NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಶಕ್ತಿ ಯೋಜನೆಗೆ ಶಕ್ತಿ ತುಂಬುವ ಭರದಲ್ಲಿ ಇತರ ಪ್ರಮುಖ ಯೋಜನೆಗಳಿಗೆ ಶೂನ್ಯ ಅನುದಾನ: ಇಕ್ಕಟ್ಟಿನಲ್ಲಿ ಸಾರಿಗೆ ನಿಗಮಗಳು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಚುನಾವಣೆ ಸಂದರ್ಭದಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸುವ ಸಲುವಾಗಿ ಪ್ರಥಮವಾಗಿ ಶಕ್ತಿ ಯೋಜನೆಯನ್ನು ಜಾರಿ ಮಾಡಿತ್ತು. ಇದರಿಂದ ಸಾಮಾನ್ಯ
ಸರ್ಕಾರಿ ಬಸ್‌ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ.

ಹೌದು! ಸರ್ಕಾರದ ಪ್ರಮುಖದ 5 ಗ್ಯಾರಂಟಿಗಳ ಪೈಕಿ ಇದು ಒಂದಾಗಿದೆ. ಆದರೆ ಈ ಯೋಜನೆ ಅನುಷ್ಠಾನದ ಉತ್ಸಾಹದಲ್ಲಿ ರಾಜ್ಯ ಸರ್ಕಾರ ಸಾರಿಗೆ ನಿಗಮಗಳ ಇತರ ಪ್ರಮುಖ ಯೋಜನೆಗಳನ್ನು ನಿರ್ಲಕ್ಷಿ ಸಿದೆಯೇ ಈ ಪ್ರಶ್ನೆ ಪ್ರಸ್ತುತ ಅನುಮಾನಮೂಡಿಸುವಂತಿದೆ.

‘ಶಕ್ತಿ ಯೋಜನೆ’ ಕಾಂಗ್ರೆಸ್ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿದ ಬಳಿಕ ಅನುಷ್ಠಾನ ಮಾಡಿದ ಮೊದಲ ಗ್ಯಾರಂಟಿ ಯೋಜನೆ. 2023-24ರ ಸಾಲಿನಲ್ಲಿ ಮಹತ್ವಕಾಂಕ್ಷೆಯ ಈ ಗ್ಯಾರಂಟಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಒಟ್ಟು 2,800 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದಾರೆ.

ಇನ್ನು ಜೂ.11ರಂದು ಆರಂಭವಾಗಿರುವ ಈ ಈ ಯೋಜನೆಗೆ ಆಗಸ್ಟ್‌ ವರೆಗೆ ಸರ್ಕಾರ ಒಟ್ಟು 490.74 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಶಕ್ತಿ ಸಾರಿಗೆ ನಿಗಮಗಳ ಆದ್ಯತೆಯ ಯೋಜನೆಯಾಗಿದೆ. ಇದನ್ನು ಕೇಂದ್ರೀಕರಿಸಿ ಸಾರಿಗೆ ನಿಗಮಗಳು ತನ್ನೆಲ್ಲ ಸಂಪನ್ಮೂಲವನ್ನು ಬಿಡುಗಡೆ ಮಾಡುತ್ತಿವೆ. ಆರ್ಥಿಕ ಸಂಕಷ್ಟದ ಮಧ್ಯೆಯೇ ಸಾರಿಗೆ ಇಲಾಖೆ ಶಕ್ತಿ ಯೋಜನೆಯನ್ನು ಅನುಷ್ಠಾನ ಮಾಡಿದೆ. ಆದರೆ, ಶಕ್ತಿಯ ಅಬ್ಬರದ ನಡುವೆಯೇ ಸಾರಿಗೆ ನಿಗಮಗಳ ಇತರ ಪ್ರಮುಖ ಯೋಜನೆಗಳು ನಿರ್ಲಕ್ಷ್ಯಕ್ಕೊಳಪಟ್ಟಿರುವುದು ಎದ್ದು ಕಾಣುತ್ತಿದೆ.

