ಬೆಂಗಳೂರು: EPS ಪಿಂಚಿಣಿದಾರರ ಬೃಹತ್ ಪ್ರತಿಭಟನಾ ಸಭೆ ಇದೇ ಜ.12/ ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಟಿಸಿ & ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ರಾಷ್ಟ್ರೀಯ ಸಂಘರ್ಷ ಸಮಿತಿ ಮುಖಂಡರಾದ ಕಮಾಂಡರ್ ಅಶೋಕ್ ರಾವತ್, ವೀರೇಂದ್ರ ಸಿಂಗ್ ರಜಾವತ್ ಹಾಗೂ ರಮಾಕಾಂತ ನರಗುಂದ ಅವರು ಈ ಸಂದೇಶ ನೀಡಿದ್ದು, ದೇಶಾದ್ಯಂತ ಎಲ್ಲ ಇಪಿಎಸ್ ನಿವೃತ್ತರು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಅಂದು ಸಭೆ ಸೇರಿ, ಶಾಂತಿಯುತ ಪ್ರತಿಭಟನೆ ನಡೆಸಲಿದ್ದೇವೆ.
ಹೀಗಾಗಿ ಬೆಂಗಳೂರಿನ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲೂ ಪ್ರತಿಭಟನೆ ನಡೆಸಿ ಬಳಿಕ ಮನವಿ ಪತ್ರವನ್ನು ಪಿಎಫ್ ಅಧಿಕಾರಿಗಳಿಗೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಕೇಂದ್ರ ಉದ್ಯೋಗ ಹಾಗೂ ಕಾರ್ಮಿಕ ಸಚಿವರಿಗೆ (minister for labour & employment) ಮನವಿ ಪತ್ರವನ್ನು ಪ್ರತಿಭಟನೆ ಮೂಲಕ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ಸಲ್ಲಿಸಿಲು ನಮ್ಮ ಸಂಘಟನೆಯ ವತಿಯಿಂದ ಈ ಚಳವಳಿಯಲ್ಲಿ ಭಾಗವಹಿಸುವ ಸಂಬಂಧ ಮೊನ್ನೆ ಲಾಲ್‌ಬಾಗ್ ಆವರಣದಲ್ಲಿ ಜರುಗಿದ ಮಾಸಿಕ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪ್ರತಿಭಟನೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ನವದೆಹಲಿಯಲ್ಲಿ ಎನ್ಎಸಿ ಮುಖಂಡರು ಹಾಗೂ ಸಾವಿರಾರು EPS ನಿವೃತ್ತರು ನಡೆಸಿದ ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಅಮರಣಾಂತ ನಿರಶನ ಇವುಗಳನ್ನು ಕಂಡು, ಕೇಂದ್ರ ಸರ್ಕಾರದ ಉನ್ನತ ಸಚಿವರು ಹಾಗೂ ಅಧಿಕಾರಿಗಳು ನಮ್ಮ ಮುಖಂಡರ ನಿರಶನವನ್ನು ಕೈಬಿಡಿಸಿ, ಮಾತುಕತೆ ಮೂಲಕ EPS ನಿವೃತ್ತರ ಎಲ್ಲ ಮೂಲಭೂತ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಆ ಬಳಿಕ ಕೇಂದ್ರ ಸರ್ಕಾರದ ಇತ್ತೀಚಿನ ಬೆಳವಣಿಗೆ ನಿರಾಶಾದಾಯಕವಾಗಿದ್ದು, ನಮ್ಮ ಮುಖಂಡರಲ್ಲಿ ಬೇಸರ ಮೂಡಿಸಿದೆ. ಕಾಲಚಕ್ರ ಉರುಳುತ್ತಿದ್ದು, ಲಕ್ಷಾಂತರ ನಿವೃತ್ತರು ಈಗಾಗಲೇ ಕಾಲನ ಕರೆಗೆ ತಮ್ಮ ಜೀವ ಚೆಲ್ಲಿದ್ದಾರೆ. ನಿವೃತ್ತರು ಇನ್ನೆಷ್ಟು ದಿನ ತಮ್ಮ ಜೀವ ಹಿಡಿದಿಟ್ಟುಕೊಳ್ಳಲು ಸಾಧ್ಯ?.
ಇದನ್ನು ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು. ಇವರು ಈಗಲಾದರೂ ತಮ್ಮ ಜವಾಬ್ದಾರಿ ಅರಿತು, ಕಾರ್ಯ ತತ್ಪರರಾಗಿ ಕೂಡಲೇ ನಮ್ಮ ಮುಖಂಡರನ್ನು ಆಹ್ವಾನಿಸಿ, ಮಾತುಕತೆ ಮೂಲಕ ನಿವೃತ್ತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ, ಈ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ನಮ್ಮ ಮುಖಂಡರಿಗೆ ನೀಡಿರುವ ಭರವಸೆಯಂತೆ ನಡೆದುಕೊಳ್ಳಬೇಕು, ಯಾವುದೇ ಕಾರಣಕ್ಕೂ ನಮ್ಮ ಬೇಡಿಕೆಯ ಪ್ರಸ್ತಾವನೆಯನ್ನು ಮುಂದೂಡಿ, ಕಾಲ ವಿಳಂಬ ಮಾಡಲು ಅವಕಾಶವಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಲಾಗುವುದು. ನಿವೃತ್ತರ ಶಕ್ತಿ ಏನೆಂದು ಇಷ್ಟರಲ್ಲೇ ಮಾಡಿ ತೋರಿಸುತ್ತೇವೆ!!!. ಈ ಪ್ರತಿಭಟನಾ ಸಭೆಯನ್ನು ಎನ್ಎಸಿ ಹಾಗೂ ಬಿಎಂಟಿಸಿ, ಕೆಎಸ್ಆರ್‌ಟಿಸಿ ವತಿಯಿಂದ ಆಯೋಜಿಸಿದ್ದು, ಜಂಟಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.
ಈ ನಮ್ಮ ಎಲ್ಲಾ ಬೇಡಿಕೆಗಳಿಗೆ ಸಂಬಂಧಿಸಿದಂತೆ, ನಮ್ಮ ನಾಯಕರಿಗೆ ಶಕ್ತಿ ತುಂಬಲು, ಜ.12 ರಂದು ಬೆಳಗ್ಗೆ 11 ಗಂಟೆಗೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಶಾಂತಿಯುತ ಪ್ರತಿಭಟನಾ ಸಭೆಯಲ್ಲಿ ಎಲ್ಲ EPS ನಿವೃತ್ತರು ಭಾಗವಹಿಸಬೇಕೆಂದು ನಂಜುಂಡೇಗೌಡ ತಿಳಿಸಿದ್ದಾರೆ.