ಮೈಸೂರು: ನಗರದಲ್ಲಿ ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಪ್ರಮುಖ ರಸ್ತೆಗಳ ಮೇಲೆ ಕಾಲುವೆಯಂತೆ ನೀರು ಹರಿಯಿತು.
ಸುಮಾರು 5.2 ಸೆಂ.ಮೀ.ನಷ್ಟು ಮಳೆ ಸುರಿದಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಪ್ರಸಕ್ತ ಮುಂಗಾರು ಅವಧಿಯಲ್ಲಿ ಇಂದು ಬಿದ್ದ ಮಳೆಯೇ ಹೆಚ್ಚು ಎಂದು ಇಲಾಖೆ ಮಾಹಿತಿ ನೀಡಿದೆ. ಇದು ಮುಂಗಾರು ಬೆಳೆಗೆ ಸಹಕಾರಿಯಾಗಿಲಿದ್ದು, ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಬಹುದು ಎಂದು ಹೇಳಿದೆ.
ಇನ್ನು ಇಂದು ಬಿದ್ದ ಮಳೆಯಿಂದ ಬಹುತೇಕ ನಗರದ ರಸ್ತೆಗಳು ತುಂಬಿ ಹರಿದ್ದಿದ್ದು, ಅಗ್ರಹಾರ ಮೃತ್ತದಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವ ಸ್ಥಿತಿಯು ಉಂಟಾಗಿತ್ತು. ಬೆಂಗಳೂರು ನೀಲಗಿರಿ ರಸ್ತೆ ಸೇರಿ ಹಲವು ರಸ್ತೆಗಳು ಮಳೆ ನೀರಿನಿಂದ ತುಂಬಿ ಹರಿದವು.
ಹಲವೆಡೆ ಒಳ ಚರಂಡಿ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡಿದ್ದರಿಂದ ನೀರು ಉಕ್ಕಿ ಹರಿಯಿತು. ಕೆ.ಆರ್.ನಗರ ತಾಲೂಕಿನಲ್ಲಿ 6 ಸೆಂ.ಮೀ. ಹುಣಸೂರಿನಲ್ಲಿ 3 ಸೆಂ.ಮೀ. ನಂಜನಗೂಡಿನಲ್ಲಿ 2ಸೆಂ.ಮೀ. ಪಿರಿಯಾಪಟ್ಟಣ ಹಾಗೂ ತಿ.ನರಸೀಪುರದಲ್ಲಿ ತಲಾ 1 ಸೆಂ.ಮೀ. ನಷ್ಟು ಮಳೆಯಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.