NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನೌಕರರ ವೇತನ ಹಿಂಬಾಕಿಗಾಗಿ ಅಧಿವೇಶನದಲ್ಲಿ ಒತ್ತಡ ಹೇರಿ- ಅಶೋಕ್, ಎಚ್‌ಡಿಕೆಗೆ ನಿವೃತ್ತ ನೌಕರ ಮಾದಯ್ಯ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನಿವೃತ್ತ ನೌಕರರಿಗೆ ಬರಬೇಕಾದ ವೇತನ ಹೆಚ್ಚಳದ ಹಿಂಬಾಕಿ ಹಣವನ್ನು ಕೂಡಲೇ ಕೊಡುತ್ತೇವೆ ಎಂದು ಆದೇಶಿಸುವಂತೆ ಸರ್ಕಾರವನ್ನು ಅಧಿವೇಶನದಲ್ಲಿ ಆಗ್ರಹಿಸಬೇಕು ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಮತ್ತು ಮಾಜಿ ಮುಖ್ಯಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನಿವೃತ್ತ ನೌಕರ ಮಾದಯ್ಯ ಮನವಿ ಪತ್ರ ಮಾಡಿದ್ದಾರೆ.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 4ನಿಗಮಗಳಲ್ಲೂ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಬರಬೇಕಾದ ಹಿಂಬಾಕಿ ಹಣದ ಬಗ್ಗೆ, ವಿವರವಾಗಿ ನಿಮಗೆ ಈ ಮೂಲಕ ಮಾಹಿತಿ ನೀಡುತ್ತಿದ್ದು, ನಿಮಗೂ ಕೂಡ ನಿಗಮದ ಬಗ್ಗೆ ಎಲ್ಲ ಮಾಹಿತಿಯೂ ಇದೆ. ಏಕೆಂದರೆ ನೀವು ಕೂಡ ಸಾರಿಗೆ ಸಚಿವರಾಗಿದ್ದು, ಹಲವಾರು ಸಮಸ್ಯೆಗಳನ್ನು ಬಗೆಹರಿಸಿದ್ದೀರಿ.

ಹೀಗಾಗಿ ತಾವು ವಿಪಕ್ಷನಾಯಕರಾಗಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಸರ್ಕಾರಕ್ಕೆ ಈ ನಮ್ಮ ಬೇಡಿಕೆಗಳ ಬಗ್ಗೆ ಒತ್ತಾಯ ಹೇರಬೇಕಿದ್ದು, ನಮ್ಮ ಬೇಡಿಕೆಗಳೆಂದರೆ, 2018 ಏಪ್ರಿಲ್, ಮೇ, ಜೂನ್, ಜುಲೈ ತಿಂಗಳ ಡಿ.ಎ. ಮತ್ತು ಡಿಪಿಯ ವ್ಯತ್ಯಾಸ (ಡಿಫರೆನ್ಸ್) ಹಣವನ್ನು ಶೀಘ್ರ ಬಿಡುಗಡೆ ಮಾಡಬೇಕು.

2018-19ನೇ ಸಾಲಿನ ರಜೆ ನಗಧೀಕರಣವನ್ನು ಕೂಡಲೇ ವಿತರಿಸಲು ಕ್ರಮ ಕೈಗೊಳ್ಳಬೇಕು. 2020 ಜನವರಿಯಿಂದ ವೇತನ ಪರಿಷ್ಕರಣೆ ಹಿಂಬಾಕಿಯು ಎಲ್ಲರಿಗೂ ದೊರಕುವಂತೆ ಕ್ರಮವಹಿಸಬೇಕು. 2023 ಫೆಬ್ರವರಿಯಿಂದ ನಿವೃತ್ತರಿಗೆ ಬರಬೇಕಾದ ಪಿಎಫ್, ಗ್ರಾಚ್ಯುಟಿ ಎನ್ ಕ್ಯಾಶ್ಮೆಂಟ್ ಹಣವನ್ನು ವಿತರಿಸಲು ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಹಿರಿಯ ಚಾಲಕರು 25 ವರ್ಷ ಸೇವೆ ಸಲ್ಲಿಸಿದವರಿಗೆ ನೀಡುವ ವಿಶೇಷ ಭತ್ಯೆ ವ್ಯವಸ್ಥೆಯನ್ನು ಜಾರಿಗೊಳಿಸಬೇಖು. ಸೇವೆಯಲ್ಲಿದ್ದಾಗ ಕೊಡದಿರುವ ಸಮವಸ್ತ್ರ, ಶೂ, ಜರ್ಕಿನ್ ಮತ್ತು ಹೊಲಿಗೆ ಹಣವನ್ನು ನಿವೃತ್ತರಿಗೂ ಸಹ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ತಾವು ಆಗ್ರಹ ಪಡಿಸಬೇಕು ಎಂದು ತಮ್ಮಲ್ಲಿ ಒತ್ತಾಯ ಪೂರ್ವಕವಾಗಿ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದರಿಂದ ಸಂಸ್ಥೆಗೆ ಹೆಚ್ಚಿನ ಆದಾಯ ಬರುತ್ತಿದೆ. ಆದ್ದರಿಂದ ಕೆಎಸ್ಆರ್‌ಟಿಸಿಯ 4 ನಿಗಮಗಳು ಲಾಭದತ್ತ ಸಾಗುತ್ತಿವೆ ಎಂದು ಸಾರಿಗೆ ಮಂತ್ರಿಗಳು ಮತ್ತು ಸರ್ಕಾರದ ಇತರೆ ಪ್ರಮುಖರು ಸಾರ್ವಜನಿಕವಾಗಿ ಪ್ರಚಾರ ಮಾಡುತ್ತಿದ್ದಾರೆ.

ಶಕ್ತಿ ಯೋಜನೆ ಅನುಷ್ಠಾನಕ್ಕೆ ಬಂದಾಗಿನಿಂದ ಈವರೆಗೆ ಎಲ್ಲ ವಿಭಾಗಗಳಿಂದ ಮಹಿಳೆಯರಿಗೆ ವಿತರಿಸಿರುವ ಚೀಟಿ ಮೊತ್ತವೆಷ್ಟು? ಅದಕ್ಕೆ ಪರ್ಯಾಯವಾಗಿ ಸರ್ಕಾರ ಸಂಸ್ಥೆಗೆ ಕೊಟ್ರುಟಿರುವ ಹಣವೆಷ್ಟು? ಅದನ್ನು ಪ್ರಚುರ ಪಡಿಸಲು ತಾವುಗಳು ಸದನದಲ್ಲಿ ಒತ್ತಾಯಿಸಬೇಕು ಎಂದು ಕೋರುತ್ತಿದ್ದೇನೆ.

ಮತ್ತೊಮ್ಮೆ ನಮ್ಮ ನಿವೃತ್ತರಾದ ಮತ್ತು ಪ್ರಸ್ತುತ ಕರ್ತವ್ಯ ನಿವ್ಯಹಿಸುತ್ತಿರುವ ನೌಕರರಿಗೆ ಅಧಿಕಾರಿಗಳಿಗೆ ಬರಬೇಕಾದ ಎಲ್ಲ ಹಿಂಬಾಕಿ ಹಣವನ್ನು ಕೂಡಲೆ ವಿತರಿಸುವಂತೆ ಸರ್ಕಾರಕ್ಕೆ ಒತ್ತಡ ತರುವಂತೆ ತಮ್ಮಲ್ಲಿ ನಮ್ರತೆಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಸಮಸ್ತ ಸಾರಿಗೆ ನೌಕರರ ಪರವಾಗಿ ಮಾದಯ್ಯ ಮನವಿ ಸಲ್ಲಿಸಿದ್ದಾರೆ.

1 Comment

  • ತಮ್ಮದೇ ಸರ್ಕಾರದ ಕರ್ಮಕಾಂಡಗಳನ್ನು ತಾವೇ ಹೇಗೆ ಪ್ರಶ್ನೆ ಮಾಡುವರು

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು