ಬೆಂಗಳೂರು : ನವರಾತ್ರಿ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೊಂಬೆ ಇರಿಸಿ ಪೂಜೆ ಮಾಡುವುದು ಸಂಪ್ರದಾಯ. ನವರಾತ್ರಿಯಲ್ಲಿ ನಡೆಯುವ ಗೊಂಬೆ ಪೂಜೆಗೆ ಸುಮಾರು 400 ವರ್ಷಗಳ ಇತಿಹಾಸವಿದೆ. ಮೈಸೂರಿನ ರಾಜ ಒಡೆಯರ್ ಅವರು ವಿಜಯನಗರ ಸಂಸ್ಥಾನದಿಂದ ಕರ್ನಾಟಕದ ಸಿಂಹಾಸನಾಧೀಶರಾದ ಮೇಲೆ ಮೈಸೂರು ಸಂಸ್ಥಾನದಲ್ಲಿ ವಿಜಯನಗರದ ಆಚಾರ ವಿಚಾರ ಪರಂಪರೆಗಳನ್ನು ಆಚರಿಸಲು ಪ್ರಾರಂಭಿಸಿದರು.
ನವರಾತ್ರಿಯಲ್ಲಿ ನಡೆಯುವ ಗೊಂಬೆ ಪೂಜೆ ಶಾಲೆಯಲ್ಲೂ: ಪ್ರಮುಖವಾಗಿ ನವರಾತ್ರಿಯ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಗೊಂಬೆ ಕೂರಿಸುವ ಪದ್ಧತಿ ಆಚರಣೆ ಇದೆ. ಅದೇ ಪದ್ಧತಿ ಇದೀಗ ಹಲವು ಮನೆಗಳಲ್ಲಿ ಹಾಗೂ ಮೈಸೂರಿನ ರಾಜ ವಂಶಸ್ಥರ ಮನೆಗಳಲ್ಲಿ ನಡೆದುಕೊಂಡು ಬಂದಿದೆ. ಅದೇರೀತಿ ನವರಾತ್ರಿಯ ಆಚರಣೆ ವೇಳೆ ಕಳೆದ 9 ವರ್ಷಗಳಿಂದ ಏಷಿಯನ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಗೊಂಬೆ ಕೂರಿಸುವ ಮೂಲಕ ಆಚರಿಸಿಕೊಂಡು ಬರಲಾಗುತ್ತಿದೆ.
ಸ್ಕೂಲ್‌ನಲ್ಲಿ ನವರಾತ್ರಿ ಪ್ರಯುಕ್ತ ಸೋಮವಾರ ಮತ್ತು ಮಂಗಳವಾರ ಗೊಂಬೆಗಳನ್ನು ಕೂರಿಸಿ ವಿದ್ಯಾರ್ಥಿಗಳಿಗೆ ನವರಾತ್ರಿಯ ಆಚರಣೆ ಸಂಪ್ರದಾಯ ತಿಳಿಸುವ ಮೂಲಕ ಶಾಲೆಯ ಪ್ರಾಂಶುಪಾಲೆ ಡಿಂಪಲ್ ಆರ್ ಗೌಡ ಮಕ್ಕಳಲ್ಲಿ ನಾಡಿನ ಸಂಪ್ರದಾಯವನ್ನು ಮನವರಿಕೆ ಮಾಡಿದರು.
ಶಾಲೆಯ ಶಿಕ್ಷಕ ವೃಂದದವರು ಈ ವೇಳೆ ಮಕ್ಕಳಿಗೆ ಮೈಸೂರಿನ ದಸರಾ ವಿಶೇಷವನ್ನು ತಿಳಿಸಿಕೊಟ್ಟರು. ಮಕ್ಕಳು ಶಾಲೆಯಲ್ಲಿ ಗೊಂಬೆ ಕೂರಿಸಲು ಸಹಕರಿಸಿದರು. ಈ ಮೂಲಕ ವಿಜೃಂಬಣೆಯಿಂದ ದಸರಾ ಗೊಂಬೆಗಳನ್ನು ಕೂರಿಸಿ ಸಂಭ್ರಮಿಸಿದರು.
