟಿ ಕ್ರಿಯಾ ಸಮಿತಿ ಬುಡಕ್ಕೇ ಬಾಂಬ್ ಇಟ್ಟರು..!!
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಮುಖಂಡರನ್ನು ಸಿಎಂ ಸಿದ್ದರಾಮಯ್ಯ ಬುಗರಿ ರೀತಿ ಆಡಿಸುತ್ತಿದ್ದಾರೆಯೇ?
ಹೌದು! ಈ ರೀತಿ ಅನುಮಾನ ಹುಟ್ಟಿಕೊಳ್ಳಲು ಬಲವಾದ ಕಾರಣವು ಇದೆ. ಅದೇನೆಂದರೆ, ಕಳೆದ 2020 ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿರುವ ಶೇ.15ರಷ್ಟು ಮೂಲ ವೇತನ ಹೆಚ್ಚಳದ ಹಿಂಬಾಕಿಯನ್ನು ಕೊಡುವುದಕ್ಕೆ ಸರ್ಕಾರ ಮೀನಮೇಷ ಎಣಿಸುತ್ತಿದೆ.
ಈ ಬಗ್ಗೆ ಮುಖ್ಯವಾಗಿ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಸಿಎಂ, ಸಾರಿಗೆ ಮಂತ್ರಿ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನು ಹಲವಾರು ಬಾರಿ ಭೇಟಿ ಮಾಡಿ ವೇತನ ಹೆಚ್ಚಳದ ಹಿಂಬಾಕಿ ಕೊಡುವಂತೆ ಮನವಿ ಮಾಡಿದೆ.
ಆದರೆ, ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಮನವಿಯನ್ನು ಸ್ವೀಕರಿಸಿರುವ ಸಿಎಂ, ಸಾರಿಗೆ ಸಚಿವರು ಮತ್ತು ಎಂಡಿಗಳು ಈವರೆಗೂ ಹಿಂಬಾಕಿ ಕೊಡುವ ಬಗ್ಗೆ ಯಾವುದೇ ದೃಢ ನಿರ್ಧಾರ ತೆಗದುಕೊಂಡಿಲ್ಲ. ಹೀಗಾಗಿ ತೀವ್ರ ಅಸಮಾಧಾನಗೊಂಡ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸಿಎಂಗೆ ಎಚ್ಚರಿಕೆ ನೀಡುವ ಮೂಲಕ ಶಾಕ್ ಕೊಟ್ಟರು.
ಆದರೆ, ಸಿಎಂ ಸಿದ್ದರಾಮಯ್ಯ ಅವರು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಕೊಟ್ಟ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿ ಬಳಿಕ ಕ್ರಿಯಾಸಮಿತಿ ಪದಾಧಿಕಾರಿಗಳಿಗೆ ತಿರುಗೇಟು ಕೊಟ್ಟಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಅಷ್ಟಕ್ಕೂ ಸಿಎಂಗೆ ಜಂಟಿ ಕ್ರಿಯಾ ಸಮಿತಿಯವರು ಕೊಟ್ಟ ಎಚ್ಚರಿಕೆ ಏನು? ಸಿಎಂ ಕ್ರಿಯಾ ಸಮಿತಿ ಪದಾಧಿಕಾರಿಗಳ ಕೊಟ್ಟ ತಿರುಗೇಟು ಏನು?: ನೀವು ನೌಕರರಿಗೆ 2020ರ ಜನವರಿ 1ರಿಂದ ಅನ್ವಯಾಗುವಂತೆ ಜಾರಿಯಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾವು ಪ್ರತಿಭಟನೆ ಮಾಡಬೇಕಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು.
