NEWSನಮ್ಮರಾಜ್ಯಬೆಂಗಳೂರು

ಮೈಸೂರು: ಚಲಿಸುತ್ತಿದ್ದ KSRTC ಬಸ್‌ ಬಾಗಿಲು ಓಪನ್‌- ನಿರ್ವಾಹಕ ಬಿದ್ದು ಸ್ಥಳದಲ್ಲೇ ಮೃತ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಚಲಿಸುತ್ತಿದ್ದಾಗ ನಿರ್ವಾಹಕರ ಬಾಗಿಲು ಓಪನ್‌ಆದ ಪರಿಣಾಮ ನಿರ್ವಾಹಕರೊಬ್ಬರು ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ಜಿಲ್ಲೆಯ ಮಾರ್ಚಳ್ಳಿ ಬಳಿ ನಡೆದಿದೆ.

ಘಟನೆಯಲ್ಲಿ ಕೆ.ಆರ್. ನಗರ ಘಟಕ ಮೈಸೂರು ವಿಭಾಗದ ಚಾಲಕ ಕಂ ನಿರ್ವಾಹಕ (ಬಿಲ್ಲೆ ಸಂಖ್ಯೆ 965) ಎಚ್‌.ಪಿ. ಯತೀಶ್ ಮೃತಪಟ್ಟಿದ್ದಾರೆ.

ಇಂದು 71 ಎಬಿ ಅನುಸೂಚಿಯಲ್ಲಿ ಕೆ.ಆರ್. ನಗರ- ಮೂಲೆ ಪೆಟ್ಲು ಮಾರ್ಗದಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುವಾಗ ಮಾರ್ಚಳ್ಳಿ ಬಳಿ ನಿರ್ವಾಹಕರ ಬಾಗಿಲು ಆಕಸ್ಮಿಕವಾಗಿ ಓಪನ್ ಆಗಿದ್ದು, ಆ ಬಾಗಿಲಿನಿಂದ ಆಯತಪ್ಪಿ ಚಲಿಸುತ್ತಿದ್ದ ಬಸ್‌ನಿಂದ ಕೆಳಗೆ ಬಿದ್ದಾರೆ, ಆ ವೇಳೆ ಕಲ್ಲಿಗೆ ತಲೆ ಹೊಡೆದು ಭಾರಿ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸರ್ಕಾರದಿಂದ ಸಾರಿಗೆ ಸಂಸ್ಥೆಗಳ ನಿರ್ಲಕ್ಷ್ಯ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರಿಗೆ ಸಂಸ್ಥೆಗಳನ್ನು ನಿರ್ಲಕ್ಷಿಸಿರುವುದು ಇದರಿಂದ ಸ್ಪಷ್ಟವಾಗಿ ಕಾಣುತ್ತಿದೆ. ಕಾರಣ ಹಾಳಾಗಿರುವ ಬಸ್‌ಗಳ ಬಿಡಿ ಭಾಗಗಳನ್ನು ಸರಿಯಾಗಿ ಅಳವಡಿಸುತ್ತಿಲ್ಲ. ಇದರಿಂದ ಬಸ್‌ಗಳು ಬಹುತೇಕ ಚಾಲನೆಗೆ ಯೋಗ್ಯವಾಗಿಲ್ಲ. ಆದರೂ ಕೂಡ ಬಲವಂತದಿಂದ ನಿರ್ವಾಹಕ ಮತ್ತು ಚಾಲಕರನ್ನು ರೂಟ್‌ ಮೇಲೆ ಕಳುಹಿಸುತ್ತಿದ್ದಾರೆ. ಪರಿಣಾಮ ಈ ರೀತಿಯ ಅವಘಡಗಳು ನಡೆಯುತ್ತಿವೆ.

ಇನ್ನು ನಾಲ್ಕೂ ಸಾರಿಗೆ ನಿಗಮಗಳ ಬಹುತೇಕ ಬಸ್‌ಗಳು ನಿರ್ವಹಣೆ (Management) ಇಲ್ಲದೆ ತುಕ್ಕು ಹಿಡಿದಿದ್ದು ಆ ಬಸ್‌ಗಳನ್ನೇ ರಸ್ತೆ ಮೇಲೆ ಬಿಡಲಾಗುತ್ತಿದೆ. ಸ್ಕ್ರ್ಯಾಪ್ ಬಸ್ಸುಗಳು ಸಹ ಇವುಗಳಲ್ಲಿ ಸೇರಿಕೊಂಡಿವೆ. ಆದರೂ ಈ ಬಗ್ಗೆ ಸಾರಿಗೆ ಸಚಿವರಾಗಲಿ ಇಲ್ಲ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಾಗಲಿ ಸರಿಯಾದ ಗಮನಹರಿಸುತ್ತಿಲ್ಲ. ಪರಿಣಾಮ ಸಾರ್ವಜನಿಕರು ಯೋಗ್ಯವಿಲ್ಲದ ಬಸ್‌ಗಳಲ್ಲಿ ಪ್ರಯಾಣಿಸುವುದು ಅನಿವಾರ್ಯ ಎಂಬಂತಾಗಿದೆ.

