Vijayapatha – ವಿಜಯಪಥ
Friday, November 1, 2024
NEWSನಮ್ಮಜಿಲ್ಲೆ

ತನ್ನ ಕಾರಿಗೆ 0001 ಫ್ಯಾನ್ಸಿ ಸಂಖ್ಯೆ ಪಡೆಯಲು ಬರೋಬ್ಬರಿ 10.75 ಲಕ್ಷ ಬಿಡ್‌ ಮಾಡಿದ ಮಾಲೀಕ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಈ ಹರಾಜಿನಲ್ಲಿ ಕಾರು ಮಾಲೀಕರು ಪೈಪೋಟಿಗೆ ಬಿದ್ದು ತಮ್ಮ ಅದೃಷ್ಟದ ಫ್ಯಾನ್ಸಿ ನಂಬರ್‌ಗಳನ್ನು ಖರೀದಿ ಮಾಡಿದ್ದಾರೆ. ಅದರಲ್ಲಿ ವ್ಯಕ್ತಿಯೊಬ್ಬರು ‘0001ʼ ಫ್ಯಾನ್ಸಿ ಸಂಖ್ಯೆಯನ್ನು ಬರೋಬ್ಬರಿ 10.75 ಲಕ್ಷ ರೂ.ಗೆ ಬಿಡ್‌ ಮಾಡಿ ಖರೀದಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಹೌದು! ಶಾಂತಿನಗರದಲ್ಲಿನ ಸಾರಿಗೆ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಕೋರಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯ ಲಘು ಮೋಟಾರು ವಾಹನಗಳಿಗೆ ಪ್ರಾರಂಭಿಸಿರುವ ‘ಕೆಎ-01 ಎಂವಿʼ ಮುಂಗಡ ಶ್ರೇಣಿಯ ಫ್ಯಾನ್ಸಿ ನಂಬರ್‌ಗಳ ಹರಾಜು ನಡೆಯಿತು. ಈ ಹರಾಜಿನಲ್ಲಿ ಗುಮಾಲ್‌ ಮುಸ್ತಪಾ ಎಂಬುವರು ತಮ್ಮ ಬೆಂಜ್‌ ಕಾರಿಗೆ 0001 ಸಂಖ್ಯೆಯನ್ನು 10.75 ಲಕ್ಷ ರೂ.ಗೆ ಬಿಡ್‌ ಮಾಡಿ ಖರೀದಿಸಿದ್ದಾರೆ.

ಸಾರಿಗೆ ಇಲಾಖೆ ಇತಿಹಾಸದಲ್ಲಿ ಇಷ್ಟೊಂದು ದುಬಾರಿ ಬಿಡ್‌ಗೆ ಒಂದು ನಂಬರ್‌ ಹರಾಜು ಆಗಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ. ಒಟ್ಟು 50 ಫ್ಯಾನ್ಸಿ ನಂಬರ್‌ಗಳ ಪೈಕಿ 15 ಸಂಖ್ಯೆಗಳನ್ನು ಸಾರಿಗೆ ಇಲಾಖೆ ಬಹಿರಂಗ ಹರಾಜಿಗೆ ಇಟ್ಟಿತ್ತು. ಅದರಲ್ಲಿ ನಿಗದಿತ ಶುಲ್ಕದಿಂದ 11.25 ಲಕ್ಷ ರೂ. ಮತ್ತು ಹರಾಜಿನಿಂದ 18.30 ಲಕ್ಷ ರೂ. ಸೇರಿ ಒಟ್ಟು 29.55 ಲಕ್ಷ ರೂ. ಆದಾಯ ಬಂದಿದೆ ಎಂದು ಅಪರ ಸಾರಿಗೆ ಆಯುಕ್ತ ಎನ್‌. ನರೇಂದ್ರ ಹೋಳ್ಕರ್‌ ತಿಳಿಸಿದ್ದಾರೆ.

