CrimeNEWSನಮ್ಮರಾಜ್ಯಸಿನಿಪಥ

ಮಲ್ಲೇಶ್ವರಂ: ಸ್ಪಂದನಾರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಗಣ್ಯರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸ್ಯಾಂಡಲ್​ವುಡ್​ನ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಲ್ಲೇಶ್ವರಂನ ನಿವಾಸದಲ್ಲಿ ಏರ್ಪಾಡು ಮಾಡಲಾಗಿದದ್ದು, ಈಗಾಗಲೇ ಸಂಬಂಧಿಕರು, ಸ್ನೇಹಿತರು, ಅಭಿಮಾನಿಗಳು ದರ್ಶನ ಪಡೆಯುತ್ತಿದ್ದಾರೆ.

ಇದೇ ವೇಳೆ ಹಿರಿಯ ನಟ ಶ್ರೀನಾಥ್, ಗಿರಿಜಾ ಲೋಕೇಶ್ ಹಾಗೂ ನಟ ರಾಘವೇಂದ್ರ ರಾಜ್​ಕುಮಾರ್, ಪುನೀತ್‌ರಾಜ್‌ ಕುಮಾರ್‌ ಪತ್ನಿ ಅಶ್ವಿನಿ ಸೇರಿದಂತೆ ನೂರಾರು ಗಣ್ಯರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ್ದಾರೆ.

ಈ ವೇಳೆ ಮಾತನಾಡಿದ ನಟ ರಾಘವೇಂದ್ರ ರಾಜ್​ಕುಮಾರ್, ಕೆಲವೊಂದು ಸಮಯದಲ್ಲಿ ಎಲ್ಲ ಸ್ತಬ್ಧವಾಗಿಬಿಡುತ್ತೆ. ಇದಕ್ಕೆ ಏನು ಮಾತನಾಡಬೇಕೆಂದು ಗೊತ್ತಾಗಲ್ಲ. ಹೋಗುವವರು ಹೊರಟು ಹೋಗ್ತಾರೆ. ಇರೋರ ಕಷ್ಟ ನೋಡೋಕೆ ಆಗಲ್ಲ. ಸ್ಪಂದನ ಇನ್ನಿಲ್ಲವೆಂದು ತಂದೆಗೆ ಹೇಳೋದಾ, ಪತಿ ರಾಘುಗೆ ಹೇಳೋದಾ ಗೊತ್ತಾಗುತ್ತಿಲ್ಲ.

ರಾಘು, ಅಪ್ಪು ಎಲ್ಲ ನಮ್ಮ ಮನೆಯಲ್ಲಿ ಬೆಳೆದವರು. ಇಂತಹ ಚಿಕ್ಕವರಿಗೆ ಹೀಗೆ ಆಗುತ್ತೆ ಎಂದರೆ ತಡೆದುಕೊಳ್ಳಲು ಆಗಲ್ಲ. ನನ್ನ ಹೆಸರೇ ಇರುವ ರಾಘುನನ್ನ ಮನೆಯಲ್ಲಿ ಸಣ್ಣರಾಘು ಎಂದರೆ, ನನ್ನನ್ನು ದೊಡ್ಡ ರಾಘು ಎಂದು ಕರೆಯುತ್ತಾರೆ. ಅವರನ್ನ ತಬ್ಬಿಕೊಂಡು ಏನು ಹೇಳಬೇಕು ಎಂದು ತೋಚಲಿಲ್ಲ ಎಂದು ರಾಘವೇಂದ್ರ ರಾಜ್​ಕುಮಾರ್​ ದುಃಖಿತರಾದರು.

ನಟಿ ಗಿರಿಜಾ ಲೋಕೇಶ್ ಹಾಗೂ ಶ್ರೀನಾಥ್: ನಟಿ ಗಿರಿಜಾ ಲೋಕೇಶ್, ಸ್ಪಂದನಾ ಅವರ ಮುಖದಲ್ಲಿದ್ದ ಕಳೆ ಒಂದಿಷ್ಟು ಮಾಸೇಯಿಲ್ಲ. ಇನ್ನು ಬದುಕೆ ಇದ್ದಾಳೆ ಅನಿಸುತ್ತೆ. ದೇವರು ಎಂತ ಕ್ರೂರಿ, ಒಂದು ಸುಂದರ ಸಂಸಾರವನ್ನು ಹಾಳು ಮಾಡಿಬಿಟ್ಟ. ನಮ್ಮಂತವರಿಗೆ ಅಂತಹ ಸಾವು ಬಂದರೇ ಮಲಗಿದ್ದಲ್ಲಿ ಸುಖವಾಗಿ ಹೋಗುತ್ತೀವಿ. ಇಷ್ಟು ಪುಟ್ಟ ಮಕ್ಕಳಿಗೆ ಹೀಗಾದರೆ ಏನು ಮಾಡುವುದು ಎಂದು ಕಣ್ಣೀರು ಹಾಕಿದರು.

ಸ್ಪಂದನಾ ಅವರ ತಂದೆ, ತಾಯಿಗೆ ದೇವರು ಆಕೆಯ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ. ನಮ್ಮ ರಾಘುನಾ, ಶೌರ್ಯನ ದೇವರು ಕಾಪಾಡಲಿ. ಇಂತಹ ಸಾವು ಯಾರಿಗೂ ಬರಬಾರದು ಎಂದು ಕಣ್ಣೀರು ಹಾಕಿದರು.

ಇನ್ನು ಹಿರಿಯ ನಟ ಶ್ರೀನಾಥ್ ಮಾತನಾಡಿ, ಆ ಮಗು ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ರಾಘುಗೆ ದುಃಖ ತಡೆದುಕೊಳ್ಳುವ ಶಕ್ತಿ ಆ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು