Please assign a menu to the primary menu location under menu

NEWSಉದ್ಯೋಗದೇಶ-ವಿದೇಶನಮ್ಮಜಿಲ್ಲೆ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ನೇಮಕಾತಿ ಮಾಡುತ್ತಿದೆ. ಈ ಸಂಬಂಧ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದ್ದು ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಅಕ್ಟೋಬರ್ 23 ರಂದು ಬ್ಯಾಂಕ್ ನೋಟಿಫಿಕೇಶನ್ ಅನ್ನು ರಿಲೀಸ್ ಮಾಡಿ ಎಲ್ಲ ಮಾಹಿತಿ ನೀಡಿತ್ತು. ಆದರೆ ಇದೀಗ ಅಧಿಕೃತವಾಗಿ ಉದ್ಯೋಗಗಳನ್ನ ತುಂಬಲು ಅರ್ಜಿಗಳನ್ನು ಆಹ್ವಾನ ಮಾಡಿದೆ.

ಕರ್ನಾಟಕದಲ್ಲೂ ಯುಬಿಐ ಬ್ರ್ಯಾಂಚ್​ಗಳಿದ್ದು ಇಲ್ಲಿಯು ಹುದ್ದೆಗಳನ್ನು ತುಂಬಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 300 ಉದ್ಯೋಗಗಳು ಖಾಲಿ ಇವೆ. ಇವುಗಳಲ್ಲಿ ಎಸ್​ಸಿ 45, ಎಸ್​ಟಿ 22, ಒಬಿಸಿ 81, ಎಡಬ್ಲುಎಸ್​ 30, ಯುಆರ್ 122 ಉದ್ಯೋಗಗಳು ಮೀಸಲಿವೆ.

ದೇಶದ ವಿವಿಧ ಭಾಗಗಳಲ್ಲಿರುವ ಯುಬಿಐ ಬ್ರ್ಯಾಂಚ್​ಗಳಿದ್ದು  ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆ ಇದಾಗಿದ್ದು ಆನ್​​ಲೈನ್​ ಅಪ್ಲಿಕೇಶನ್ ಪ್ರಕ್ರಿಯೆ ಆರಂಭಿಸಿದೆ. ಆನ್‌ಲೈನ್ ನೋಂದಣಿ, ಕೊನೆ ದಿನಾಂಕ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಯಾವ ರೀತಿ ನಡೆಯುತ್ತದೆ, ಸಂಬಳ, ಅರ್ಜಿ ಶುಲ್ಕ ಇತ್ಯಾದಿಗಳನ್ನು ಈ ಕೆಳಗೆ ವಿವರಿಸಲಾಗಿದೆ.

ತಿಂಗಳ ಸ್ಯಾಲರಿ- 48,480 ರೂ.ಗಳು

ಹುದ್ದೆಯ ಹೆಸರು ಏನು?: ಲೋಕಲ್ ಬ್ಯಾಂಕ್ ಆಫೀಸರ್ (ಎಲ್​ಬಿಒ)

ಒಟ್ಟು ಹುದ್ದೆಗಳು: ಎಸ್​ಸಿ- 224, ಎಸ್​​​ಟಿ- 109, ಒಬಿಸಿ- 404, EWS- 150, ಯುಆರ್- 613. ಒಟ್ಟು ಹುದ್ದೆಗಳು- 1,500.

ವಿದ್ಯಾರ್ಹತೆ- ಯಾವುದಾದರೂ ಪದವಿ ಪೂರ್ಣಗೊಳಿಸಿರಬೇಕು. ವಯಸ್ಸಿನ ಮಿತಿ- 20 ವರ್ಷದಿಂದ 30.