ಹೀಗಿರಲಿದೆ ಹರಾಜು ಪ್ರಕ್ರಿಯೆ
ಸಾಧಾರಣವಾಗಿ ಸಿನಿಮಾ ಕಲಾವಿದರು, ರಾಜಕಾರಣಿಗಳು, ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಫ್ಯಾನ್ಸಿ ನಂಬರ್‌ ಖರೀದಿಗೆ ಮುಗಿಬೀಳುತ್ತಾರೆ. ಅದನ್ನುಮನಗಂಡಿರುವ ಕರ್ನಾಟಕ ಸಾರಿಗೆ ಇಲಾಖೆ 2015 ರಿಂದ 0001 ರಿಂದ 9999 ವರೆಗಿನ ಸಂಖ್ಯೆಯನ್ನು ಹರಾಜು ಹಾಕುತ್ತಿದೆ.

ಇದಕ್ಕೆ ಕೆಲ ನಿಬಂಧನೆಗಳಿದ್ದು, ಆ ಮೂಲಕವೇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮೊದಲೆಯದಾಗಿ ತಮಗೆ ಇಷ್ಟವಾದ ಸಂಖ್ಯೆ ಬೇಕಾದಲ್ಲಿ ಮರುಪಾವತಿಸಲಾಗದ 20 ಸಾವಿರ ರೂ. ಠೇವಣಿ ಇಡಬೇಕು. ಅಷ್ಟೇ ಅಲ್ಲದೇ ಮುಂಗಡವಾಗಿ 75 ಸಾವಿರ ರೂ. ಪಾವತಿಸಬೇಕು. ಒಂದು ವೇಳೆ ಆ ಸಂಖ್ಯೆಗೆ ಹಲವು ಮಾಲೀಕರು ಅರ್ಜಿ ಹಾಕಿದರೆ ಬಹಿರಂಗ ಹರಾಜು ಹಾಕಲಾಗುವುದು. ಅದರಲ್ಲಿ ಯಾರು ಹೆಚ್ಚಿನ ಬಿಡ್‌ಗೆ ಕೂಗುತ್ತಾರೋ ಅವರಿಗೆ ಆ ಸಂಖ್ಯೆ ಕೊಡಲಾಗುವುದು.

ಸಾರಿಗೆ ಇಲಾಖೆ ಆನ್‌ಲೈನ್‌ ಮೂಲಕ ಫ್ಯಾನ್ಸಿ ನಂಬರ್‌ ಹರಾಜು ಹಾಕಲು ಮುಂದಾಗಿದ್ದರೂ ಈ ಪ್ರಸ್ತಾಪ ಇನ್ನೂ ಕಾರ್ಯಗತವಾಗಿಲ್ಲ. ಈಗಾಗಲೇ ಆಂಧ್ರ ಪ್ರದೇಶ, ಹರ್ಯಾಣ, ಪಂಜಾಬ್‌ ಸರ್ಕಾರ ಆನ್‌ಲೈನ್‌ ಮೂಲಕ ಫ್ಯಾನ್ಸಿ ನಂಬರ್‌ಗಳನ್ನು ಹರಾಜು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಅದು ಸಫಲಾಗಿದೆ.

ಯಾವ ಸಂಖ್ಯೆಗೆ ಎಷ್ಟು ಹಣ?
0001 ಸಂಖ್ಯೆ 10.75 ಲಕ್ಷ ರೂ.
9999 ಸಂಖ್ಯೆ 4.15 ಲಕ್ಷ ರೂ.
0009 ಸಂಖ್ಯೆ 3.75 ಲಕ್ಷ ರೂ.
0999 ಸಂಖ್ಯೆ 2.05 ಲಕ್ಷ ರೂ.
0555 ಸಂಖ್ಯೆ 1.16 ಲಕ್ಷ ರೂ.
0011 ಸಂಖ್ಯೆ 85 ಸಾವಿರ ರೂ.
0005, 5555, 1989, 1111, 3333, 0003, 1459, 0777, 0099ಗೆ ತಲಾ 76 ಸಾವಿರ ರೂ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...