NEWSನಮ್ಮರಾಜ್ಯಲೇಖನಗಳು

KSRTC: ಮುಷ್ಕರಕ್ಕೆ ಅಧಿಕಾರಿಗಳು ಬರಲ್ಲ –  ಇತ್ತ ಹೋರಾಡಿ ವೇತನ ಹೆಚ್ಚಿಸುವ ನೌಕರರಿಗೆ ಶಿಕ್ಷೆ ಕೊಡೋದು ಬಿಡಲ್ಲ..!!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ವೇತನ ಹೆಚ್ಚಳವಾಗಬೇಕು ಅದಾದ ಬಳಿಕ ಅರಿಯರ್ಸ್‌ ಕೊಡಬೇಕು ಎಂದರೆ ಹೋರಾಟ ಮಾಡುವುದು ನೌಕರರು. ಅದರ ಜತೆಗೆ ಅಮಾನತು, ವಜಾ, ಪೊಲೀಸ್‌ ಕೇಸ್‌, ವರ್ಗಾವಣೆ ಹೀಗೆ ಶಿಕ್ಷೆ ಅನುಭವಿಸುವುದ ಕೂಡ ಈ ನೌಕರರೆ.

ಅಂದರೆ ಅಧಿಕಾರಿಗಳಿಗೆ ಮಾತ್ರ ವೇತನ ಹೆಚ್ಚಳ ಬಳಿಕ ಆ ಹೆಚ್ಚಳದ ಅರಿಯರ್ಸ್‌ ಮಾತ್ರ ಬೇಕು. ಇನ್ನು ಇದಕ್ಕಾಗಿ ಹೋರಾಡಿದ ನೌಕರರನ್ನು ಈ ಅಧಿಕಾರಿಗಳೇ ತಮ್ಮ ಸರ್ಕಾರ ಅಥವಾ ಸಚಿವರ ಮುಂದೆ ಒಳ್ಳೆಯವರು ಎಂದು ತೋರಿಸಿಕೊಳ್ಳಲು ಹಲವು ನೌಕರರಿಗೆ ಶಿಕ್ಷೆ ನೀಡಿ ಅದನ್ನು ಸಾಧನೆ ಎಂಬಂತೆ ತೋರಿಸಿಕೊಳ್ಳುತ್ತಾರೆ.

ಇನ್ನು ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಈವರೆಗೂ ನಮಗೆ ವೇತನ ಹೆಚ್ಚಳ ಮಾಡಿ, ಆ ಬಳಿಕ ಅರಿಯರ್ಸ್‌ ಕೂಡಲೇ ಕೊಡಬೇಕು ಎಂದು ಎಂಡಿಗಳಿಗಾಗಲೀ ಅಥವಾ ಆಡಳಿತ ಮಂಡಳಿಗಾಗಲೀ ಇಲ್ಲ ಸರ್ಕಾರಕ್ಕಾಗಲಿ ಈವರೆಗೂ ಒಂದೇವೊಂದು ಮನವಿ ಪತ್ರವನ್ನು ನೀಡಿಲ್ಲ. ಆದರೆ, ನೌಕರರು ಮತ್ತವರ ಸಂಘಟನೆಗಳು ಮಾತ್ರ ನೂರಾರು ಮನವಿ ಪತ್ರಗಳನ್ನು ಸಲ್ಲಿಸುತ್ತಲೇ ಇವೆ.

2020ರ ಜನವರಿ 1ರಿಂದ ಹೆಚ್ಚಾಗಿರುವ ಶೇ.15ರಷ್ಟು ವೇತನ ಹೆಚ್ಚಳದ ಅರಿಯರ್ಸ್‌ ಈ ಅಧಿಕಾರಿಗಿಳಿಗೆ 5 ಲಕ್ಷದಿಂದ 15 ಲಕ್ಷ ರೂ.ಗಳರೆಗೆ ಸಿಗುತ್ತದೆ. ಆದರೆ ಇವರೇ ಮೌನವಾಗಿದ್ದಾರೆ ಎಂದರೆ 1-2 ಲಕ್ಷ ರೂ.ಗಳ ವರೆಗೆ ಅರಿಯರ್ಸ್‌ ಪಡೆದುಕೊಳ್ಳುವ ನೌಕರರು ಏಕೆ ಹೋರಾಟ ಮಾಡಬೇಕು? ಅಲ್ವ.

