CrimeNEWSನಮ್ಮರಾಜ್ಯ

KSRTC ಮೆಜೆಸ್ಟಿಕ್‌: ರೂಟ್‌ಮೇಲೆ ಬಸ್‌ ಬಿಡಲು ಕಂಡಕ್ಟರ್‌ಗಳಿಂದ ಲಂಚ ಪಡೆಯುತ್ತಿರುವ ಟಿಸಿ – ಮೊಬೈಲ್‌ನಲ್ಲಿ ಸೆರೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಎಂದರೆ ಅದು ನಾಡಿನ ಜನತೆಗೂ ಹೆಮ್ಮೆಯ ಪ್ರತೀಕ. ಸಂಸ್ಥೆಗೆ ದೇಶದ ಸಾರಿಗೆ ವ್ಯವಸ್ಥೆಯಲ್ಲೇ ಒಂದು ವಿಶಿಷ್ಟ ಸ್ಥಾನ-ಮಾನ ಕೂಡ ಇದೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಗೂ ಪಾತ್ರವಾಗಿದೆ.

ಆದರೆ ಇಂಥ ಕೆಎಸ್‌ಆರ್‌ಟಿಸಿ ಗೌರವಕ್ಕೆ ಮಸಿ ಬಳಿಯಲೆಂದೇ ಕೆಲವಷ್ಟು ಸಿಬ್ಬಂದಿ ಲಂಚ, ಭ್ರಷ್ಟಾಚಾರ ಹಾಗೂ ದುಷ್ಟ ಮಾರ್ಗ ಅನುಸರಿಸುತ್ತಿರುವುದು ಸಂಸ್ಥೆಗೆ ಹಾಗೂ ನಾಡಿನ ಜನತೆಗೆ ಬಹುಳ ಮುಜುಗರ ತರಿಸುವ ವಿಷಯಯಾಗಿದೆ.

ಹೌದು! ಮೆಜೆಸ್ಟಿಕ್‌ನಲ್ಲಿ ಟಿಸಿಯಾಗಿರುವ ನಿಗಮದ ಸಿಬ್ಬಂದಿಯೊಬ್ಬ ಬಸ್‌ಗಳನ್ನು ಮಾರ್ಗಗಳ ಮೇಲೆ ಬಿಡಲು ನಿರ್ವಾಹಕರಿಂದ  ಲಂಚ ಪಡೆಯುತ್ತಿರುವ ವಿಡಿಯೋ ನೌಕರರ ವಾಟ್ಸ್‌ ಆಪ್‌ನಲ್ಲಿ ಹರಿದಾಡುತ್ತಿದೆ.

ಲೈನ್‌ ಚೆಕಿಂಗ್‌ ವೇಳೆ ತನಿಖಾ ಸಿಬ್ಬಂದಿ ನಿರ್ವಾಹಕರ ಬ್ಯಾಗ್‌ ಪಡೆದು ಹಣ ಲೆಕ್ಕಹಾಕಿದರೆ. ಆ ಬ್ಯಾಗ್‌ನಲ್ಲಿ ಟಿಕೆಟ್‌ ವಿತರಿಸಿರುವ ಮೌಲ್ಯಕ್ಕಿಂತ ಹೆಚ್ಚು ಹಣವಿದ್ದರೆ ಪ್ರಯಾಣಿಕರಿಗೆ ಮೋಸ ಮಾಡಿದ್ದೀಯ ಎಂದು ಕಾರಣ ಕೇಳಿ ದೋಷಾರೋಪಣ ಪತ್ರ ನೀಡುತ್ತಾರೆ.

ಅದರಂತೆ ಒಂದುವೇಳೆ ಬ್ಯಾಗ್‌ನಲ್ಲಿ ವಿತರಿಸಿರುವ ಟಿಕೆಟ್‌ ಮೌಲ್ಯಕ್ಕಿಂತ ಕಡಿಮೆ ಹಣವಿದ್ದರೂ ಸಹ ಸಂಸ್ಥೆಗೆ ಲಾಸ್‌ ಮಾಡಿದ್ದೀಯ ಎಂದು ಕಾರಣ ಕೇಳಿ ನಿರ್ವಾಹಕರಿಗೆ ದೋಷಾರೋಪಣ ಪತ್ರ ನೀಡುತ್ತಾರೆ. ಜತೆಗೆ ಈ ವಿಚಾರಣೆ ಆ ವಿಚಾರಣೆ ಎಂದು ಕೇಂದ್ರ ಕಚೇರಿಗೆ ಅಲೆಸುತ್ತಾರೆ. ಬಳಿಕ 3ರಿಂದ 6  ತಿಂಗಳ ವರೆಗೆ ಅಮಾನತು ಮಾಡುತ್ತಾರೆ.

ಆದರೆ, ಬಸ್‌ ನಿಲ್ದಾಣಗಳಲ್ಲಿ ಕೆಲ ಟಿಸಿಗಳಿಗೆ 5-10 ರೂ. ಕೊಡದೆ ಹೋದರೆ ಅವರು ಲಾಗ್‌ ಶೀಟ್‌ ಮೇಲೆ ಸಹಿ ಮಾಡುವುದೇ ಇಲ್ಲ. ಇದರಿಂದ ನಿರ್ವಾಹಕರು ವಿಧಿ ಇಲ್ಲದೆ 5-10 ರೂಪಾಯಿಯನ್ನು ಕೊಡಬೇಕು. ಅಂದರೆ ನಿರ್ವಾಹಕರಿಗೆ ಆ ಹಣ ಎಲ್ಲಿಂದ ಬರಬೇಕು. ಅವರು ಆಗ ವಾಮ ಮಾರ್ವದಿಂದ ಗಳಿಸಬೇಕಲ್ಲವೇ?

ಇದೇ 18/08/2024ರಂದು ಸುಮಾರು ರಾತ್ರಿ 11.50ರಲ್ಲಿ ಕೆಎಸ್‌ಆರ್‌ಟಿಸಿ ಬೆಂಗಳೂರು ಕೆಂಪೇಗೌಡ ನಿಲ್ದಾಣದ ಟರ್ಮಿನಲ್-01, ಅಂಕಣ:14ರಲ್ಲಿ ಸಂಚಾರ ನಿಯಂತ್ರಕರ ಡ್ಯೂಟಿ ಮಾಡುತ್ತಿದ್ದ ಟಿಸಿ ಒಬ್ಬರು ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಗಡೆ ಹೋಗುವ ವಾಹನಗಳ ನಿರ್ವಾಹಕರಿಗೆ ಅವರ ಡ್ಯೂಟಿ ಚಾರ್ಟಿಗೆ ಎಂಟ್ರಿ ಹಾಕಿ ಬಳಿಕ ಆ ನಿರ್ವಾಹಕರಿಂದ ಲಂಚದ ಹಣ ತೆಗೆದುಕೊಳ್ಳುತ್ತಿದ್ದಾರೆ. ಈ ದೃಶ್ಯ ಅಲ್ಲೇ ಇದ್ದ ಸಾಮಾಜಿಕ ಕಾರ್ಯಕರ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ ಎಂದು ವಾಟ್ಸ್‌ ಅಪ್‌ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ ನೌಕರರು.

ಸಂಕಷ್ಟದ ನಡುವೆಯೂ ಸಾರ್ವಜನಿಕರ ಸಾರಿಗೆಗೆ ಕಟಿಬದ್ಧವಾಗಿರುವ ಸಂಸ್ಥೆ ತನ್ನ ನೌಕರರಿಗೆ ಸಂಬಳ ಕೊಡಲ್ವಾ? ಪ್ರತಿ ನಿತ್ಯ ತನ್ನ ಸಹ ನೌಕರರಿಂದಲೇ ಲಂಚ ಪೀಕುವ ಇಂಥವರಿಂದ ಸಂಸ್ಥೆಗೆ ಕಳಂಕ ಅಂಟಿಕೊಳ್ಳುತ್ತದೆ ಹಾಗೂ ನಿಗಮದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಇತರೆ ಸಿಬ್ಬಂದಿಗಳಿಗೂ ಈ ಕಳಂಕ ಅಂಟಿಕೊಳ್ಳುತ್ತದೆ. ಆದ್ದರಿಂದ ಈ ಟಿಸಿ ವಿರುದ್ಧ ಸಂಸ್ಥೆಯ ಮೇಲಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...