ನವರಾತ್ರಿಯಲ್ಲಿ ಗೊಂಬೆ ಪೂಜೆ ಹಿನ್ನೆಲೆ : ಹಿಂದೆ ಮೈಸೂರು ಸಂಸ್ಥಾನದ ಜನತೆಗೆ ಮಹಾರಾಜರು ಈ ನವರಾತ್ರಿ ಸಂದರ್ಭದಲ್ಲಿ ತಮ್ಮ ಮನೆಗಳಿಗೂ ಬರಲಿ ಎಂಬ ಆಸೆ. ಆದರೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದರ ಸಂಕೇತವಾಗಿ ತಮ್ಮ ಮನೆಗಳಲ್ಲಿ ಪಟ್ಟದ ಗೊಂಬೆ ಇರಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ. ಮೊದಲ ಮೆಟ್ಟಿಲಿನಲ್ಲಿ ರಾಜರಾಣಿ ಇಟ್ಟು, ನಂತರ ಕಳಸ ಅನಂತರ ಬೇರೆ ಬೇರೆ ಗೊಂಬೆಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ.
ಇಲ್ಲಿ ಪ್ರಮುಖವಾಗಿ ನವದುರ್ಗೆಯರು, ದಶಾವತಾರ, ಅಷ್ಟಲಕ್ಷ್ಮಿ ಅವರು, ಸಪ್ತಮಾತ್ರಿಕೆಯರು, ರಾಮಾಯಣ ಮಹಾಭಾರತ ದೃಶ್ಯ ತೋರಿಸುವ ಗೊಂಬೆಗಳು, ಅರಮನೆ ಅಂಬಾರಿ ಆನೆ, ಸೈನಿಕರು ಈ ರೀತಿ ರಾಜ ಪರಂಪರೆಯ ದೇವರುಗಳು ಇತ್ಯಾದಿ ಗೊಂಬೆಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಈ ಗೊಂಬೆ ಪೂಜೆಯ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಯ ಮಹಿಳೆಯರನ್ನು ಕರೆದು ಅರಿಶಿಣ ಕುಂಕುಮವನ್ನು ನೀಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.
ಅದೇರೀತಿ ಈಗ ಮನೆಗಳಿಂದ ಶಾಲೆಗಳ ಆವರಣಕ್ಕೂ ಗೊಂಬೆ ಕೂರಿಸುವ ಸಂಪ್ರದಾಯ ವ್ಯಾಪಿಸಿದ್ದು, ನಾಡಿನಾದ್ಯಂತ ಮನೆಗಳು ಶಾಲೆಗಳು ಎನ್ನದೆ ಬಹುತೇಕ ಎಲ್ಲೆಡೆಯೂ ಗೊಂಬೆ ಕೂರಿಸುವ ಸಂಪ್ರದಾಯ ಬೆಳೆದು ಬಂದಿದೆ.
Related
You Might Also Like
KSRTC: ರಸ್ತೆಗಿಳಿದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್ಗಳು- ಸಚಿವರಿಂದ ಲೋಕಾರ್ಪಣೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 20 ಹೊಸ ಅಂಬಾರಿ ಉತ್ಸವ ಸ್ಲೀಪರ್ ಬಸ್ಗಳಿಗೆ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಸಚಿವರಾದ ರಾಮಲಿಂಗರೆಡ್ಡಿ ಮತ್ತು...
KSRTCಗೆ ₹6543 ಕೋಟಿ ಅನುದಾನ ಬಿಡುಗಡೆ ಮಾಡಿರುವ ನಮಗೆ ₹414 ಕೋಟಿ ಬಿಡುಗಡೆ ಮಾಡುವುದು ಕಷ್ಟವೇ: ರಾಮಲಿಂಗಾರೆಡ್ಡಿ
ಬೆಂಗಳೂರು: ಶಕ್ತಿ ಯೋಜನೆ ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ದಿಟ್ಟ ಹೆಜ್ಜೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ತಮ್ಮ ಪ್ರತಿಯೊಂದು ಸುಳ್ಳಿನ ಸರಮಾಲೆಯ ಟ್ಟೀಟ್ಗೂ ನಾವು...
