ಬೆಂಗಳೂರು/ಮೈಸೂರು: ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್ ಮೈಸೂರಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಒಂದೂವರೆ ವರ್ಷದ ಹಿಂದೆ ಪರಿಚಿತಳಾದ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ ವಂಚನೆ ಮಾಡಿದ್ದಾನೆ ಎಂದು ಬಸವನಗುಡಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಸಂಬಂಧ ಇಲ್ಲ ಇಲ್ಲ ಆಕೆ ನನಗೆ 15 ಲಕ್ಷ ರೂಪಾಯಿ ಕೊಡುವಂತೆ ಬೆಡಿಕೆ ಇಟ್ಟು ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಮೈಸೂರಿನಲ್ಲಿ ರಂಗನಾಥ್ ಪ್ರತಿದೂರು ನೀಡಿದ್ದಾರೆ. ಇಬ್ಬರ ದೂರುಗಳನ್ನು ಪಡೆದಿರುವ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ರಂಗನಾಥ್ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನ್ನ ಜೊತೆಗಿದ್ದ ಫೋಟೋ ಹಾಗೂ ಮಾತನಾಡಿರುವ ಆಡಿಯೋ ಇಟ್ಟುಕೊಂಡು ಆ ಯುವತಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾನೆ. ಅಲ್ಲದೆ ಯುವತಿ ನನ್ನಪತ್ನಿಗೆ ಫೋಟೋ ಮತ್ತು ಆಡಿಯೋ ಕಳುಹಿಸುವ ಬೆದರಿಕೆ ಹಾಕಿದ್ದು, 15 ಲಕ್ಷ ರೂ.ಗೂ ಬೇಡಿಕೆ ಇಟ್ಟಿದ್ದಾಳೆ ಎಂದು ಆರೋಪಿಸಿದ್ದಾನೆ.
ಇನ್ನು ಯುವತಿ ಮತ್ತು ಶ್ರೀನಿವಾಸ್ ಎಂಬವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇವರಿಬ್ಬರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ.
ಇತ್ತ ರಂಗನಾಥ್ ಮೈಸೂರಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಒಂದೂವರೆ ವರ್ಷದ ಹಿಂದೆ ನನಗೆ ಸ್ನೇಹಿತರ ಮೂಲಕ ಪರಿಚಯವಾದರು. ನಂತರ ನನ್ನ ಜೊತೆ ರಂಗನಾಥ್ ತೀವ್ರ ಸಲುಗೆ ಬೆಳೆಸಿಕೊಂಡರು, ಅದು ದೈಹಿಕವಾಗಿ ನಾವು ಸೇರುವವರೆಗೂ ಹೋಯಿತು ಎಂದು ಯುವತಿ ಆರೋಪಿಸಿದ್ದಾಳೆ.
42 ವರ್ಷದ ರಂಗನಾಥ್‌ಗೆ 24 ವರ್ಷದ ಯುವತಿಯ ಜೊತೆ ಪ್ರೇಮಾಂಕುರವಾಗಿದೆ. ಪಾರ್ಟಿ ಒಂದರಲ್ಲಿ ಆಕೆಯ ಪರಿಚಯ ಮಾಡಿಕೊಂಡ ರಂಗನಾಥ್ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಲೈಂಗಿಕ ಸಂಪರ್ಕವನ್ನು ಬೆಳೆಸಿದ್ದಾನೆ. ಇನ್ನು ಎಲ್ಲ ಮುಗಿದ ಮೇಲೆ ನಿನ್ನ ಮೇಲೆ ನನಗೆ ಪ್ರೀತಿ ಇಲ್ಲ ಎಂದು ಕಡೆಗಾಣಿಸಿದ್ದಾನೆ ಎಂದು ದೂರಲಾಗಿದೆ.
ಆದರೂ ಹಠ ಬಿಡದ ಯುವತಿ ಲೈಂಗಿಕ ಸಂಪರ್ಕ ಬೆಳೆಸಿದ್ದೀಯ ನೀನೆ ನನ್ನನ್ನು ಮದುವೆಯಾಗಬೆಕು ಎಂದು ರಂಗನಾಥ್‌ನನ್ನು ಪೀಡಿಸಿದ್ದಾಳೆ. ಅದಕ್ಕೆ ರಂಗನಾಥ್ ಆಕೆಯನ್ನು ಕಡೆಗಣಿಸಲು ಪ್ರಾರಂಭಿಸಿದ್ದು, ಮದುವೆ ಆಗಲ್ಲ ಏನು ಮಾಡಿಕೊಳ್ಳುತ್ತೀಯೋ ಮಾಡಿಕೋ ಹೋಗು ಎಂದಿದ್ದಾನೆ.
ನಂತರ ಯುವತಿ ಈ ವಿಚಾರವನ್ನು ಸಂಸದ ದೇವೇಂದ್ರಪ್ಪ ಅವರ ಗಮನಕ್ಕೆ ತಂದಿದ್ದಾರೆ. ಆದರೆ ದೇವೇಂದ್ರಪ್ಪ ಆಕೆಯ ವಿರುದ್ಧ ಗರಂ ಆಗಿದ್ದಾರೆ. ಬೇರೆ ದಾರಿ ಕಾಣದೆ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ರಂಗನಾಥ್ ವಿರುದ್ಧ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.