NEWSಕ್ರೀಡೆದೇಶ-ವಿದೇಶ

ವಿಶ್ವ​​ಕಪ್​ ಫೈನಲ್ ಪಂದ್ಯ ಗೆಲ್ಲುವ ತಂಡಕ್ಕೆ ವಿಶ್ವಕಪ್​ ಕೊಡುವರೆ ಪ್ರಧಾನಿ ಮೋದಿ..!!??

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇದೇ ನವೆಂಬರ್‌ 19ರ ಭಾನುವಾರ ನಡೆಯಲಿರುವ ವಿಶ್ವ​​ಕಪ್​ ಫೈನಲ್ ಪಂದ್ಯದ ಬಗ್ಗೆ ವಿಶ್ವದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕಪ್ ಗೆಲ್ಲುವ ಫೆವರಿಟ್ ಪಂದ್ಯ ಭಾರತವಾದರೂ ಈಗಾಗಲೇ ಹಲವು ಬಾರಿ ವಿಶ್ವಕಪ್​ ಗೆದ್ದು ದಾಖಲೆ ಬರೆದಿರುವ ಆಸಿಸ್​ ಮತ್ತೇ ಕಪ್​ಗೆ ಮುತ್ತಿಕ್ಕುವ ತವಕದಲ್ಲಿದೆ.

ಈಗಾಗಲೇ 2 ತಂಡಗಳು ನೆಟ್ಸ್​ನಲ್ಲಿ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದು, ರಣಕಣದಲ್ಲಿ ಗೆಲ್ಲಲ್ಲು ಬೇಕಾದ ರಣತಂತ್ರಗಾರಿಕೆಗಳನ್ನು ಹೆಣೆಯುತ್ತಿವೆ. ಈ ಎಲ್ಲದರ ನಡುವೆ ಫೈನಲ್ ಮ್ಯಾಚ್ ಗೆಲ್ಲುವ ತಂಡಕ್ಕೆ ವಿಶ್ವಕಪ್​ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಹಸ್ತಾಂತರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ​ ವರ್ಲ್ಡ್​​ಕಪ್​ ಫೈನಲ್​ ಕದನ ಸದ್ಯ ವಿಶ್ವದ ಕೇಂದ್ರ ಬಿಂದುವಾಗಿದೆ. ಪ್ರತಿಷ್ಠೆಯ ಟೂರ್ನಿಯಲ್ಲಿ ಲೀಗ್​, ಸೆಮಿಫೈನಲ್​ ಪಂದ್ಯಗಳೆಲ್ಲ ಮುಗಿದಿದ್ದು ಭಾನುವಾರ ಕ್ರಿಕೆಟ್​ ವರ್ಲ್ಡ್​ಕಪ್​ನ ಫೈನಲ್​ ಪಂದ್ಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ವರ್ಲ್ಡ್​​ಕಪ್​ ಪ್ರದಾನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ.

ಕ್ಯಾಪ್ಟನ್ ರೋಹಿತ್ ಶರ್ಮಾ: ಫೈನಲ್​ ಪಂದ್ಯಕ್ಕಾಗಿ ಈಗಾಗಲೇ ಸ್ಟೇಡಿಯಂ ಸಿದ್ಧವಾಗಿದ್ದು ಭಾರತ-ಆಸ್ಟ್ರೇಲಿಯಾ​ ನಡುವಿನ ಪಂದ್ಯ ವೀಕ್ಷಕರಿಗೆ ರಸದೌತಣ ನೀಡಲಿದೆ. ಕ್ಯಾಪ್ಟನ್​ ರೋಹಿತ್ ಶರ್ಮಾ ನೇತೃತ್ವದ ತಂಡ ತವರಿನಲ್ಲಿ ನಡೆಯುವ ಮ್ಯಾಚ್ ಗೆಲ್ಲುವ ನಿರೀಕ್ಷೆಯಲ್ಲಿದೆ.

ಅದರಂತೆ ಪ್ಯಾಟ್ ಕಮಿನ್ಸ್ ಪಡೆ ಸೌತ್ ಆಫ್ರಿಕಾವನ್ನು ಮನೆಗೆ ಕಳುಹಿಸಿ ಮತ್ತೆ ಫೈನಲ್​​ಗೆ ಎಂಟ್ರಿ ಕೊಟಿದ್ದು, ಕಪ್ ಗೆದ್ದುಕೊಂಡು ಹೋಗುವ ಭರವಸೆಯಲ್ಲಿದೆ. ಅದೇನೆ ಆದರೂ ಭಾನುವಾರ ನಡೆಯುವ ಮ್ಯಾಚ್ ಹಲವು ನೆನಪುಗಳಿಗೆ ಸಾಕ್ಷಿಯಾಗಿ ಉಳಿಯಲಿದ್ದು ಎಲ್ಲರಿಗೂ ಅವಿಸ್ಮರಣೀಯವಾಗಿರಲಿದೆ.

ರೋಹಿತ್ ಸಾರಥ್ಯದ ತಂಡ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಗೆದ್ದು ಫೈನಲ್​​ಗೆ ಎಂಟ್ರಿ ಕೊಟ್ಟಿದೆ. ಅದರಂತೆ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಹೊಡೆದುರುಳಿಸಿ ಆಸ್ಟ್ರೇಲಿಯಾ ತಂಡ ಫೈನಲ್​ಗೆ ಬಂದಿದೆ. ಹೀಗಾಗಿ ಫೈನಲ್ ಪಂದ್ಯ ಯಾವ ತಂಡ ಗೆಲ್ಲುತ್ತದೆ ಎಂಬ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Leave a Reply

error: Content is protected !!
LATEST
ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ ಜೈಲಲ್ಲೇ ದೇವರಾಜೇಗೌಡರ ಜೀವಕ್ಕೆ ಅಪಾಯವಿದೆ : ಸುರೇಶಗೌಡ ಆತಂಕ KSRTC ಬಸ್‌- ಕಾರು ನಡುವೆ ಭೀಕರ ಅಪಘಾತ: ಕಾರು ಚಾಲಕ ಸಾವು, ನಾಲ್ವರ ಸ್ಥಿತಿ ಗಂಭೀರ ಜಿಆರ್ ಫಾರ್ಮ್ ಹೌಸ್‌ನಲ್ಲಿ ರೇವ್​ ಪಾರ್ಟಿ: ನಟಿಯರು ಸೇರಿ 80ಕ್ಕೂ ಹೆಚ್ಚು ಬಂಧನ KSRTC: ಹೆದ್ದಾರಿಯಲ್ಲಿ ಕೆಟ್ಟುನಿಂತ ಬಸ್‌ಗಳು - ಕಿಮೀ ವರೆಗೆ ಟ್ರಾಫಿಕ್ ಜಾಮ್ KSRTC: ₹185 ಟಿಕೆಟ್‌ ಕೊಟ್ಟು ₹200 ಕೇಳಿದ ಕಂಡಕ್ಟರ್‌ - ದೂರು ಕೊಟ್ಟ ಪ್ರಯಾಣಿಕ ಧೈರ್ಯವಿದ್ದರೆ ಎಎಪಿ ಮುಖಂಡರೆಲ್ಲರನ್ನೂ ಜೈಲಿಗೆ ಹಾಕಿ: ಪ್ರಧಾನಿ ಮೋದಿಗೆ ಪೃಥ್ವಿ ರೆಡ್ಡಿ ಸವಾಲು ಪತ್ನಿ, ಮಗನಿಗೆ ಮಾಸಿಕ ಜೀವನಾಂಶ ಪಾವತಿಸದ ಪತಿ ಆಸ್ತಿ ಮುಟ್ಟುಗೋಲು: ಹೈಕೋರ್ಟ್ ಮಹತ್ವದ ಆದೇಶ ಬೆಳ್ಳಂಬೆಳಗ್ಗೆ ಸರಣಿ ಅಪಘಾತ: ಕಾರು ನಜ್ಜುಗುಜ್ಜು - ಪ್ರಯಾಣಿಕರು ಸೇಫ್ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ:‌ ಶೇ.25.5 ವೇತನ ಹೆಚ್ಚಳ ಬಹುತೇಕ ಖಚಿತ