ಈ ಕ್ರಿಯಾ ಸಮಿತಿಯವರು ಕೊಟ್ಟ ಶಾಕ್‌ನಿಂದ ವಿಚಲಿತರಾದ ಸಿಎಂ ಬಳಿಕ ನೀವು ಪ್ರತಿಭಟನೆಗೆ ಹೋದರೆ ನಾನು ನಿಮ್ಮ ಸಂಘಟನೆಗಳ ಚುನಾವಣೆ ಮಾಡುವುದಕ್ಕೆ ಆದೇಶ ಹೊರಡಿಸಲು ತೀರ್ಮಾನ ಮಾಡುತ್ತೇನೆ. ನೀವು ಹೋಗಿ ಪ್ರತಿಭಟನೆ ಮಾಡಿ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ಕೊಟ್ಟ ಅಚ್ಚರಿಯ ಈ ಹೇಳಿಕೆಯಿಂದ ವಿಚಲಿತರಾದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಏನಪ್ಪ ಹಿಂಗಾಗಿ ಹೋಯಿತಲ್ಲ. ಸಿದ್ದರಾಮಯ್ಯ ಅವರು ನಮ್ಮ ಪರ ಇದ್ದಾರೆ ಅಂದುಕೊಂಡಿದ್ದೆವು ಆದರೆ, ಈ ರೀತಿ ಗೂಟ ಇಟ್ಟುಬಿಟ್ಟರಲ್ಲ ಎಂದು ಗಾಬರಿಗೊಂಡು ಸಿಎಂ ಅವರ ಬಳಿಯಿಂದ ಶಾಕ್‌ನಲ್ಲೇ ಓಡಿ ಬಂದಿದ್ದಾರೆ ಎಂಬ ಬಗ್ಗೆ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇಷ್ಟೆಲ್ಲ ಬೆಳವಣಿಗಗಳು ಆದ ಮೇಲೆ ಸಾರಿಗೆ ನೌಕರರಿಗೆ ಸರ್ಕಾರ ಕೂಡಲೇ ಹಿಂಬಾಕಿ ಕೊಡುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಇತ್ತ ಪ್ರತಿಭಟನೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಜಂಟಿ ಕ್ರಿಯಾ ಸಮಿತಿ ಮುಂದಾಗುವುದಿಲ್ಲ ಎಂಬುವುದು ಸ್ಪಷ್ಟವಾಗುತ್ತಿರುವಂತೆ ಕಂಡು ಬರುತ್ತಿದೆ.
ಇನ್ನು ಇತ್ತ ಸಮಾನ ಮನಸ್ಕರವ ವೇದಿಕೆ ಪದಾಧಿಕಾರಿಗಳು ಸರ್ಕಾರ ಮತ್ತು ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಏನು ಮಾಡುತ್ತಾರೋ ನೋಡೋಣ ಎಂಬುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಉಳಿದ ಸಂಘಟನೆಗಳಿಗೆ ಸಿಎಂ ಮತ್ತು ಸಾರಿಗೆ ಸಚಿವರ ಬಳಿ ಹೋಗಿ ಗತ್ತಿನಿಂದ ನೌಕರರ ಪರ ಮಾತನಾಡುವ ಧೈರ್ಯವಿಲ್ಲ.
ಒಟ್ಟಾರೆ, ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ಸಂಘಟನೆಗಳ ಚುನಾವಣೆ ನಡೆಯುವುದು ಬೇಕಿಲ್ಲ. ಇತ್ತ ಚುನಾವಣೆ ನಡೆಸಿ ಎಂದು ಕೇಳುತ್ತಿರುವ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳಿಗೆ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ದೊರಕಿಸಿಕೊಡುವುದಕ್ಕೆ ಆಗುತ್ತಿಲ್ಲ. ಅಂದರೆ ಇಲ್ಲಿ ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಸ್ಥಿತಿಯಲ್ಲಿ ಸಾರಿಗೆ ನೌಕರರು ಮತ್ತು ಅಧಿಕಾರಿಗಳು ಸಿಲುಕಿ ಒದ್ದಾಡುತ್ತಿದ್ದಾರೆ.