ಅರ್ಜಿ ಶುಲ್ಕ ಎಷ್ಟಿದೆ..?: ಜನರಲ್​, EWS, ಒಬಿಸಿ- 850 ರೂ.ಗಳು. ಎಸ್​ಸಿ, ಎಸ್​​​ಟಿ, ವಿಶೇಷ ಚೇತನರು- 175 ರೂ.ಗಳು

ಹೇಗೆ ಆಯ್ಕೆ ಮಾಡಲಾಗುತ್ತದೆ?: ಲಿಖಿತ ಪರೀಕ್ಷೆ (ಆನ್​ಲೈನ್). ಗ್ರೂಪ್ ಡಿಸ್ಕಷನ್. ಸಂದರ್ಶನ. ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಎಲ್​​​ಪಿಟಿ). ದಾಖಲಾತಿ ಪರಿಶೀಲನೆ

ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- ನವೆಂಬರ್- 13. ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್- https://ibpsonline.ibps.in/ubilbooct24/

Leave a Reply

error: Content is protected !!
LATEST
SBI ಬ್ಯಾಂಕ್‌ನಲ್ಲಿ ಸೇವಿಂಗ್‌ ಅಕೌಂಟ್ ಅಥವಾ ಸ್ಯಾಲರಿ ಅಕೌಂಟ್ ಇದ್ದರೆ ಒಂದು ಕೋಟಿ ರೂ.ವರೆಗೂ ಫ್ರೀ ಸೌಲಭ್ಯ NWKRTC: ನೌಕರರು LMS ತಂತ್ರಾಂಶದಲ್ಲಿ ಅನುಭವಿಸುತ್ತಿದ್ದ ಸಮಸ್ಯೆಗೆ ಮುಕ್ತಿ ಬಿಬಿಎಂಪಿಯಿಂದ ದೀರ್ಘಕಾಲದಿಂದ ಆಸ್ತಿ ತೆರಿಗೆ ಕಟ್ಟದವರ ಸ್ಥಿರ ಆಸ್ತಿಗಳ ಹರಾಜು: ಮುನೀಶ್ ಮೌದ್ಗಿಲ್ Kho Kho World Cup 2025: ತಿ.ನರಸೀಪುರದ ಚೈತ್ರಾ ನಾಡು, ದೇಶದ ಕೀರ್ತಿಯ ಮುಗಿಲೆತ್ತರಕ್ಕೆ ಹಾರಿಸಿದ ಅಪ್ಪಟ ಗ್ರಾಮೀಣ ಪ... ಜಗಜಿತ್ ದಲೈವಾಲ 53 ದಿನಗಳ ಉಪವಾಸ ಕೈ ಬಿಟ್ಟು ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಕುರುಬೂರ್ ಶಾಂತಕುಮಾರ್ KSRTC ಬಸ್‌ ಬ್ರೇಕ್‌ ವೈಫಲ್ಯಗೊಂಡು ಪಲ್ಟಿ: 30ಕ್ಕೂ ಹೆಚ್ಚು ಮಂದಿಗೆ ಗಾಯ BMTC ಎಲೆಕ್ಟ್ರಿಕ್ ಬಸ್ ಬ್ರೇಕ್ ವೈಫಲ್ಯ: ಡಾಬಾ, ಬೀಡಾ ಅಂಗಡಿಗೆ ಡಿಕ್ಕಿ KSRTC: ಅಧಿಕಾರಿಗಳು, ಸಿಬ್ಬಂದಿಗಳಿಗೂ ಕಿರುಕುಳ ನೀಡುತ್ತಿದ್ದ ಸಂಚಾರಿ ನಿರೀಕ್ಷಕ ಉಮೇಶ್‌  ವಜಾ- ಸಿಟಿಎಂ ಆದೇಶ ಬೆಂಗಳೂರಿನಲ್ಲಿ ಶಾಲೆ ಕಲಿತ ಆ ದಿನಗಳ ಕನ್ನಡದಲ್ಲೇ ಬ್ಯಾಂಕಾಕ್‌ನಲ್ಲಿ ಮೆಲುಕುಹಾಕಿದ ಸೂಪರ್‌ಸ್ಟಾರ್‌ ರಜನಿಕಾಂತ್ KSRTC ನೌಕರರಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಂಥ ಆಸ್ಪತ್ರೆಗಳು ಹೊರಕ್ಕೆ: ಅಧಿಕಾರಿಗಳ ಎಚ್ಚರಿಕೆ