ಯಾವುದಕ್ಕೆಲ್ಲ ಶೂನ್ಯ ಅನುದಾನ: ಆಗಸ್ಟ್‌ವರೆಗಿನ ಕೆಡಿಪಿ ಪ್ರಗತಿ ವರದಿ ಪ್ರಕಾರ, “ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಹೆಚ್ಚಿನ ಆದ್ಯ ತೆ ನೀಡಿದೆ. ರಸ್ತೆ ಸಾರಿಗೆ ನಿಗಮಗಳ ಇತರ ಮಹತ್ವದ ಯೋಜನೆಗಳನ್ನು ಕಡೆಗಣಿಸಿರುವುದು ಸ್ಪಷ್ಟ. ಬಹುತೇಕ ಪ್ರಮುಖ ಜನೋಪಯೋಗಿ ಯೋಜನೆಗಳಿಗೆ ಸರ್ಕಾರ ಆರ್ಥಿಕ ವರ್ಷದ 5 ತಿಂಗಳು ಕಳೆದರೂ ಇನ್ನೂ ಹಣ ಬಿಡುಗಡೆಮಾಡಿಲ್ಲ.

ಇದಕ್ಕೆ ಹಣಕಾಸಿನ ಕೊರತೆ ಕಾರಣವೇ? ಎಂಬ ಅನುಮಾನ ಬಲವಾಗಿ ಮೂಡಿದೆ. ಸಾರಿಗೆ ನಿಗಮಗಳ 2023-24ರ ಸಾಲಿನಲ್ಲಿ ಒಟ್ಟು 4,961.95 ಕೋಟಿ ರೂ. ಅನುದಾನಹಂಚಿಕೆ ಮಾಡಲಾಗಿದೆ. ಈವರೆಗಿನ ಆರ್ಥಿಕ ಪ್ರಗತಿ ಕೇವಲ 6.61% ಮಾತ್ರ. ಸಾರಿಗೆ ಇಲಾಖೆಯಡಿ ಬರುವ ಪ್ರಮುಖ 12 ಯೋಜನೆ/ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ಈವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಈ ಯೋಜನೆಗಳಿಗೆ ಇತ್ತ ಯಾವುದೇ ವೆಚ್ಚವನ್ನೂ ತೋರಿಸಿಲ್ಲ. ಕಳೆದ ಬಾರಿ ಸಾರಿಗೆ ಇಲಾಖೆ ಆಗಸ್ಟ್ ವೇಳೆಗೆ 14.23% ಪ್ರಗತಿ ಸಾಧಿಸಿತ್ತು.

ಈ ಹಿಂದೆ ಬಹುತೇಕ ಎಲ್ಲ ಪ್ರಮುಖ ಯೋಜನೆಗಳಿಗೆ ಅನುದಾನ ಬಿಡುಗಡೆಮಾಡಲಾಗಿತ್ತು. ಕಳೆದ ಬಾರಿ, 2022-23ರ ಸಾಲಿನಲ್ಲಿ ಆಗಸ್ಟ್ ವರೆಗೆ ಈ ಎಲ್ಲ ಉಚಿತ ಬಸ್ ಪಾಸ್‌ ಯೋಜನೆಗಳಿಗೆ ಸರಾಸರಿ 15% ವರೆಗೆ ಅನುದಾನ ಬಿಡುಗಡೆಮಾಡಲಾಗಿತ್ತು.

