NEWSದೇಶ-ವಿದೇಶನಮ್ಮಜಿಲ್ಲೆವಿಜ್ಞಾನ

ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಲೋಹದ ಹಕ್ಕಿಗಳು: ಜನಮನ ಸೂರೆಗೊಂಡ ಏರ್‌ ಶೋ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ 3 ದಿನಗಳ ಕಾಲ ಏರ್ ಶೋ ನಡೆಯುತ್ತಿದ್ದು, ವಿಶ್ವದ ಮೊಟ್ಟಮೊದಲ ಹೈಬ್ರಿಡ್ ಏರ್ ಶೋ ಇದಾಗಿದೆ.

ಇದು ಅನೇಕ ಅವಕಾಶಗಳಿಗೆ ಏರೋ ಇಂಡಿಯಾ-2021 ವೇದಿಕೆ ಒದಗಿಸುತ್ತಿದೆ. ಏರ್ ಎಲ್​ಸಿಎಚ್​ಗಳ ಹಾರಾಟದಿಂದ ಏರೋ ಇಂಡಿಯಾ ಆಕ್ರೋಬ್ಯಾಟ್ಸ್ ಆರಂಭವಾಗಿದೆ. ಧನುಶ್ ಫಾರ್ಮೇಶನ್- ಮೂರು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಗಳ ಹಾರಾಟ ನಡೆದಿದೆ. ಹಾಕ್, ಸಿತಾರಾ ಮತ್ತು ಟಾನಿಯರ್ 22A ಹೆಲಿಕಾಪ್ಟರ್, ಆತ್ಮನಿರ್ಭರ್ ಫಾರ್ಮೇಶನ್ ಹಾರಾಟ ಮಾಡಿವೆ. ತೇಜಸ್ ಯುದ್ಧ ವಿಮಾನದ ಮುಂದಾಳತ್ವದಲ್ಲಿ 5 ವಿಮಾನಗಳು ಬಾನಂಗಳದಲ್ಲಿ ಹಾರಾಟ ನಡೆಸಿವೆ.

ಈ 5 ಕೂಡ ದೇಸೀ ತಯಾರಿಕಾ ವಿಮಾನಗಳಾಗಿವೆ. ರ್ಯಾಡಾರ್ ಹೊತ್ತ ವಿಮಾನ ನೇತ್ರ ಹಾರಾಟ ನಡೆಸಿದೆ. ವಿಜಯ್ ಫಾರ್ಮೇಶನ್ ಹಾರಾಟ ನಡೆಸಿದೆ. ಅಕ್ಕಪಕ್ಕದಲ್ಲಿ 2 ಸುಖೋಯ್ ಯುದ್ಧವಿಮಾನಗಳು, ಎರಡು ತೇಜಸ್ ವಿಮಾನಗಳ ಆರ್ಭಟ ಜೋರಾಗಿತ್ತು.

ಇದರ ಜತೆಗೆ 3 ರಫೇಲ್ ವಿಮಾನಗಳ ಹಾರಾಟವೂ ನಡೆದಿದೆ. ಗರುಡ್ ಫಾರ್ಮೇಶನ್, ಜಾಗ್ವಾರ್, ಹಾಕ್ ಮತ್ತು ಸುಖೋಯ್, ತ್ರಿಶೂಲ್ ಫಾರ್ಮೇಶನ್, ಸುಖೋಯ್ ಯುದ್ಧವಿಮಾನಗಳು ಯಲಹಂಕದ ವಾಯುನೆಲೆಯ ಬಾನಿನಲ್ಲಿ ಹಾರಾಟ ನಡೆಸಿವೆ.

ಇಂದಿನ ಏರ್ ಶೋನಲ್ಲಿ ಎಲ್​ಸಿಎಚ್ ಹಾರಾಟ ನಡೆಸಿದ್ದು, ಇದನ್ನು ಯುದ್ಧದಲ್ಲಿ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಹೆಚ್ಚು ಬಳಿಕೆ ಮಾಡಲಾಗುತ್ತದೆ. ಸಿಯಾಚಿನ್​ನಲ್ಲಿ ಹಾರಾಟ ಮಾಡಬಲ್ಲ ಏಕೈಕ ಎಲ್​ಸಿಎಚ್​ ಇದಾಗಿದೆ.

ಎಚ್​ಎಎಲ್​ನಲ್ಲಿ ತಯಾರಾದ ಇಂಜಿನ್ ಹೊಂದಿರುವ ಎಲ್​ಸಿಎಚ್‌ ಮುಂದೆ ಎಷ್ಟು ವೇಗದಲ್ಲಿ ಸಾಗುತ್ತದೋ ಹಿಮ್ಮುಖದಲ್ಲೂ ಅಷ್ಟೇ ವೇಗವಾಗಿ ಹಾರಬಲ್ಲ ಶಕ್ತಿಯನ್ನು ಹೊಂದಿದೆ. ಇದು ವಿಶ್ವದ ಅತಿ ಲಘು ವಿಮಾನವಾಗಿದ್ದು, ಎಂತಹ ಪ್ರದೇಶದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ.

ಸೂರ್ಯ ಕಿರಣ್ ಹಾರಾಟ ಪ್ರೇಕ್ಷಕರ ಮತ್ತು ಗಣ್ಯರ ಗಮನ ಸೆಳೆದಿದ್ದು, 9 ವಿಮಾನಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಏಷ್ಯಾದ ಏಕೈಕ 9 ವಿಮಾನಗಳ ತಂಡವೆಂಬ ಹೆಗ್ಗಳಿಕೆ ಸೂರ್ಯಕಿರಣ್​ದಾಗಿದೆ.

ಪ್ರತಿನಿತ್ಯ 2 ಬಾರಿ ಏರ್​ ಡಿಸ್​​ಪ್ಲೇ ನಡೆಯಲಿದೆ. 42 ವಿಮಾನಗಳು ದಿನಕ್ಕೆ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನಡೆಸಲಿವೆ. ಭಾರತ ಸೇರಿದಂತೆ ವಿವಿಧ ದೇಶಗಳ 63 ವಿಮಾನಗಳ ಪ್ರದರ್ಶನಗೊಳ್ಳಲಿವೆ.

Leave a Reply

error: Content is protected !!
LATEST
KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು