Vijayapatha – ವಿಜಯಪಥ
Saturday, November 2, 2024
NEWSನಮ್ಮಜಿಲ್ಲೆನಮ್ಮರಾಜ್ಯ

KSRTC : ನೌಕರರಿಗೆ 22 ತಿಂಗಳ ಹಿಂದೆ ಸರ್ಕಾರ ಕೊಟ್ಟ ಭರವಸೆ ಇನ್ನೂ ಇಡೇರಿಲ್ಲ- ರಾಜ್ಯದಲ್ಲಿರೋದು ಭಂಡತನದ ಸರ್ಕಾರ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಕಳೆದ 2020ರ ಡಿಸೆಂಬರ್‌ನಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿದಾಗ ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತು ಅಂದು ಗೃಹ ಸಚಿವರಾಗಿದ್ದ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌. ಅಶೋಕ್‌ ಅವರು ನೌಕರರಿಗೆ ಕೊಟ್ಟ ಲಿಖಿತ ಭರವಸೆಗಳನ್ನು ಈವರೆಗೂ ಈಡೇರಿಸದೆ ಜಾರಿಕೊಳ್ಳುತ್ತಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇಂದು ಸ್ವತಃ ಮುಖ್ಯಮಂತ್ರಿಯೇ ಆಗಿರುವ ಬಸವರಾಜ ಬೊಮ್ಮಾಯಿ ಅವರು ಅಂದು ನೌಕರರಿಗೆ ಕೊಟ್ಟ ಲಿಖಿತ ಭರವಸೆಯನ್ನು ಈಡೇರಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದರೆ, ಇವರು ಕೊಟ್ಟ ಮಾತಿಗೆ ಬದ್ದರಾಗಿಲು ಅರ್ಹರೆ ಎಂಬ ಪ್ರಶ್ನೆ ಮೂಡುತ್ತಿದೆ.

ಇನ್ನು ಅಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸಾರಿಗೆ ನೌಕರರು ಮುಷ್ಕರ ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿ ಆ ಬಗ್ಗೆ 13.12.2020ರಂದು ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಕೆಲ ನಿರ್ಧಾರಗಳನ್ನು ತೆಗೆದುಕೊಂಡರು. ಅದಕ್ಕೆ ಇದೇ ಬೊಮ್ಮಾಯಿ, ಆರ್‌.ಅಶೋಕ್‌ ಕೂಡ ಒಪ್ಪಿಗೆ ಸೂಚಿಸಿದರು.

ಅಂದು ನೌಕರರು ಇಟ್ಟ ಬೇಡಿಕೆಗಳನ್ನು ಒಪ್ಪಿದ ಈ ತ್ರೀಮೂರ್ತಿಗಳು ಕೊಟ್ಟ ಭರವಸೆಗಳು : 1. ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ ವಿಮಾ ಯೋಜನೆಯನ್ನು ಅಳವಡಿಸಲು ತೀರ್ಮಾನ. 2. ಕೋವಿಡ್ -19 ಸೋಂಕು ತಗುಲಿದ ನಿಗಮದ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಸರ್ಕಾರಿ ನೌಕರರಿಗೆ ನೀಡಿದಂತೆ ರೂ.30 ಲಕ್ಷ ಪರಿಹಾರ ನೀಡಲಾಗುವುದು.

3. ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನಿಸಲಾಗಿದೆ. 4. ತರಬೇತಿಯಲ್ಲಿರುವ ನೌಕರರನ್ನು ತರಬೇತಿ ಅವಧಿಯನ್ನು 2 ವರ್ಷದಿಂದ 1 ವರ್ಷಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. 5. ನಿಗಮದಲ್ಲಿ ಎಚ್.ಆರ್.ಎಂ.ಎಸ್. (ಮಾನವ ಸಂಪನ್ಮೂ)ಲ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.

6. ಸಿಬ್ಬಂದಿಯು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆಯನ್ನು (ಬಾಟಾ) ಕೊಡಲು ತೀರ್ಮಾನಿಸಲಾಗಿದೆ. 7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ, ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗುವುದು. 8. ಎನ್.ಐ.ಎನ್‌.ಸಿ (ನಾಟ್‌ ಇಶ್ಯೂಡ್‌ ನಾಟ್ ಕಲೆಕ್ಷನ್): ಪದ್ಧತಿ ಬದಲಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು.

9. ವೇತನ ವಿಷಯಕ್ಕೆ ಸಂಬಂಧಿಸಿದಂತೆ. ತೀರ್ಮಾನಿಸುವ ಸಂದರ್ಭದಲ್ಲಿ ಸಾರಿಗೆ ನೌಕರರು ಹಲವಾರು ಬೇಡಿಕೆಗಳನ್ನು ಇಟ್ಟಿದ್ದು, ಅದರಲ್ಲಿ 6ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸುವಂತೆ ಕೋರಿದ್ದು, ಈ ಬಗ್ಗೆ ಸರ್ಕಾರದ ಆರ್ಥಿಕ ಅಂಶಗಳನ್ನು ಪರಿಗಣಿಸಿ ತೀರ್ಮಾನಿಸಲಾಗುವುದು.

ಈ ತೀರ್ಮಾನವನ್ನು ಕಳೆದ 2020 ಡಿಸೆಂಬರ್‌ 13ರಂದು ತೆಗೆದುಕೊಂಡ ಸರ್ಕಾರ ಈವರೆಗೂ ಅಗವುಗಳನ್ನು ಈಡೇರಲು ಮುಂದಾಗಿಲ್ಲ. ಅಂದರೆ ಸರಿ ಸುಮಾರು 22 ತಿಂಗಳುಗಳು ಕಳೆದರೂ ಮೌನವಾಗಿರುವುದು ಏತಕ್ಕೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಎಂಬುವುದು ಇದೆಯೇ ಎಂಬ ಅನುಮಾನ ಕೂಡ ಹುಟ್ಟಿಕೊಳ್ಳುತ್ತಿದೆ.

ಇಂಥ ಸರ್ಕಾರ ನಮಗೆ ಬೇಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಜೆಗಳಿಂದಲೇ ಆರಿಸಿ ಬಂದಿರುವ ಈ ಸರ್ಕಾರ ( ಒಂದು ರೀತಿ ವಾಮಮಾರ್ಗದಲ್ಲಿ ಬಂದಿದೆ ಬಿಡಿ) ತನ್ನ ಅಂಗಸಂಸ್ಥೆಯ ನೌಕರರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದರೆ ಅಂದು ಭರವಸೆಗಳನ್ನು ಅದೂ ಲಿಖಿತ ರೂಪದಲ್ಲಿ ಏಕೆ ಕೊಡಬೇಕಿತ್ತು?

ರಾಜಕೀಯ, ಜನಪ್ರತಿನಿಧಿಗಳು ಎಂದರೆ ಭಂಡರು, ಸುಳ್ಳರು ಇರುವ ಕೂಪ. ನಿಷ್ಠಾವಂತರಿಗೆ ಇಲ್ಲಿ ಜಾಗವಿಲ್ಲ ಎಂಬುದನ್ನ ತೋರಿಸಲಿಕ್ಕೆ ಮತ್ತು ಅದನ್ನು ಸಾಬೀತುಪಡಿಸಲಿಕ್ಕೆ ನೌಕರರು ಕೇಳಿದ ಕೂಡಲೇ ಲಿಖಿತವಾಗಿ ಭರವಸೆ ಕೊಟ್ಟಿದೆಯೇ ಈ ಸರ್ಕಾರ.

ಇನ್ನು ಈ ಸರ್ಕಾರ ನಿಗಮಗೆ ಕೊಟ್ಟ ಭರವಸೆ ಈಡೇರಿಸುತ್ತಾ ಬಿಡಿ ಬಿಡಿ ಎಂದು ಎಐಟಿಯುಸಿ ಅಧ್ಯಕ್ಷರೇ ಹೀಯಾಳಿಸಿದ್ದಾರೆ. ಆದರೂ ಈ ಭಂಡ ಸರ್ಕಾರಕ್ಕೆ ಬುದ್ದಿ ಬಂದಿಲ್ಲ ಎಂದರೆ ನೌಕರರು ಹೋರಾಟ ಮಾಡದೆ ಇನ್ನೇನು ಮಾಡಬೇಕಿತ್ತು.

ಪ್ರಸ್ತುತ ಮತ್ತೊಮ್ಮೆ ನೌಕರರು ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ರಾಜ್ಯಾದ್ಯಂತ ಸೈಕಲ್‌ ಜಾಥಾ ನಡೆಸುತ್ತಿದ್ದು, ಅವರನ್ನು ಕರೆದು ಈಗಲಾದರೂ ಮಾತನಾಡಿ ಸಮಸ್ಯೆ ಬಗೆಹರಿಸಬಹುದಲ್ಲ. ಈಗಲೂ ಆ ಭಂಡತನ ಪ್ರದರ್ಶನ ಮಾಡುತ್ತಿರುವುದು ಸರ್ಕಾರಕ್ಕೆ ಮುಜುಗರವಾಗುತ್ತಿಲ್ಲವೇ…!? ಇನ್ನೆಷ್ಟು ನೌಕರರನ್ನು ಮತ್ತೆ ವಜಾ ಮಾಡಬೇಕು ಎಂದು ಕಾದು ಕುಳಿತಿದೆ ಈ ಸರ್ಕಾರ…?

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