ಗಾಯಾಳು ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ವಿಚಾರಿಸಿದ ಸಚಿವ ಪರಮೇಶ್ವರ್
ಹುಬ್ಬಳ್ಳಿ: ಹುಬ್ಬಳ್ಳಿಯ ಸಾಯಿನಗರದಲ್ಲಿ ಅಡುಗೆ ಅನಿಲ ಸ್ಫೋಟದಿಂದ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಇಂದು ಗೃಹ...
KSRTC ಅಧಿಕಾರಿಗಳಿಲ್ಲದ ಡಿ.31ರ ಸಾರಿಗೆ ಮುಷ್ಕರ ನೌಕರರ ಹರಕೆ ಕುರಿ ಮಾಡುವ ಹೋರಾಟವೇ..!?
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ವೇತನ ಹೆಚ್ಚಳವಾಗಬೇಕು ಅದಾದ ಬಳಿಕ ಅರಿಯರ್ಸ್ ಕೊಡಬೇಕು ಎಂದರೆ ಹೋರಾಟ ಮಾಡುವುದು ನೌಕರರು. ಅದಕ್ಕೆ ಕರೆ ಕೊಡುವುದು...
BBMP- ₹2 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ : ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು: ಕಳೆದ ಬಾರಿ ಮಳೆಯಿಂದಾದ ಅನಾಹುತಗಳು ಮತ್ತೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಯಲಹಂಕ ವಲಯದ ಟಾಟಾನ ಗರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು...
ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್ ಸಮಾವೇಶ
ಬಾಗಲಕೋಟೆ: ರಾಷ್ಟ್ರೀಯ ಸಂಘರ್ಷ ಸಮಿತಿಯ NACಯ ರಾಷ್ಟ್ರೀಯ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರ ನೇತೃತ್ವದಲ್ಲಿ ಒದೇ ಡಿ.31 ರಂದು ಇಳಕಲ್‌ನಲ್ಲಿ ಇಪಿಎಸ್ 95 ಪಿಂಚಣಿದಾರರ ಬೃಹತ್...
ಚನ್ನರಾಯಪಟ್ಟಣ ರೈತ ನಿಯೋಗದಿಂದ ಸಿಎಂ ಭೇಟಿ: ಭೂ ಸ್ವಾಧೀನ ಕೈಬಿಡಲು ಮನವಿ
ಸರ್ಕಾರ ರೈತರ ಪರವಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್....
KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..!
ಪಾಪಾ ಸಂಬಳ ಸಾಲುತ್ತಿಲ್ಲವಂತೆ ಅದಕ್ಕೆ ಹೆಚ್ಚಿಗೆ ಸಂಬಳ ಪಡೆಯುತ್ತಿರುವ ಟಿಸಿಗಳ ಕಾಲು ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ ಪಾಪಿಗಳು ನಾಚಿಕೆ ಬಿಟ್ಟು ಟಿಸಿಗಳ ಸುಲಿಗೆ ಮಾಡುವ ಇಂಥ ನಾಲಾಯಕ್...
ಇ-ಖಾತಾ ಕಾಲಮಿತಿಯೊಳಗೆ ಅಧಿಕಾರಿಗಳು ವಿಲೇಮಾಡಿ: ತುಷಾರ್ ಗಿರಿನಾಥ್
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆ ವ್ಯಾಪ್ತಿಯ ವಿವಿಧ ವಿಷಯಗಳಿಗೆ...
ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ
ನ್ಯೂಡೆಲ್ಲಿ: ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಪಿಎಸ್-95 ರಾಷ್ಟ್ರೀಯ ಹೋರಾಟ ಸಮಿತಿಯ ನಿಯೋಗದೊಂದಿಗೆ ಶನಿವಾರ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ...
ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ನೌಕರರನ್ನು ಪದೇಪದೆ ಕಾರ್ಮಿಕರು ಎಂದು ಕರೆಯುವ ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ನಿಜವಾಗಲು ನೌಕರರ ಬಗ್ಗೆ...
ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ
ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರಿಗೆ 34100 ರೂಪಾಯಿ ಸಂಚಿತ ವೇತನ ನಿಗದಿ ಮಾಡಿರುವ ಸರ್ಕಾರ ಕಳೆದ ನವೆಂಬರ್ 1ರಿಂದಲೇ...