ಶಿವಮೊಗ್ಗ: ಸಾಮಾನ್ಯವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳು ಮಾರ್ಗಮಧ್ಯೆ ಕಟ್ಟುನಿಲ್ಲುವುದನ್ನು ನೋಡಿದ್ದಾವೆ ಸ್ವತಃ ಅನುಭಗಿಸಿಯೂ ಇರುತ್ತೇವೆ. ಆದರೆ ಸಂಸ್ಥೆಯ ಬಸ್ ಡೀಸೆಲ್ ಖಾಲಿಯಾಗಿ ಮಾರ್ಗಮಧ್ಯೆ ನಿಂತಿರುವ ವಿಷಯನ್ನು ಬಹುತೇಕ ಕೇಳಿಯೇ ಇಲ್ಲ.
ಆದರೆ ಅಂತತ್ತೊಂದು ಘಟನೆ ಬುಧವಾರ ನಡೆದಿದೆದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಸರಿಯಾದ ಸಮಯಕ್ಕೆ ತಮ್ಮ ಕೆಲಸ ಕಾರ್ಯಗಳಿಗೆ ಹೋಗಲಾದೆ ಸಾರಿಗೆ ಸಿಬ್ಬಂದಿಗೆ ಹಿಡಿಶಾಪ ಹಾಕಿದ್ದಾರೆ.
ಹೌದು! ನಿನ್ನೆ ಶಿವಮೊಗ್ಗದಿಂದ ಕುಂದಾಪುರಕ್ಕೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸಿನ ಡೀಸೆಲ್ ಖಾಲಿಯಾದ ಪರಿಣಾಮ ರಸ್ತೆ ಮಧ್ಯೆ ನಿಂತ ಘಟನೆ ಶಿವಮೊಗ್ಗ ಜಿಲ್ಲೆಯ ಮಾಸ್ತಿಕಟ್ಟೆ ಬಳಿ ನಡೆದಿದೆ.
ಬುಧವಾರ ಸಂಜೆ 5.30 ರ ವೇಳೆಗೆ ಈ ಘಟನೆ ನಡೆದಿದ್ದು ಪ್ರಯಾಣಿಕರು ಬಸ್ಸಿನ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಅಲ್ಲದೆ ಮಾರ್ಗ ಮಧ್ಯೆ ನಿಂತ ಬಸ್ಸಿನಿಂದಾಗಿ ತುರ್ತು ಕಾರ್ಯಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಗಿದೆ.
ಬಳಿಕ ಸ್ಥಳೀಯರ ಸಹಾಯದಿಂದ ಬೇರೆ ಬಸ್ ಮೂಲಕ ಜನರು ಪ್ರಯಾಣಿಸಿದ್ದಾರೆ.
ಇನ್ನು ಈ ರೀತಿ ಅಗುವುದಕ್ಕೆ ಸಾಧ್ಯವಿಲ್ಲ ಏಕೆ ಈಗಾಗಿದೆ ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿ ಆಗಿರುವ ಪ್ರಮಾದಕ್ಕೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ.