NEWSನಮ್ಮಜಿಲ್ಲೆರಾಜಕೀಯ

MP ಚುನಾವಣೆ: 706 ಮಂದಿ ಮನೆಯಿಂದಲೇ ಮತದಾನ – ಜಿಲ್ಲಾಧಿಕಾರಿ ಡಾ. ಶಿವಶಂಕರ್‌

ಡಿಸಿ ಶಿವಶಂಕರ್‌
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ 85 ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರ ನೆರವಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 737 ಮತದಾರರ ಪೈಕಿ 706 ಮಂದಿ ಇದರ ಅವಕಾಶ ಪಡೆದುಕೊಂಡು ಮನೆಯಿಂದಲೇ ಮತದಾನ ಮಾಡಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್. ಶಿವಶಂಕರ  ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 120 ಮಂದಿ 85 ವರ್ಷ ತುಂಬಿದ ಹಿರಿಯರು ಹಾಗೂ 37 ವಿಕಲಚೇತನ ಮತದಾರರು ಸೇರಿ ಒಟ್ಟು 157 ಮತದಾರರ ಪೈಕಿ 147(ಶೇ.93.63%)ಮಂದಿ ಮತದಾರರು ಮನೆಯಿಂದಲೇ ಮತದಾನ ಮಾಡಿದ್ದಾರೆ.

179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 85 ಮಂದಿ 85 ವರ್ಷ ತುಂಬಿದ ಹಿರಿಯರು ಹಾಗೂ 24 ವಿಕಲಚೇತನ ಮತದಾರರು ಸೇರಿ ಒಟ್ಟು 109 ಮತದಾರರ ಪೈಕಿ 104(ಶೇ.95.41%)ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.

180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿನ 159 ಮಂದಿ 85 ವರ್ಷ ತುಂಬಿದ ಹಿರಿಯರು ಹಾಗೂ 107 ವಿಕಲಚೇತನನರು ಸೇರಿ ಒಟ್ಟು 266 ಮತದಾರರಲ್ಲಿ 257(96.62%) ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.

181-ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿನ 148 ಮಂದಿ 85 ವರ್ಷ ತುಂಬಿದ ಹಿರಿಯರು ಹಾಗೂ 57 ವಿಕಲಚೇತನ ಮತದಾರರು ಸೇರಿ ಒಟ್ಟು 205 ಮತದಾರರ ಪೈಕಿ 198(96.59%) ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ 512 ಮಂದಿ 85 ವರ್ಷ ತುಂಬಿದ ಹಿರಿಯ ನಾಗರಿಕರು ಹಾಗೂ 225 ವಿಕಲಚೇತನರ ಮತದಾರರು ಸೇರಿ ಒಟ್ಟು 737 ಮಂದಿ ಮತದಾರರ ಪೈಕಿ 706(95.79%) ಮತದಾರರು ಮನೆಯಿಂದಲೇ ಮತದಾನ ಸೌಲಭ್ಯವನ್ನು ಪಡೆದುಕೊಂಡು ಮತದಾನ ಮಾಡಿದ್ದಾರೆ.

737 ಮತದಾರರ ಪೈಕಿ 12 ಮಂದಿ ಮೃತಪಟ್ಟಿದ್ದು,12 ಮಂದಿ ಆಸ್ಪತ್ರೆಯಲ್ಲಿದ್ದು, 11 ಮಂದಿ ಮತದಾರರು ಅಲಭ್ಯವಿದ್ದರು. ಅಲಭ್ಯವಿದ್ದ ಮತದಾರರಿಗೆ ಉಳಿದ ದಿನ ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳು ಪುನಃ ಅವರ ಮನೆಗಳಿಗೆ ತೆರಳಿ ಮತದಾನ ಮಾಡಿಸಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ತಿಳಿಸಿದ್ದಾರೆ.

Leave a Reply

error: Content is protected !!
LATEST
ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಬಿಜೆಪಿಗೆ ಜೈ ಎಂದ ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮ : ಎಚ್‌ಡಿಕೆ ಪ್ರಜ್ವಲ್ ರೇವಣ್ಣನ ಪಕ್ಷದಿಂದ ಅಮಾನತು ಮಾಡಿ: ಎಚ್‌ಡಿಡಿಗೆ ಶಾಸಕ ಶರಣಗೌಡ ಕಂದಕೂರ ಒತ್ತಾಯ ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಮಾಜಿ ಸಿಎಂ ಎಚ್‌ಡಿಕೆ ಖ್ಯಾತ ಭೋಜಪುರಿ ನಟಿ ಅಮೃತಾ ಪಾಂಡೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು ಲೈಂಗಿಕ ಪ್ರಕರಣ: ಶಾಸಕ ಎಚ್‌.ಡಿ.ರೇವಣ್ಣ ಪುತ್ರ ಪ್ರಜ್ವಲ್ ವಿರುದ್ಧ ಎಸ್‌ಐಟಿ ತನಿಖೆ ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಇನ್ನಿಲ್ಲ ಕಾಲೇಜು ಸಹಪಾಠಿಗಳ ಮೇಲೆ ಹಲ್ಲೆ ಪ್ರಕರಣ: ಏ.28ರಂದು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ KKRTC: ಎಲ್ಲ ಸಿಬ್ಬಂದಿಗಳು ಸಮವಸ್ತ್ರ ಧರಿಸುವುದು ಕಡ್ಡಾಯ - ವಿಜಯಪುರ ಡಿಸಿ ಸ್ಪಷ್ಟನೆ ಕರ್ತವ್ಯ ನಿರತ ಸರ್ಕಾರಿ ಬಸ್‌ ನಿರ್ವಾಹಕರ ಮೇಲೆ ಹಲ್ಲೆ: ಮೂವರ ವಿರುದ್ಧ ದೂರು ದಾಖಲು