NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಎಷ್ಟೇ ನೌಕರರ ವಜಾ, ವರ್ಗಾವಣೆ, ಅಮಾನತಾದರೂ ಆಯೋಗನೇ ಬೇಕು ಅಂತ ಅಚಲವಾಗಿ ನಿಂತಿರೋದು ಯಾಕೆ ಗೊತ್ತ..!?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಕಳೆದ 2021ರ ಏಪ್ರಿಲ್‌ನಲ್ಲಿ ಮುಸ್ಕರ ಮಾಡಿಸಿತು. ಆ ವೇಳೆ ತುಂಬಾ ಡ್ಯಾಮೇಜ್ ಮಾಡಿತು ಅಂತಾ ಹೇಳೋ ಸಂಘಟನೆ ನಾಯಕರೇ ನಿಮಗೊಂದು ವಿಷಯ ಗೊತ್ತಿದೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದ್ರೆ ಸುಮಾರು 200/250 ವರ್ಷಗಳ ಕಾಲ ನಮ್ಮ ಭಾರತದ ದೇಶದ ಅನೇಕ ನಾಯಕರು ಹೋರಾಟ ಮಾಡಿದರು. ಸಾಕಷ್ಟು ತ್ಯಾಗ, ಬಲಿದಾನಗಳ ಆದವು. ಆದರೆ, ಕಡೆಗೆ ನಮಗೆ ಸ್ವಾತಂತ್ರ್ಯ ಸಿಕ್ಕಿತು.

ಇದು ಪ್ರಸ್ತುತ ಇರುವ ಕಾಣುವ ಸತ್ಯ. ಹಾಗೆಯೇ ನಮ್ಮಲ್ಲೂ ಕೂಡ ಮುಷ್ಕರದ ವೇಳೆ ಆದ ಸಾಕಷ್ಟು ಪ್ರಕರಣಗಳನ್ನು ನಮ್ಮ ಆಡಳಿತ ಮಂಡಳಿ ಹಿಂಪಡೆದಿದೆ. ಇನ್ನು ಸ್ವಲ್ಪ ಪ್ರಕರಣ ಇದ್ದು ಅವು ಕೂಡ ವಾಪಸ್‌ ಆಗುತ್ತವೆ.

ಅಲ್ಲದೆ ಸತ್ಯಕ್ಕೆ ಯಾವಾಗಲು ಜಯ ಇದ್ದೆ ಇರುತ್ತದೆ. ಈಗ ನೀವು ಹೇಳ್ತೀರಾ ವೇತನ ಆಯೋಗ ಕೊಡಲ್ಲ ಅಂತಾ. ಸರ್ಕಾರ ಏನು ಬನ್ನಿ ಸಾರಿಗೆ ನೌಕರರೇ ನಿಮಗೇ ವೇತನ ಆಯೋಗ ಕೊಡುತ್ತೀವಿ ಅಂತಾ ಕೈಯಲ್ಲಿ ಹಿಡಿದುಕೊಂಡು ಕುಳಿತಿರುತ್ತಾ? ಇಲ್ಲಾ ಅದನ್ನು ನಾವು ಅಂಬೇಡ್ಕರ್ ಹಾಕಿ ಕೊಟ್ಟ ಹೋರಾಟದ ಹಾದಿಯಲ್ಲೇ ಪಡೆಯಬೇಕು.

ಕಡೆಗೆ ಒಂದು ಸಂದೇಶ ತಮಗೆ ತಮ್ಮ ಲೆಕ್ಕದ ಪ್ರಕಾರನೇ ಸುಮಾರು 10,000 ನೌಕರರ ವರ್ಗಾವಣೆ, ವಜಾ, ಅಮಾನತು ಮಾಡಿದರೂ ಕೂಡ ನಮ್ಮ ನೌಕರರು ವೇತನ ಆಯೋಗನೇ ಬೇಕು ಅಂತಾ ಅಚಲವಾಗಿ ನಿಂತಿರೋದು ಯಾಕೆ ಗೊತ್ತ? ಪ್ರತಿ 4 ವರ್ಷಕ್ಕೆ ಒಮ್ಮೆ ಸಾಯೋದು ಬೇಡ ಅಂತ. ಅಷ್ಟೇ ಅದು ನಿಮಗೆ ತಿಳಿಯಲಿ. ಸಾರಿಗೆ ನೌಕರರ ಮನದಾಳದ ಮಾತಿಗೆ ಮನ್ನಣೆ ನೀಡಿ ಸಾರಿಗೆ ನೌಕರರ ಕೂಟದಿಂದ ನೌಕರರಿಗೆ ನೇರವಾಗಿ ನಿಗಮಗಳಲ್ಲಿ ನಡೆಯುತ್ತಿರುವುದನ್ನು ತಿಳಿಸಿತ್ತಿರುವುದು. ಅಂದ್ರೆ ಪ್ರಾಮಾಣಿಕ ಕೂಟ.

ಈ ಮೇಲಿನ ಹೇಳಿಕೆಗೆ ಜಂಟಿ ಸಮಿತಿಯ ಕೆಲವರು ಕೌಂಟರ್‌ಕೊಟ್ಟಿದ್ದು ಏನುಗೊತ್ತಾ?: ಅರಬ್ ರಾಷ್ಟ್ರಗಳು ದಾಳಿ ಮಾಡಿ ಮತಾಂತರ, ಸಂಪತ್ತು ಲೂಟಿ ಮಾನಸಿಕ ಹಿಂಸೆ. ತರುಣಿಯರ ಹತ್ಯೆಗಳು, ಅತ್ಯಾಚಾರಗಳು ಧಾರ್ಮಿಕ ಸಂಸ್ಥೆಗಳ ನಾಶ ಮಾಡುವುದು ನಡೆಯಿತು. ಅದಕ್ಕಾಗಿ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯ ಎದೆಯಲ್ಲಿಯೂ ಕಿಚ್ಚು ಇತ್ತು.

ಅಂದು ತಮ್ಮ ಮನೆಯಲ್ಲಿನ ಊಟವನ್ನು ನಾವು ಬಿಟ್ಟು ದೇಶಕ್ಕಾಗಿ ಹೋರಾಡುವ ಯೋಧರಿಗೆ ಬೇಕಾದರೂ ಕೊಟ್ಟು ತಾವು ರಾತ್ರಿಯೆಲ್ಲ ನಿದ್ದೆಗೆಟ್ಟು ಅವರಿಗೆ ಮನೆಯಲ್ಲಿ ಮಲಗಲು ಜಾಗ ಕೊಡುತ್ತೇವೆಂದು ಹೇಳಿ ಜಾಗವನ್ನು ಕೊಟ್ಟರು.

ಆದರೆ, ಚಿನ್ನದ ತಟ್ಟೆಯಲ್ಲಿ ಊಟ ಮಾಡಿಸುತ್ತೇನೆ ಎಂದು ಬಂದು ಕಾರ್ಮಿಕರ ರಕ್ತವನ್ನು ತಿಗಣೆಯಂತೆ ಹೀರಲು ಯೋಜನೆ ರೂಪಿಸಿ ಬಂದ ಶುದ್ಧ ಒಬ್ಬ ಮನೆಹಾಳನಿಗೆ ನೀವು ಸ್ವಾತಂತ್ರ್ಯಕ್ಕೆ ಹೋರಾಡುತ್ತಿದ್ದ ರೀತಿ ಬಿಂಬಿಸುತ್ತಿರಲ್ಲ. ಏನನ್ನ ಬೇಕು ನಿಮ್ಮ ವಿಕೃತಿ ವಿಶ್ಲೇಷಣೆಗೆ.

ಸಂಸ್ಥೆಯೇನು ನಿಮ್ಮನ್ನು ಬಲವಂತದಿಂದ ಸರಪಳಿ ಕಟ್ಟಿ ಎಳೆದು ತಂದು ಜೀತದಾಳಗಳನ್ನಾಗಿ ಮಾಡಿದೆಯೇ. ಸಾರಿಗೆ ಸಂಸ್ಥೆಗಳಲ್ಲಿ ಕೆಲವು ನ್ಯೂನ್ಯತಗಳಿವೆ. ಅದರಲ್ಲಿ ಬದಲಾವಣೆ ತರಬೇಕು ಅಷ್ಟೇ.

ಇನ್ನು ನಮ್ಮದೇ ದೇಶ, ನಮ್ಮದೇ ಆಳ್ವಿಕೆ, ನಮ್ಮದೇ ಸಂಬಂಧಿಗಳು, ಅಧಿಕಾರಿಗಳು, ರಾಜಕೀಯದವರು, ಕಾರ್ಮಿಕರು ಎಲ್ಲರೂ. ಆದರೂ ನೌಕರರಿಗೆ ಸಿಗಬೇಕಾದ ಸೌಲಭ್ಯ ಕೊಡಿಸುವಲ್ಲಿ ಮಾತ್ರ ತಾರತಮ್ಯ ನೀತಿ ಏಕೆ? ಅದನ್ನು ಕೂಟ ಸರಿಸಡಿಸಲು ಸಾಧ್ಯವೇ? ಯಾವುದೇ ಕಾರಣಕ್ಕೂ ಆಗಲ್ಲ, ನಮ್ಮನ್ನು ಬಿಟ್ಟು ಯಾರಿಂದಲೂ ನೌಕರರಿಗೆ ನ್ಯಾಯ ಸಿಗಲ್ಲ ಎಂದು ಕೌಂಟರ್‌ ಕೊಟ್ಟಿದ್ದಾರೆ.

Leave a Reply

error: Content is protected !!
LATEST
BMTC ದಕ್ಷಿಣ ವಿಭಾಗದ 7 ಘಟಕಗಳಲ್ಲೂ ಚಾಲನಾ ಸಿಬ್ಬಂದಿಯೇ ಕಸಗುಡಿಸಬೇಕು- ಕಂಡು ಕಾಣದಂತೆ ವರ್ತಿಸುವ ಡಿಸಿ ಆಶಾಲತಾ ಮೇಡಂ! KKRTC: ಬಾಲ ಬಿಚ್ಚಿದರೇ ನಿಮ್ಮ ತಲೆಗಳನ್ನು ಉರುಳಿಸಬೇಕಾಗುತ್ತದೆ ಎಂದು ನೌಕರರಿಗೆ ಜೀವ ಬೇದರಿಕೆ ಹಾಕಿದ ಡಿಎಂ ಎತ್ತಂಗಡಿ ಸಿಎಂ ಸ್ವಕ್ಷೇತ್ರ ರಂಗಸಮುದ್ರ ಸ್ಮಶಾನ ಭೂಮಿ ಮೇಲು ಬಿದ್ದ ವಕ್ಫ್‌ ಕಣ್ಣು- ಪಹಣಿಯಲ್ಲಿ 2021-22ರಿಂದ ವಕ್ಫ್‌ ಬೋರ್ಡ್ ಹ... BMTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ-ಎಲ್ಲರನ್ನೂ ಅಭಿನಂದಿಸಿದ ಸಾರಿಗೆ ಸಚಿವರು, ಅಧಿಕಾರಿಗಳು KKRTC ವಿಜಯಪುರ ವಿಭಾಗದಲ್ಲಿ ಅಂದು ಡ್ಯೂಟಿಗೆ ಹತ್ತಿಸಿದ ಅಧಿಕಾರಿಗಳೇ ಇಂದು ಚಾಲಕನಿಗೆ ಮುಳುವಾಗಿ ನಿಂತಿದ್ದಾರಾ? ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