5-15 ಲಕ್ಷ ರೂ.ಗಳ ಅರಿಯರ್ಸ್‌ ಪಡೆದುಕೊಳ್ಳುವವರೆ ಈ ಬಗ್ಗೆ ಮೌನವಹಿಸಿರುವಾಗ ನೀವು ಹೋರಾಟಕ್ಕೆ ಇಳಿದು ವಜಾ, ಅಮಾನತು, ವರ್ಗಾವಣೆ ಮತ್ತು ಪೋಲಸ್‌ ಕೇಸ್‌ಗಳನ್ನು ಮೈಮೇಲೆ ಎಳೆದುಕೊಂಡು ನಿಮ್ಮ ಕುಟುಂಬವನ್ನು ಬೀದಿಗೆ ತರುವ ಈ ಹೋರಾಟ ನಿಮಗೆ ಬೇಕಾ? ಅಧಿಕಾರಿಗಳು ಹೋರಾಟ ಮುಂದಾದರೆ ಅವರೊಂದಿಗೆ ನೀವು ಕೈ ಜೋಡಿಸಿ. ಇಲ್ಲ ಅವರಿಗೆ ಆದಂತೆಯೇ ನಮಗೂ ಅಗುತ್ತದೆ ಎಂದು ನಿಮ್ಮ ಕೆಲಸವನ್ನು ನೀವು ಮಾಡಿ.

ದಶಕ ದಶಕಗಳಿಂದಲೂ ಇದೇ ನಡೆದುಕೊಂಡು ಬರುತ್ತಿರುವುದು. ಇತ್ತ ಅಗ್ರಿಮೆಂಟ್‌ ಸಮಯದಲ್ಲಿ ನೌಕರರ ಅಭಿಪ್ರಾಯ ಪಡೆಯದೆಯೇ ತಾವೇ ನೌಕರರು ಎಂಬಂತೆ ಸಾರಿಗೆ ಸಂಸ್ಥೆಗಳ ಎಂಡಿಗಳು ಮತ್ತು ಸಚಿವರ ಬಳಿ ನಮಗೆ ಶೇ. ಇಷ್ಟು ಕೊಡಬೇಕು, ಅದರ ಜತೆಗೆ ಅದು ಇದನ್ನು ಕೊಡಬೇಕು ಎಂದು ಚರ್ಚೆ ಮಾಡುವ ರೀತಿ ಕೆಲ ಸಂಘಟನೆಗಳ ಮುಖಂಡರೆನಿಸಿಕೊಂಡವರು ನಾಟಕವಾಡುತ್ತಾರೆ. ಬಳಿಕ ನಮ್ಮ ಬೇಡಿಕೆಗೆ ಸರ್ಕಾರ ಮತ್ತು ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ಹೋರಾಟಕ್ಕೆ ಕರೆ ನೀಡುತ್ತಾರೆ.

ಯಾವುದೇ ಮಾನ್ಯತೆ ಇಲ್ಲದ ಈ ಸಂಘಟನೆಗಳು ಕರೆ ನೀಡುವ ಹೋರಾಟಕ್ಕೆ ಈ ಅಧಿಕಾರಿಗಳಂತು ಬರುವುದೇ ಇಲ್ಲ. ಇನ್ನು ಬರುವುದು ನೌಕರರು. ಹೋಗಲಿ ನಮ್ಮ ಪರವಾಗಿ ಈ ನೌಕರರು ರಸ್ತೆಗಿಳಿದಿದ್ದಾರೆ ಅಂತ ಅಂದುಕೊಳ್ಳುತ್ತಾರೆಯೇ ಈ ಅಧಿಕಾರಿಗಳು. ಖಂಡಿತ ಇಲ್ಲ. ಇದರಿಂದ ನಮಗೇನು ಪ್ರಯೋಜನವಿಲ್ಲ ಇದು ನೌಕರರಿಗೆ ಲಾಭ ಎಂಬಂತೆ ವರ್ತಿಸಿ ಈ ನೌಕರರಿಗೆ ಪೊಲೀಸ್‌ ಕೇಸ್‌, ವಜಾ, ಅಮಾನತು ಮಾಡುತ್ತಾರೆ ಅತಿಬುದ್ಧಿವಂತ ಅಧಿಕಾರಿಗಳು.

ಇತ್ತ ಹೋರಾಟಕ್ಕೆ ಕರೆ ನೀಡಿ ಯಾವುದನ್ನು ಮಾಡಿಕೊಡದ ಈ ಸಂಘಟನೆಗಳು ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದೆ ಏಕಪಕ್ಷೀಯವಾಗಿ ನಿರ್ಧಾರತೆಗೆದುಕೊಂಡಿದೆ ಇದಕ್ಕೆ ನಮ್ಮ ವಿರೋಧವಿದೆ ಎಂದು ಕೊನೆಗೆ ಒಳ ಒಪ್ಪಂದ ಮಾಡಿಕೊಂಡು …. ಹೋರಾಟಕ್ಕೆ ಇಳಿದ ನೌಕರರು ಶಿಕ್ಷೆಗೊಳಗಾದರೂ ಇದಕ್ಕೂ ನಮಗು ಯಾವುದೇ ಸಂಬಂಧವಿಲ್ಲ ಎಂಬಂತೆ ಜಾರಿಕೊಳ್ಳುತ್ತವೆ.

ಹೋರಾಟಕ್ಕೆ ಇಳಿಯದೇ ಲಾಭ ಪಡೆಯುವ ಅಧಿಕಾರಿಗಳು: ಇನ್ನು ಹೋರಾಟದಿಂದಾಗಿ ವಜಾ, ಆಮಾನತು, ಪೊಲೀಸ್‌ ಕೇಸ್‌ ಹಾಕಿಸಿಕೊಂಡ ನೌಕರರು ಇತ್ತ ಕೆಲಸವು ಇಲ್ಲ, ಅತ್ತ ನ್ಯಾಯಾಲಯಗಳಿಗೂ ಅಲೆಯಬೇಕಾದ ಪರಿಸ್ಥಿತಿಗೆ ಸಿಲುಕಿಕೊಳ್ಳುತ್ತಾರೆ. ಈ ನಡುವೆ ಹೋರಾಟಕ್ಕೆ ಕರೆ ನೀಡಿದ ಸಂಘಟನೆಗಳ ಮುಖಂಡರ ಬಳಿ ಹೋದರೆ ನೀನು ಯಾವ ಸಂಘಟನೆಯವನು ಎಂದು ಪ್ರಶ್ನೆ ಮಾಡುತ್ತಾರೆ.

ಇಂಥ  ಸಂಘಟನೆಗಳು ಮತ್ತು ಅಧಿಕಾರಿಗಳ ಈ ನಡೆಯಿಂದ ಈಗಲೂ ಸಹ ಸಾರಿಗೆ ನೌಕರರ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಆದರೆ ಯಾವುದೇ ಹೋರಾಟವನ್ನು ಮಾಡದೆ 10-15 ಸಾವಿರ ವೇತನ ಹೆಚ್ಚಳದ ಲಾಭ ಪಡೆದು ಈ ಅಧಿಕಾರಿಗಳು ನೌಕರರ ಮೇಲೆಯೆ ದರ್ಪ ಮೆರೆಯುತ್ತಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು