ಬೆಂಗಳೂರು: ಇಪಿಎಸ್ ಪಿಂಚಣಿದಾರರ ಮಾಸಿಕ ಸಭೆ ಲಾಲ್‌ಬಾಗ್ ಆವರಣದಲ್ಲಿ ನಾಳೆ ( ಡಿ.3) ಆಯೋಜಿಸಲಾಗಿದೆ ಎಂದು ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಮಂಗಳವಾರ ನಗರದ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯಿಂದ ಜರುಗಿದ ಇಪಿಎಸ್ ಪಿಂಚಣಿದಾರರ ಪ್ರತಿಭಟನಾ ಸಭೆ ಅಭೂತಪೂರ್ವವಾಗಿದ್ದು, ಅಂದಿನ ಪ್ರತಿಭಟನೆಯ ಸಂಪೂರ್ಣ ಚಿತ್ರಣ ಹಾಗೂ ನಮ್ಮ ಮನವಿ ಪತ್ರವನ್ನು ಕೇಂದ್ರ ಸರ್ಕಾರದ ಸಚಿವರಿಗೆ ಕಳುಹಿಸಿಕೊಟ್ಟಿರುವ ಬಗ್ಗೆ PF ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಅಂದಿನ ಪ್ರತಿಭಟನಾ ಸಭೆ ಉನ್ನತ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಜರುಗಿದ್ದು, ಅವರು ಕೂಡ ನಮ್ಮ ವರದಿಯನ್ನು ಸರ್ಕಾರಕ್ಕೆ ನೀಡಿದ್ದಾರೆ ಎಂದು PF ಅಧಿಕಾರಿಗಳು ವಿವರಿಸಿದ್ದಾರೆ.
ಇನ್ನು ಡಿ.7ರಿಂದ ಮುಂದುವರಿದಂತೆ, ದೆಹಲಿಯ ರಾಮಲೀಲಾ ಮೈದಾನದಲ್ಲಿ ಡಿ.24ರವರೆಗೆ ಜರುಗುವ “ದಿಲ್ಲಿ ಚಲೋ” ಇಪಿಎಸ್ ಪಿಂಚಣಿದಾರರ ಹೋರಾಟದಲ್ಲಿ ಭಾಗವಹಿಸಲು ರಾಜ್ಯದಿಂದ ಹೀಗಾಗಲೇ ನೂರಾರು ಉತ್ಸಾಹಿ ಹಾಗೂ ಪಿಂಚಣಿ ಹೋರಾಟ ಯೋಧರು ತಮ್ಮ ಮುಂಗಡ ರೈಲ್ವೆ ಟಿಕೆಟ್ ಕಾಯ್ದಿರಿಸಿದ್ದು, ಡಿಸೆಂಬರ್ 3, 4 ಹಾಗೂ 5 ರಂದು ದೆಹಲಿಗೆ ಹೊರಡುವ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ.
ಚಳಿಗಾಲ ಪ್ರಾರಂಭವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹೊದಿಕೆ, ಔಷಧ, ಮಾತ್ರೆ ತಪ್ಪದೆ ತರಬೇಕು. ಜತೆಗೆ ರೈಲ್ವೆ ಟಿಕೆಟ್ ಹಾಗೂ ಆಧಾರ್ ಕಾರ್ಡ್ ಪ್ರತಿ ಕಡ್ಡಾಯವಾಗಿ ಇರಬೇಕು. ದೆಹಲಿಯಲ್ಲಿ ಸ್ವಯಂ ವಸತಿ ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಂಡಿದ್ದರೆ ಸರಿ, ಹೆಚ್ಚಿನ ಮಾಹಿತಿಗೆ ನಮ್ಮ ದೂರವಾಣಿ 7760990096, ಸುಬ್ಬಣ್ಣ-9902625797 ಅನಿಲ್ ಇನಾಮ್ ದಾರ್ -9341005563, ವೀರ ಕುಮಾರ್ ಗಡದ್-9845098854ಕ್ಕೆ ಸಂಪರ್ಕಿಸಬಹುದು ಎಂದು ನಂಜುಂಡೇಗೌಡ ತಿಳಿಸಿದ್ದಾರೆ.
ಇನ್ನು ಈಗಾಗಲೇ ನಮ್ಮ ಸಂಘಟನೆಯಿಂದ ಸಮಾವೇಶದಲ್ಲಿ ಭಾಗವಹಿಸುವ ಸದಸ್ಯರ ಪಟ್ಟಿ ಪ್ರಕಟಿಸಲಾಗಿದೆ. ಇತ್ತ ಕಮಾಂಡರ್ ಅಶೋಕ್ ರಾವತ್ ಹಾಗೂ ತಂಡದವರು ಸಭೆ ಸಮಾವೇಶಗಳನ್ನು ನಡೆಸುತ್ತಾ, ಇನ್ನೆರಡು ದಿನಗಳಲ್ಲಿ ದೆಹಲಿ ತಲುಪಲಿದ್ದಾರೆ. ಅಲ್ಲಿನ ಪೂರ್ವ ತಯಾರಿ ಈಗಾಗಲೇ ನಡೆದಿದೆ.
ಇದೊಂದು ಅಂತಿಮ ಹಾಗೂ ನಿರ್ಣಾಯಕ ಹೋರಾಟವಾಗಿದ್ದು, ದೆಹಲಿಯ ನೆರೆಯ ರಾಜ್ಯಗಳಿಂದ ಹೆಚ್ಚಿನ ಪಿಂಚಣಿದಾರರನ್ನು ಕಲೆಹಾಕಲು ಸರ್ವಸಿದ್ಧತೆಯನ್ನು ಕೈಗೊಳ್ಳಲಿದ್ದಾರೆ. ಒಟ್ಟಾರೆ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ರಾಮಲೀಲಾ ಮೈದಾನದ ಸುದ್ದಿ ಚರ್ಚೆಗೆ ಬರಬೇಕು. ಅ ಮಟ್ಟದಲ್ಲಿ ನಮ್ಮ ಹೋರಾಟ ಜರುಗಬೇಕು ಎಂದು ತಿಳಿಸಿದ್ದಾರೆ.
ಇದಕ್ಕಾಗಿ ಚರ್ಚಿಸಲು ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ ಬಾಗ್ ಹೂತೋಟದಲ್ಲಿ ನಾಳೆ ಅಂದರೆ ಡಿ.3ರ ಭಾನುವಾರ ಬೆಳಗ್ಗೆ 8 ಗಂಟೆಗೆ ಹಾಜರಾಗಿ ಎಂದು ತಿಳಿಸಿದ್ದಾರೆ.