NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಮಹಿಳೆಯರ ಉಚಿತ ಟಿಕೆಟ್‌ ಕಳೆದುಕೊಂಡರೆ ನಿರ್ವಾಹಕರಿಗೆ ಪ್ರತಿ ಟಿಕೆಟ್‌ಗೆ 10 ರೂ. ದಂಡ ವಸೂಲಿ ಆದೇಶ !?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯಾರ‍್ರಿ ಅವನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮುಖ್ಯ ಸಂಚಾರಿ ವ್ಯವಸ್ಥಾಪಕನಾಗಿ ಸೇವೆ ಸಲ್ಲಿಸುತ್ತಿರುವವನು. ಸರ್ವಾಧಿಕಾರಿಯಂತೆ ನೌಕರರ ಮೇಲೆ ದಂಡ ಪ್ರಯೋಗ ಮಾಡುವ ಆದೇಶ ಹೊರಡಿಸಿ, ಒತ್ತಾಡದಲ್ಲಿ ಕೆಲಸ ನಿರ್ವಹಿಸುತ್ತಿರುವವರಿಗೆ ಇನ್ನಷ್ಟು ಕಿರುಕುಳ ಕೊಡುವುದಕ್ಕೆ ಮುಂದಾಗಿರುವವನು.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ವಿತರಿಸುವ ಪಿಂಕ್‌ ಬಣ್ಣದ ಟಿಕೆಟ್‌ಅನ್ನು ನಿರ್ವಾಹಕರು ಕಳೆದುಕೊಂಡರೆ ಅವರಿಗೆ ಪ್ರತಿ ಟಿಕೆಟ್‌ಗೆ 10 ರೂಪಾಯಿ ವಸೂಲಿ ಮಾಡುವ ಆದೇಶ ಹೊರಡಿಸಿದ್ದಾನೆ. ಈ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಟಿಕೆಟ್‌ ವಿತರಿಸುವ ಉಚಿತ ಟಿಕೆಟ್‌ ಕಳೆದುಕೊಳ್ಳುವ ನಿರ್ವಾಹಕರಿಗೆ ದಂಡ ಪ್ರಯೋಗ ಮಾಡುವುದಕ್ಕೆ ಆದೇಶ ಹೊರಡಿಸಿದಂತೆಯೇ ಟಿಕೆಟ್‌ನಲ್ಲಿರುವ ದೋಷವನ್ನು ಇವನು ಮೊದಲು ಸರಿಪಡಿಸಬೇಕು ಅಲ್ಲವೇ?

ಹೌದು! ನಿರ್ವಾಹಕರು ಮಹಿಳೆಯರಿಗೆ ಉಚಿತ ಟಿಕೆಟ್‌ ವಿತರಣೆ ಮಾಡುವ ವೇಳೆ ಯಂತ್ರ ಕೈಕೊಟ್ಟರೆ ಬಳಿಕ ಟಿಕೆಟ್‌ಗಳನ್ನು ಹಸ್ತಚಾಲಿತವಾಗಿ ನೀಡಬೇಕು (Tickets should be issued manually) ಅಂತ ಟಿಕೆಟ್‌ಗಳನ್ನು ಮುದ್ರಿಸಲಾಗಿದೆ. ಆದರೆ ಆ ಟಿಕೆಟ್‌ಗಳಲ್ಲಿ ….ಘಟಕ, …… ವಿಭಾಗ, …..ಅನುಸೂಚಿ ಎಂದು ಖಾಲಿ ಬಿಟ್ಟು ಮುದ್ರಿಸಲಾಗಿದೆ.

ಇನ್ನು ಎಲ್ಲಿಂದ… ಎಲ್ಲಿಗೆ…. ಪ್ರಯಾಣ ….. ರೂ. ಮಾತ್ರ ಎಂದು ಇದ್ದು ಕೆಳಗೆ ಮೊತ್ತ 00 ರೂ. ಎಂದು ಇದೆ. ಬಳಿಕ ದಿನಾಂಕ ನಿರ್ವಾಹಕರ ಸಹಿ.. ಹೀಗೆ ಪಿಂಕ್‌ ಟಿಕೆಟ್‌ ಮುದ್ರಿಸಲಾಗಿದೆ.

ಇನ್ನು ಇಲ್ಲಿ ನಿರ್ವಾಹಕ ಒಬ್ಬ ಮಹಿಳೆ ಒಂದು ಟಿಕೆಟ್‌ ಕೊಡುವುದಕ್ಕೆ ಎಷ್ಟು ಸಮಯ ವ್ಯರ್ಥವಾಗುತ್ತದೆ.. ಜತೆಗೆ ನಿರ್ವಾಹಕರಿಗೆ ಇದರಿಂದ ಎಷ್ಟು ಕೆಲಸದ ಹೊರೆ ಬೀಳುತ್ತದೆ ಎಂಬುದರ ಬಗ್ಗೆ ಯೋಚಿಸಿದ್ದಾರೆಯೇ ಈ ಮಹಾನುಭವನು? ಇಲ್ಲ.

ಅಂದರೆ ನಿಗಮದ ಘಟಕದಲ್ಲಿ ಹಸ್ತಚಾಲಿತವಾಗಿ ನೀಡುವ ಟಿಕೆಟ್‌ಗಳ ಮೇಲೆ ನಿರ್ವಾಹಕರಿಗೆ ಕೊಡುವ ಮೊದಲೇ ಘಟಕವನ್ನು ಸೂಚಿಸುವ ಸೀಲ್‌ ಹಾಕಿದರೆ ಅದು ಯಾವ ಡಿಪೋ ಎಂದು ಗೊತ್ತಾಗುತ್ತದೆ.

ಇನ್ನು ಎಲ್ಲಿಂದ ಎಲ್ಲಿಗೆ ಎಂಬುದರ ಬಗ್ಗೆ ಈಗಾಗಲೇ ಪುರುಷರಿಗೆ ವಿತರಿಸುವ ಟಿಕೆಟ್‌ಗಳಲ್ಲಿ ಇರುವಂತೆಯೇ 5, 10, 20, 40, 50, 100 .. ಹೀಗೆ ಹಣವನ್ನು ಸೂಚಿಸುವ ಟಿಕೆಟ್‌ನಂತೆಯೇ ಕೊಟ್ಟು ಕೆಳಗೆ ಮೊತ್ತ 00 ಎಂದು ತೋರಿಸಿದರೆ ನಿರ್ವಾಹಕರಿಗೆ ಒತ್ತಡ ಕಡಿಮೆ ಆಗುವುದಿಲ್ಲವೇ?

ಇನ್ನು ಇದಾವುದನ್ನು ಮಾಡದೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಈತ ಅಸಡ್ಡೆಯಿಂದ ಪಿಂಕ್‌ ಬಣ್ಣ ಟಿಕೆಟ್‌ ಪ್ರಿಂಟ್‌ ಮಾಡಿಸಿ ನಿರ್ವಾಹಕರಿಗೆ ಕೊಟ್ಟು ಒಂದು ವೇಳೆ ಅದು ಕಳೆದು ಹೋದರೆ ಅದಕ್ಕೆ ನಿರ್ವಾಹಕರಿಂದ ಪ್ರತಿ ಟಿಕೆಟ್‌ಗೆ 10 ರೂ. ದಂಡ ವಸೂಲಿ ಮಾಡುವಂತೆ ಆದೇಶ ಹೊರಡಿಸಿದ್ದಾನಲ್ಲ ಇವನೆ ಮಾನ ಮರ್ಯಾದೆ ಎಂಬುವುದು ಅಲ್ಪಸ್ವಲಪವಾದರು ಇದೆಯೇ? ಇನ್ನು ಈ ಮುಖ್ಯ ಸಂಚಾರ ವ್ಯವಸ್ಥಾಪಕನಿಗೆ ಇದನ್ನು ಗಮನಿಸಿದರೆ ಎಷ್ಟು ಬೇಜವಾದ್ಬಾರಿ ಇದೆ ಎಂಬುವುದು ಸ್ಪಷ್ಟವಾಗಿ ತೋರುತ್ತದೆ.

ಇನ್ನಾದರೂ ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕೆ ಈ ಬಗ್ಗೆ ಮೊದಲು ಗಮನ ಹರಿಸಿ. ಏಕೆಂದರೆ ನಿರ್ವಾಹಕರು ಉಚಿತ ಟಿಕೆಟ್‌ಗಳನ್ನು ಬೇರೆಯವರಿಗೆ ಹಣಕ್ಕಾಗಿ ಮಾರಿಕೊಳ್ಳುವುದಿಲ್ಲ. ಅದರಿಂದ ನಿರ್ವಾಹಕರಿಗೆ ಯಾವುದೇ ರೀತಿಯ ಆದಾಯ ಬರುವುದಿಲ್ಲ. ಅಂಥದ್ದರಲ್ಲಿ ದಂಡ ಪ್ರಯೋಗ ಮಾಡುವಂಥ ಆದೇಶ ಹೊರಡಿಸಿದ್ದೀರಲ್ಲ ನಿಮಗೆ ನಾಚಿಕೆ ಆಗುವುದಿಲ್ಲವೇ?

ಇನ್ನಾದರೂ ತಮ್ಮ ಆದೇಶವನ್ನು ಹಿಂಪಡೆದು ನಿಗಮದ ನೌಕರರಿಗೆ ಒತ್ತಡ ಕಡಿಮೆ ಆಗುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಿ. ಅವರು ಕೂಡ ನಿಮ್ಮಂತೆಯೇ ವೇತನಕ್ಕಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ. ಇದನ್ನು ಗಮನದಲ್ಲಿ ಇಟ್ಟುಕೊಂಡು ಪಿಂಕ್‌ ಬಣ್ಣದ ಟಿಕೆಟ್‌ಗಳಲ್ಲೂ ಹಣವನ್ನು ಸೂಚಿಸಿ ನಂತರ ಉಚಿತ ಎಂದು ನಮೋದಿಸುವ ಕೆಲಸವನ್ನು ಮೊದಲು ಮಾಡಿ ಸ್ವಾಮಿ.

ಇನ್ನು ಸರಳವಾಗಿ ಹೇಳಬೇಕು ಎಂದರೆ ಬಿಎಂಟಿಸಿಯಲ್ಲಿ ಇರುವಂತೆ ಟಿಕೆಟ್‌ಗಳ ಮೇಲೆ ಉಚಿತ ಎಂದು ನಮೂದಿಸಿ ವಿತರಿಸಲು ನಿರ್ವಾಹಕರಿಗೆ ಕೊಡಿ. ಹೀಗೆ ಮಾಡಿದರೆ ಯಾವುದೆ ಗೊಂದಲ ಮತ್ತು ಒತ್ತಡವಿಲ್ಲದೆ ಅವರು ಕರ್ತವ್ಯ ನಿರ್ವಹಸಿವುದಕ್ಕೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಹುಚ್ಚರಂತೆ ಮನಸ್ಸಿಗೆ ಬಂದರೀತಿ ನಡೆದುಕೊಳ್ಳುವುದು ನಿಮಗೆ ಶೋಭೆ ತರುವುದಿಲ್ಲ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