CrimeNEWSನಮ್ಮಜಿಲ್ಲೆನಮ್ಮರಾಜ್ಯ

ಅಪ್ರಾಪ್ತ ಆತ್ಮಹತ್ಯೆ: ಮಂಗಳ ಮುಖಿಯರ ಕಿರುಕುಳ ಆರೋಪ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಹುಣಸೂರು: ಮಂಗಳಮುಖಿಯರ ಕಿರುಕುಳಕ್ಕೆ ಮನನೊಂದ ಅಪ್ರಾಪ್ತ ಬಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ತಾಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.

ಕಿರಜಾಜಿಯ ನಿವಾಸಿ ರಾಹುಲ್ ಮೌರ್ಯ(17) ಮೃತ. ಈತನ ಸಾವಿಗೆ ಮಂಗಳಮುಖಿಯರ ಕಿರುಕುಳವೇ ಕಾರಣ ಪಾಲಕರು ಆರೋಪಿಸಿದ್ದು, ಘಟನೆ ಬಗ್ಗೆ ಸೂಕ್ತ ತೆನಿಖೆ ನಡೆಸುವಂತೆ ತಂದೆ ಕುಮಾರ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹುಣಸೂರಿನ ಕಿರಜಾಜಿ ಸರ್ಕಲ್ ಬಳಿ ಎಳೆನೀರು ವ್ಯಾಪಾರ ಮಾಡುತ್ತಿದ್ದ ರಾಹುಲ್ ಮೌರ್ಯ ಮಂಗಳಮುಖಿಯ ಜೊತೆ ಆಗಾಗ ಮಾತನಾಡುತ್ತ ಸ್ನೇಹ ಬೆಳೆಸಿದ್ದ. ನಾಲ್ಕು ತಿಂಗಳ ಹಿಂದೆ ಮೌರ್ಯ ನಾಪತ್ತೆಯಾಗಿದ್ದ. ಆದರೂ ಆಗಾಗ ತನ್ನ ತಾಯಿ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಆದರೆ ತಾನು ಇರುವ ಸ್ಥಳ ತಿಳಿಸಿಲ್ಲ.

ಜೂನ್ 21 ರಂದು ರಾಹುಲ್ ಮೌರ್ಯ ಹೆಜ್ಜೂರು ಗ್ರಾಮದ ತನ್ನ ದೊಡ್ಡಮ್ಮನ ಮನೆಗೆ ಹಿಂದಿರುಗಿದ್ದ. ಈ ಬೆನ್ನಲ್ಲೇ ಜೂ.23 ರಂದು ಕೆಲವು ಮಂಗಳಮುಖಿಯರು ಕಿರಜಾಜಿಯಲ್ಲಿರುವ ರಾಹುಲ್ ಮೌರ್ಯ ಮನೆಗೆ ಬಂದು ಕುಟುಂಬಸ್ಥರ ಜೊತೆ ಜಗಳವಾಡಿ ಕೂಗಾಡಿದ್ದಾರೆ.

ನಮ್ಮ ಹುಡುಗಿಯೊಬ್ಬಳನ್ನ ಕರೆದೊಯ್ದಿದ್ದಾನೆಂದು ಆರೋಪಿಸಿ ಕಿರುಚಾಡಿ ಹೋಗಿದ್ದರು. ಇತ್ತ ಅದೇ ಸಂಜೆ 5 ಗಂಟೆಗೆ ಹೆಜ್ಜೂರು ಗ್ರಾಮದ ಜಮೀನಿನಲ್ಲಿರುವ ಬಿದಿರು ಶೆಡ್‌ನಲ್ಲಿ ರಾಹುಲ್ ಮೌರ್ಯ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆಯಿಂದ ಮನನೊಂದು ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಂದೆ ಕುಮಾರ್ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