ಅಲ್ಲದೆ ಈಗಾಗಲೇ ಹಲವಾರು ಕಡೆ ಬಸ್‌ ಚಲಿಸುತ್ತಿದ್ದಾಗಲೇ ಚಕ್ರಗಳು ಬೇರ್ಪಟ್ಟಿರುವುದು ಬ್ಲೇಡ್‌ಗಳು ಮುರಿದು ಅಪಘಾತಗಳು ಸಂಭವಿಸಿರುವುದು ಬಸ್‌ ವಾಲಿಕೊಂಡಿರುವುದರ ಬಗ್ಗೆ ವರದಿ ಬರುತ್ತಿವೆ ಆದರೂ, ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ.

ಇನ್ನು ಇಂದು ನಡೆದಿರುವ ಅವಘಡಕ್ಕೆ ಯಾರು ಜವಾಬ್ದಾರರಾಗುತ್ತಾರೆ. ಇಲ್ಲಿ ಒಂದು ಪ್ರಾಣವೇ ಹೋಗಿದೆ. ಇದಕ್ಕೆ ಕಾರಣ ಯಾರು, ಬಸ್‌ಅನ್ನು ಚಾಲನೆಗೆ ಯೋಗ್ಯವಾಗದ ರೀತಿ ಸಿದ್ಧಗೊಳಿಸಿ ರಸ್ತೆ ಮೇಲೆ ಹೋಗಲು ಬಿಟ್ಟ ತಾಂತ್ರಿಕ ವಿಭಾಗದ ಅಧಿಕಾರಿಗಳು ಹೊರುತ್ತಾರೆಯೋ ಇಲ್ಲ ಯೋಗ್ಯವಾಗಿದೆ ಈ ಬಸ್‌ ತೆಗೆದುಕೊಂಡು ಹೋಗು ಅಂತ ಕಳಿಹಿಸಿದ ಘಟಕ ವ್ಯವಸ್ಥಾಪಕರು ಈ ಸಾವಿನ ಜವಾಬ್ದಾರಿ ಹೊರುತ್ತಾರೆಯೋ?

ಇವರಾರು ಈ ಸಾವಿನ ಜವಾಬ್ದಾರಿ ಹೊರುವುದಿಲ್ಲ ಬದಲಿಗೆ ಮೃತ ನಿರ್ವಾಹಕನದ್ದೆ ತಪ್ಪು‌, ಆತ ಬಾಗಿಲ ಬಳಿ ಏಕೆ ನಿಲ್ಲಬೇಕಿತ್ತು ಎಂದು ಪ್ರಶ್ನೆ ಮಾಡಿ ಆತನೇ ಡೋರ್‌ ಅನ್ನು ಸರಿಯಾಗಿ ಹಾಕಿಕೊಂಡಿರಲಿಲ್ಲ ಎಂದು ಹೇಳಿ ಪ್ರಕರಣವನ್ನು ಮುಚ್ಚಿಹಾಕಿ ಅರಾಮವಾಗಿ ಬಿಡುತ್ತಾರೆ. ಇದು ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವುದು.

ಇದನ್ನು ಕೇಳಬೇಕಾದವರು ಕಂಡು ಕಾಣದಂತೆ ವರ್ತಿಸುತ್ತಾರೆ. ಇದರಿಂದ ಅಮಾಯಕ ನೌಕರರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬಳಿಕ ಅವರ ಕುಟುಂಬ ಬೀದಿಗೆ ಬೀಳುತ್ತಿದೆ. ಈ ರೀತಿ ಆಗಬಾರದು ಎಂದಾದರೆ ಭ್ರಷ್ಟ ಸಂಘಟನೆಗಳನ್ನು ದೂರವಿಟ್ಟು ನೌಕರರ ಸಮಸ್ಯೆ ಆಲಿಸುವಂತೆ ಸಂಘನೆಗೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು. ಆಗಷ್ಟೇ ಸರ್ಕಾರ ಮತ್ತು ಅಧಿಕಾರಿಗಳು ಸಾರ್ವಜನಿಕರಿಗೆ ಯೋಗ್ಯ ಎನ್ನುವಂತ ಬಸ್‌ಗಳನ್ನು ರಸ್ತೆಗೆ ಇಳಿಸಲು ಸಾಧ್ಯವಾಗುತ್ತದೆ.

Leave a Reply

error: Content is protected !!
LATEST
ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು?