NEWSವಿಡಿಯೋಸಂಸ್ಕೃತಿ

ಯುಗಾದಿ ಪ್ರಯುಕ್ತ ವಿಜೃಂಭಣೆಯಿಂದ ಜರುಗಿದ ಮಾದಪ್ಪನ ಮಹಾರಥೋತ್ಸವ

ವಿಜಯಪಥ ಸಮಗ್ರ ಸುದ್ದಿ

ಹನೂರು : ತಾಲೂಕಿನ ಸುಪ್ರಸಿದ್ಧ ಪುಣ್ಯಕ್ಷೇತ್ರ ಕೋಟ್ಯಂತರ ಭಕ್ತರ ಆರಾಧ್ಯ ದೈವ ಶ್ರೀಮಲೈಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಬುಧವಾರ ಬೆಳಗ್ಗೆ 9.50ರಿಂದ 10.30ರವರೆಗೆ ನಡೆಯುವ ಶುಭ ಲಗ್ನದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಸಮುದಾಯದ ಪುಟ್ಟ ಬಾಲೆಯರ ಬೆಲ್ಲದ ಆರತಿಯೊಂದಿಗೆ ಪವಾಡ ಪುರುಷ ಮಾದಪ್ಪನ ಮಹಾ ರಥೋತ್ಸವ ನಡೆಯಿಯತು.

ಇದಕ್ಕೂ ಮುನ್ನ ಸುಮಾರು 1 ಗಂಟೆ ಕಾಲ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ತೇರು ದೇಗುಲದ ಆವರಣದಲ್ಲಿ ಸಂಚರಿಸುತ್ತಿದ್ದಂತೆ ರಥೋತ್ಸವಕ್ಕೆ ಹರಕೆ ಹೊತ್ತ ಭಕ್ತಾದಿಗಳು ತಾವು ತಂದಿದ್ದ ಧವಸ-ಧಾನ್ಯ ಹಾಗೂ ಹಣ್ಣು -ಜವನ ಎಸೆದು ಭಕ್ತಿಯ ಪರಾಕಾಷ್ಠೆ ಮೆರೆದರು.

ಬಳಿಕ ತೇರಿನೊಂದಿಗೆ ಹುಲಿವಾಹನ, ಬಸವವಾಹನ ಉತ್ಸವ ಮೂರ್ತಿಗಳು, ತಾಳ ಮೇಳಗಳೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆಗೆ ಸಂಚರಿಸಲಾಯಿತು.

ರಥೋತ್ಸವ ಸಂದರ್ಭದಲ್ಲಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಕಳೆದ 3 ದಿನಗಳಿಂದ ಎಣ್ಣೆ ಮಜ್ಜನದೊಂದಿಗೆ ಪ್ರಾರಂಭವಾದ 3 ದಿನಗಳ ಯುಗಾದಿ ಜಾತ್ರಾ ಮಹೋತ್ಸವ ಮಹಾರಥೋತ್ಸವದ ಬಳಿಕ ಜಾತ್ರೆ ಪೂರ್ಣಗೊಂಡಿತು.
ವರದಿ: ಅಭಿಲಾಷ್‌ಗೌಡ

Leave a Reply

error: Content is protected !!
LATEST
ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ ಸಿಮೆಂಟ್ ಲಾರಿಗೆ ಕಾರು ಡಿಕ್ಕಿ: ತಂದೆ, 2ವರ್ಷದ ಮಗು ಮೃತ, ತಾಯಿ ಸ್ಥಿತಿ ಗಂಭೀರ KSRTC: ವಾರದೊಳಗೆ ವೇತನ ಹೆಚ್ಚಳದ 38ತಿಂಗಳ ಹಿಂಬಾಕಿ ನಿವೃತ್ತ ನೌಕರರ ಬ್ಯಾಂಕ್‌ ಖಾತೆಗೆ ಜಮಾ!