ಕೆಡಿಪಿ ಪ್ರಗತಿ ಹೇಳುವುದೇನು?: ಈ ವರದಿ ಪ್ರಕಾರ, ಆಗಸ್ಟ್‌ವರೆಗೆ ಸಾರಿಗೆ ನಿಗಮಗಳಲ್ಲಿ ಜಾರಿಯಲ್ಲಿರುವ ಇತರ ಪ್ರಮುಖ ಉಚಿತ ಬಸ್ ಪಾಸ್ ಯೋಜನೆಗಳಿಗೆ ಅನುದಾನ ಬಿಡುಗಡೆಮಾಡಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಉಚಿತ ಬಸ್ ಪಾಸ್‌ಗಳಿಗೆ 58 ಲಕ್ಷ ರೂ. ಅನುದಾನ ಹಂಚಿಕೆಮಾಡಿದ್ದರೆ, ಆದರೆ, ಅನುದಾನ ಬಿಡುಗಡೆ ಶೂನ್ಯ. ಇನ್ನು ಅಂಧ ಪ್ರಯಾಣಿಕರ ಉಚಿತ ಪ್ರಯಾಣಕ್ಕೆ 27.18 ಕೋಟಿ ರೂ. ಹಂಚಿಕೆಮಾಡಿದ್ದರೆ, ಈವರೆಗೆ ಹಣ ಬಿಡುಗಡೆ ಮಾಡಿಲ್ಲ ಇದೂಕೂಡ ಶೂನ್ಯ.

ಅಂಗವಿಕಲರ ಉಚಿತ ಪ್ರಯಾಣಕ್ಕೆ 31.26 ಕೋಟಿ ರೂ. ಅನುದಾನ ಹಂಚಿಕೆಮಾಡಲಾಗಿದ್ದರೂ, ಆಗಸ್ಟ್‌ವರೆಗೆ ಅನುದಾನ ಬಿಡುಗಡೆ ಶೂನ್ಯ. ಇತ್ತ ಹಿರಿಯ ನಾಗರಿಕರಿಗೆ ನೀಡುವ ರಿಯಾಯಿತಿ ಬಸ್ ಪ್ರಯಾಣಕ್ಕಾಗಿ 48.56 ಕೋಟಿ ರೂ. ಅನುದಾನ ಹಂಚಿಕೆಮಾಡಲಾಗಿದೆ. ಆದರೆ ಈವರೆಗೆ ಇದಕ್ಕೂ ನಯಪೈಸೆಯನ್ನು ಕೊಟ್ಟಿಲ್ಲ. ಅದೇ ರೀತಿ ಹುತಾತ್ಮ ಯೋಧರ ಮಕ್ಕಳ ಉಚಿತ ಪ್ರಯಾಣ ಹಾಗೂ ಎಂಡೋಸಲ್ಫಾನ್‌ ಪೀಡಿತರ ಉಚಿತ ಪ್ರಯಾಣಕ್ಕೆ ಈವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ.

ಕೆಡಿಪಿ ಪ್ರಗತಿ ವರದಿ ಅಂಕಿ ಅಂಶದಂತೆ ಸಾರಿಗೆ ಇಲಾಖೆಯ ವಾಯುಮಾಲಿನ್ಯ ನಿಯಂತ್ರಣ ಕ್ರಮಗಳ ಜಾರಿಗಾಗಿ 20 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಸಾರಿಗೆ ಕಲ್ಯಾಣ ಹಾಗೂ ರಸ್ತೆ ಸುರಕ್ಷತೆಗೆ 90 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆಟೋ ಹಾಗೂ ಕ್ಯಾಬ್ ಡ್ರೈವರ್ ಮಕ್ಕಳ ಸ್ಕಾಲರ್ ಶಿಫ್ಗಾಗಿ 17 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ ಆಗಸ್ಟ್ ವರೆಗೆ ಇದ್ಯಾವುದಕ್ಕೂ ಅನುದಾನ ಬಿಡುಗಡೆ ಮಾಡಿಲ್ಲ.

ವಿಶೇಷ ಬಂಡವಾಳ ನೆರವಿನ ರೂಪದಲ್ಲಿ ಈ ಬಾರಿ 500 ಕೋಟಿ ರೂ. ಹಂಚಿದ್ದರೂ, ಈ ಪೈಕಿ ಯಾವುದೇ ಹಣ ಬಿಡುಗಡೆಮಾಡಿಲ್ಲ. ಕಳೆದ 2022-23ರ ಸಾಲಿನಲ್ಲಿ ಈ ಎಲ್ಲ ಪ್ರಮುಖ ಯೋಜನೆಗಳಿಗೆ ಈ ಅವಧಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು.

ಸಾರಿಗೆ ನಿಗಮಗಳಿಗೆ ಬಿಡುಗಡೆ ಆಗಿರುವುದ್ದೆಷ್ಟು ?: ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ಈ ಬಾರಿ ಒಟ್ಟು 153.70 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಆದರೆ, ಆಗಸ್ಟ್‌ವರೆಗೆ ಬಿಡುಗಡೆಯಾಗಿದ್ದು ಕೇವಲ 14.41 ಕೋಟಿ ರೂ. ಮಾತ್ರ . ಇನ್ನು ಕೆಎಸ್ಆರ್ಟಿಸಿಗೆ ಒಟ್ಟು 229.67 ಕೋಟಿ ರೂ. ಹಂಚಿಕೆಯಾಗಿದ್ದರೆ, ಈವರೆಗೆ ಕೇವಲ 37.38 ಕೋಟಿ ರೂ. ಬಿಡುಗಡೆಯಾಗಿದೆ.

ಅದರಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಈ ಬಾರಿ ಒಟ್ಟು 109.88 ಕೋಟಿ ರೂ. ಹಂಚಿಕೆಮಾಡಲಾಗಿದೆ. ಈ ಪೈಕಿ ಆಗಸ್ಟ್ ವರೆಗೆ ಕೇವಲ 22.74 ಕೋಟಿ ರೂ. ಮಾತ್ರ ಬಿಡುಗಡೆಮಾಡಲಾಗಿದೆ. ಇನ್ನು ಬಿಎಂಟಿಸಿಗೆ ಒಟ್ಟು 717.2 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಈವರೆಗೆ ಬಿಡುಗಡೆಯಾಗಿದ್ದು ಕೇವಲ 114.33 ಕೋಟಿ ರೂ. ಮಾತ್ರ.

ಈ ಎಲ್ಲವನ್ನು ಗಮನಿಸಿದರೆ ಶಕ್ತಿಯೋಜನೆ ಶಕ್ತಿ ತುಂಬುವ ಭರದಲ್ಲಿ ರಾಜ್ಯ ಸರ್ಕಾರ ಇತರ ಪ್ರಮುಖ ಯೋಜನೆಗಳನ್ನೇ ಮರೆತಂತೆ ಕಾಣುತ್ತಿದೆ. ಇದರಿಂದ ಗೊತ್ತಾಗುತ್ತಿದೆ. ಹೆಚ್ಚಾಗಿ ಮಹಿಳೆಯರೆ ಪ್ರಯಾಣಿಸುತ್ತಿರುವುದರಿಂದ ಅವರ ಪ್ರಯಾಣದ ದರದ ಹಣದಲ್ಲೇ ಇದನ್ನೆಲ್ಲ ಸರಿದೂಗಿಸಿಬಿಡಿ ಎಂಬಂತೆ ಸರ್ಕಾರ ನಿಗಮಗಳನ್ನು ಇಕ್ಕಟ್ಟಿನ ಪರಿಸ್ಥಿತಿಗೆ ದೂಡಲು ಹೊರಟಿದೆ ಎಂಬುವುದು. ಹೋಗಲಿ ಮಹಿಳೆಯರು ಪ್ರಯಾಣಿಸಿದ ಟಿಕೆಟ್‌ ಮೌಲ್ಯದಷ್ಟು ಹಣವನ್ನಾದರೂ ಬಿಡುಗಡೆ ಮಾಡುತ್ತಿದೆಯೇ ಅದೂ ಇಲ್ಲ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು