ಬೆಂಗಳೂರು: 01.01.2020 ರಿಂದ 28.02.2023 ರವರೆಗೆ ಸೇವೆಯಿಂದ ನಿವೃತ್ತಿ ಹೊಂದಿರುವ ಹಾಗೂ ಇತರೆ ಕಾರಣಗಳಿಂದ ಸೇವಾವಿಮುಕ್ತಿ ಹೊಂದಿರುವ ನೌಕರರಿಗೆ ಪರಿಷ್ಕೃತ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಇದೇ ಅ.19ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಾರಿಗೆ ಜಂಟಿ ಸಮಿತಿ ತಿಳಿಸಿದ್ದು, ಅಲ್ಲದೆ ನಿವೃತ್ತ ನೌಕರರಿಗೆ ವೇತನ ಪರಿಷ್ಕರಣೆಗೆ ಸೂಕ್ತವಾದ ಆದೇಶವನ್ನು ಕೂಡಲೇ ಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದೆ.
ಜಂಟಿ ಕ್ರಿಯಾ ಸಮಿತಿ ಎಂಡಿ ಅವರಿಗೆ ನಿನ್ನೆ ಅ.10ರಂದು ಸಲ್ಲಿಸಿರುವ ಮನವಿಯಲ್ಲಿ ಇಟ್ಟಿರುವ ಬೇಡಿಕೆ ಏನು ಎಂದರೆ, ರಾಜ್ಯ ಸರ್ಕಾರ 17,03.2023 ರಂದು ಹೊರಡಿಸಿರುವ ಆದೇಶದ ಮೇರೆಗೆ (ಟಿಡಿ 12 ಟಿಸಿಬಿ 2023, ಬೆಂಗಳೂರು ದಿನಾಂಕ 17.03.2023) ತಾವು ಎಲ್ಲ ನೌಕರರಿಗೂ 31.12.2019 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇಕಡಾ 15ರಂತೆ ಹೆಚ್ಚಿಸಿ ಅದರಂತೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಿ 01.03.2023 ರಿಂದ ಜಾರಿಗೊಳಿಸಲು ತಾವು ಆದೇಶ ನೀಡಿರುತ್ತೀರಿ, ಅಂದರೆ ಈ ಎಲ್ಲ ನೌಕರರಿಗೂ ಕಾಲಕಾಲಕ್ಕೆ ಬರುತ್ತಿದ್ದ ವಾರ್ಷಿಕ ವೇತನ ಬಡ್ತಿಯನ್ನು (Increment) ಕೊಟ್ಟು ಸ್ಥಿರೀಕರಣ (Fixation) ಸೌಲಭ್ಯದೊಂದಿಗೆ ಹೊಸ ವೇತನ ಶ್ರೇಣಿಗೆ ತಂದಿರುವುದು ತಮಗೆ ತಿಳಿದಿರುವ ವಿಷಯವಾಗಿದೆ.
01.01.2020 ರಿಂದ 28,02,2023 ರವರೆಗೆ ಹಲವಾರು ನೌಕರರು ನಾಲ್ಕೂ ರಾಜ್ಯ ಸಾರಿಗೆ ನಿಗಮಗಳಲ್ಲೂ ನಿವೃತ್ತಿ ಹೊಂದಿದ್ದಾರೆ. ಕೆಲವರು ಮೃತರಾಗಿದ್ದಾರೆ. ಇನ್ನು ಕೆಲವರೂ ಸ್ವಯಂ ನಿವೃತ್ತಿ ಹೊಂದಿರುತ್ತಾರೆ. ಹಾಗೂ ಕೆಲವರು ರಾಜೀನಾಮೆ ಕೊಟ್ಟಿರುತ್ತಾರೆ. ಈ ಎಲ್ಲ ನೌಕರರಿಗೂ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪರಿಷ್ಕರಣೆ ಆಗಿಲ್ಲ.
ಈ ಹಿಂದೆ ಸಾರಿಗೆ ನಿಗಮದಲ್ಲಿ ವೇತನ ಹೆಚ್ಚಳವಾದಾಗ ಈ ಎಲ್ಲ ವರ್ಗದ ನೌಕರರಿಗೂ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗದಿ ಮಾಡಲಾಗುತ್ತಿತ್ತು. ಇದರಿಂದ ಅಂತಹ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ದೊರಕುವ ವೇತನ ಹೆಚ್ಚಳ, ಅರಿಯರ್ಸ್ ಬಾಕಿ, ನಿವೃತ್ತಿಯ ಎಲ್ಲ ಸೌಲಭ್ಯಗಳು ದೊರೆಯುತ್ತಿತ್ತು.
ಈಗ ಕೇಂದ್ರ ಕಚೇರಿಯು ಸುತ್ತೋಲೆ ಸಂಖ್ಯೆ 16/2023 ದಿನಾಂಕ 28.03.2023 ರಂದು ಹೊರಡಿಸಿರುವ ಆದೇಶದಲ್ಲಿ ಈ ಅಂಶಗಳು ಕಂಡುಬರದೆ ಇರುವುದರಿಂದ ಸಹಸ್ರಾರು ನೌಕರರು ವೇತನ ಪರಿಷ್ಕರಣೆಯ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಈ ನೌಕರರಿಗೆ ಹೊಸ ಶ್ರೇಣಿಗಳಲ್ಲಿ 01.01.2020 ರಿಂದ ವೇತನ ಪರಿಷ್ಕರಿಸಿದರೆ ಅವರಿಗೆ ಬರಬೇಕಾದ ಗ್ರಾಚ್ಯುಟಿ ಹೆಚ್ಚಳ, ರಜಾ ನಗದೀಕರಣ ಹೆಚ್ಚಳದ ಇತ್ಯಾದಿ ಆರ್ಥಿಕ ಸೌಲಭ್ಯಗಳ ವ್ಯತ್ಯಾಸದ ಮೊತ್ತ ಬರುತ್ತದೆ.
21,09,2023 ರಂದು ಹಲವಾರು ನಿವೃತ್ತ ನೌಕರರ ಪರವಾಗಿ ನಮ್ಮ ಜಂಟಿ ಕ್ರಿಯಾ ಸಮಿತಿಯ ನಾಯಕರು ತಮ್ಮನ್ನು ಭೇಟಿ ಮಾಡಿ ಈ ನೌಕರರಿಗೆ ಆಗಿರುವ ನೋವನ್ನು ತಮಗೆ ತಿಳಿಸಿದ್ದಾರೆ. ಆದರೂ ಕೂಡ ಈವರೆಗೂ ಯಾವುದೇ ತೀರ್ಮಾನ ಆಗಿಲ್ಲದ ಕಾರಣ, ಸದರಿ ನೌಕರರು 19:10,2023 ಗುರುವಾರದಂದು ಬೆಳಗ್ಗೆ 11 ಗಂಟೆಯಿಂದ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದಾರೆ.
ಆದ್ದರಿಂದ ತಾವು ಅವರ ನೋವಿಗೆ ಸ್ಪಂದಿಸಿ, ಈ ವಿಷಯದಲ್ಲಿ ವೇತನ ಪರಿಷ್ಕರಣೆಗೆ ಸೂಕ್ತವಾದ ಆದೇಶವನ್ನು ಕೂಡಲೇ ಕೊಡಬೇಕೆಂದು ನಾವು ತಮ್ಮಲ್ಲಿ ವಿನಂತಿಸುತ್ತೇವೆ ಎಂದು ಜಂಟಿ ಕ್ರಿಯಾ ಸಮಿತಿಯ ಪ್ರಮುಖರು ಎಂಡಿ ಅವರಿಗೆ ಮನವಿ ಮಾಡಿದ್ದಾರೆ.
ಅಂದರೆ, ಒಂದು ದಿನದ ಧರಣಿ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳುತ್ತಿರುವವರು ಯಾರು? ಇಲ್ಲಿ ಸದರಿ ನೌಕರರು ಎಂದು ತಿಳಿಸಿದ್ದಾರೆ. ಆ ನೌಕರರು ಇದೇ ಅ.19ರಂದು ಧರಣಿ ನಡೆಸುವ ಬಗ್ಗೆ ಎಂದು ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ.
ಜತೆಗೆ ಈ ಬಗ್ಗೆ ನಿವೃತ್ತ ಕೆಲ ನೌಕರರನ್ನು ವಿಜಯಪಥ ಸಂಪರ್ಕಿಸಿದಾಗ ಈ ಧರಣಿ ಹಮ್ಮಿಕೊಂಡಿರುವ ವಿಷಯವೇ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಅಂದರೆ ಏನು 2020 ಜನರವರಿ 1ರಿಂದ 2023 ಫೆಬ್ರವರಿ 28ರವರೆಗೆ ನಿವೃತ್ತರಾಗಿದ್ದಾರೆಯೋ ಆ ನೌಕರರು ಅಧಿಕಾರಿಗಳೆಲ್ಲರನ್ನು ಒಂದೆಡೆ ಸೇರಿಸಿ ಚರ್ಚಿಸದೆ ಈ ನಿರ್ಧಾರ ತೆಗೆದುಕೊಂಡಿರುವ ನೌಕರರು ಯಾರು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಇನ್ನು ಜಂಟಿ ಕ್ರಿಯಾ ಸಮಿತಿಯಿಂದ ಈ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಲ್ಲಿಯೂ ತಿಳಿಸಿಲ್ಲ. ಇನ್ನು ಅಚ್ಚರಿಯ ವಿಷಯವೆಂದರೆ ಈ ಕಾಲವಧಿಯಲ್ಲಿ ಏನು ನಿವೃತ್ತರಾಗಿದ್ದಾರೋ ಆ ನೌಕರರು ಅಧಿಕಾರಿಗಳಿಗೆ ಬರಬೇಕಿರುವ ವೇತನ ಹಿಂಬಾಕಿನ್ನು ಕೊಡಬೇಕು ಎಂಬ ಒತ್ತಾಯ ಮಾಡುವ ಬದಲಿಗೆ ತಾವು ಅವರ ನೋವಿಗೆ ಸ್ಪಂದಿಸಿ, ಈ ವಿಷಯದಲ್ಲಿ ವೇತನ ಪರಿಷ್ಕರಣೆಗೆ ಸೂಕ್ತವಾದ ಆದೇಶವನ್ನು ಕೂಡಲೇ ಕೊಡಬೇಕು ಎಂದು ತಿಳಿಸಿದೆ ಜಂಟಿ ಸಮಿತಿ.
ಅಂದರೆ ಜಂಟಿ ಕ್ರಿಯಾ ಸಮಿತಿಯ ಉದ್ದೇಶವೇನು ನೌಕರರಿಗೆ ಕಾನೂನು ಬದ್ದವಾಗಿ ಬರಬೇಕಿರುವುದನ್ನು ಕೊಡಿ ಇಲ್ಲದಿದ್ದರೆ ಬಿಡಿ ಎಂಬ ನಿರ್ಧಾರ ನಿಮಗೆ ಬಿಟ್ಟಿದ್ದು ಎಂದು ಎಂಡಿ ಅವರಿಗೆ ಪರೋಕ್ಷವಾಗಿ ಹೇಳಲು ಹೊರಟಿದೆಯೋ? ಇಲ್ಲ ನೀವು ಅವರಿಗೆ ಕೂಡಬೇಕಿರುವ ವೇತನ ಹಿಂಬಾಕಿಯನ್ನು ಕೊಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೋ ಎಂಬ ಗೊಂದಲವಿದೆ.
ಇನ್ನು ಈ ರೀತಿ ನೌಕರರನ್ನು ಯಾಮಾರಿಕೊಂಡು ಬರುವುದನ್ನು ಬಿಟ್ಟು ನಮಗೆ ಬರಬೇಕಿರುವ ಎಲ್ಲ ಸೌಲಭ್ಯಗಳನ್ನು ಕೊಡಿಸಲು ಸಾಧ್ಯವಾದರೆ ಮುಂದೆ ಬನ್ನಿ ಇಲ್ಲದಿದ್ದರೆ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಈ ರೀತಿ ಯಾಮಾರಿಸುವ ಕೆಲಸ ಮಾಡಬೇಡಿ ಎಂದು ನಿವೃತ್ತ ನೌಕರರು ನೇರವಾಗಿಯೇ ಹೇಳಿದ್ದಾರೆ.