Please assign a menu to the primary menu location under menu

NEWSಲೇಖನಗಳು

ನಿಮ್ಮ ಪತ್ರ- ಸ್ವತಂತ್ರ ಲಿಂಗಾಯತ ಧರ್ಮ ಏಕೆ ಬೇಕು? ಚಳ್ಳಕೆರೆ ಬಸವರಾಜ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಗೆಳೆಯರೇ, ನನ್ನ ಹೆಸರು ಬಸವರಾಜ ( ಚಳ್ಳಕೆರೆ ಬಸವರಾಜ) ನಿಮ್ಮಲ್ಲಿ ಒಂದು ಮನವಿ. ಸ್ವತಂತ್ರ ಲಿಂಗಾಯತ ಧರ್ಮ ಏಕೆ ಬೇಕು ಎಂಬ ಪ್ರಶ್ನೆ ಹಲವಾರು ಒಳಪಂಗಡದ ಲಿಂಗಾಯಿತರಿಗೂ ಕಾಡಿರಲುಬಹುದು.

ನಾವು ಯಾವುದೇ ರಾಜಕೀಯ ಪಕ್ಷ, ಯಾವುದೇ ಜಾತಿಗೆ ಸೇರಿದವರಲ್ಲ. ನಮ್ಮದು ಲಿಂಗಾಯಿತ ಧರ್ಮ. ಈ ವಿಚಾರಗಳನ್ನು ಇಟ್ಟುಕೊಂಡು ಶರಣರ ಪರಂಪರೆಯನ್ನು ಮುಂದುವರೆಸುತ್ತಾ, ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ಸ್ವತಂತ್ರ ಲಿಂಗಾಯತ ಧರ್ಮ ಏಕೆ ಬೇಕು.?
ಪ್ರತ್ಯೇಕ ಲಿಂಗಾಯತ ಧರ್ಮ ಎನ್ನುವುದು ಒಂದು ವೈಚಾರಿಕ ಸಾಂಸ್ಕೃತಿಕ ಆಂದೋಲನವಾಗಬೇಕಿತ್ತು. ಆದರೆ ರಾಜಕೀಯ ಮೇಲಾಟಗಳ ವೇದಿಕೆ ಆಗಿಬಿಟ್ಟಿತು. ಹಾಗಾಗದೆ ನಿಜವಾದ ರೀತಿಯಲ್ಲಿ ಲಿಂಗಾಯತ ಧರ್ಮದ ಘೋಷಣೆ ಆಗಬೇಕಿರುವುದು ಅಗತ್ಯ.

* ವಚನಗಳಲ್ಲಿ ವ್ಯಕ್ತವಾಗಿರುವ ಆಶಯಗಳನ್ನು ಆಧರಿಸಿ ಲಿಂಗಾಯತ ಧರ್ಮ ಘೋಷಿತವಾದರೆ ಪ್ರಪಂಚದ ಮಾನವೀಯ ಧರ್ಮಗಳಲ್ಲೊಂದಾಗುತ್ತದೆ.

ದೇವಸ್ಥಾನ ಮತ್ತು ಪುರೋಹಿತಶಾಹಿಯ ಬಗ್ಗೆ ವಿರೋಧವಿತ್ತು. ಜಾತಿ ವ್ಯವಸ್ಥೆ, ವರ್ಣಾಶ್ರಮ ಪದ್ಧತಿಯನ್ನು ಶರಣರು ತಿರಸ್ಕರಿಸಿದ್ದರು. ಮೂರ್ತಿ ಪೂಜೆ, ವ್ರತ, ಮುಹೂರ್ತ, ಘಳಿಗೆಗಳಲ್ಲಿ ನಂಬಿಕೆ ಇಲ್ಲ.

* ಈ ಕಾರಣಗಳಿಂದ ಅದು ಪ್ರತ್ಯೇಕ ಧರ್ಮ ಎನ್ನುವುದು ಯಥಾರ್ಥ. ಪ್ರತ್ಯೇಕ ಧರ್ಮವಾಗುವುದರಿಂದ ಬಸವಾದಿ ಶರಣರನ್ನು ಜಾಗತಿಕ ಮಟ್ಟದಲ್ಲಿ ಧರ್ಮ ಸ್ಥಾಪಕರ ಗೌರವ ಲಭಿಸುತ್ತದೆ.

* ಅಲ್ಪ ಸಂಖ್ಯಾತ ಧರ್ಮಗಳಿಗಿರುವ ಸಾಂವಿಧಾನಿಕ ಸವಲತ್ತು ಸಿಗುತ್ತದೆ.

*ಶಿಕ್ಷಣ ಸಂಸ್ಥೆಗಳ ಆದಾಯಕ್ಕೆ ತೆರಿಗೆ ರಿಯಾಯಿತಿ, ಸೀಟು ಹಂಚಿಕೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ, ಫೀಸು ನಿಗದಿಯಲ್ಲಿ ರಿಯಾಯತಿ ದೊರೆಯುತ್ತದೆ.

* ಬೇರೆ ಸಮುದಾಯಗಳನ್ನು ಲಿಂಗಾಯತರನ್ನಾಗಿ ಸೇರಿಸಿಕೊಳ್ಳಲು ಅವಕಾಶವಾಗುತ್ತದೆ. ಸಾಮಾಜಿಕವಾಗಿ ಪ್ರಬಲರಾಗಲು ಸಾಧ್ಯ.

*ಪುರೋಹಿತರು, ಜ್ಯೋತಿಷಿಗಳ ಪ್ರಭಾವ ನಿವಾರಣೆಯಾಗಿ ಲಿಂಗಾಯತ ಐಕ್ಯತೆ ಬಲಗೊಳ್ಳುತ್ತದೆ.

*ಸಾಮಾಜಿಕ ಸಂಘ ಸಂಸ್ತೆಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ಹಾಗೂ ಅನುದಾನ ದೊರೆಯುತ್ತದೆ.

*ಅಲ್ಪಸಂಖ್ಯಾತ ಕೋಟಾದಡಿ ಮೀಸಲಾತಿ ದೊರೆಯುತ್ತದೆ.

* ಚುನಾವಣೆಗಳಲ್ಲಿ ಧರ್ಮದ ಅಭ್ಯರ್ಥಿಗಳಿಗೆ ಸಂಖ್ಯಾಬಲದ ಆಧಾರದಲ್ಲಿ ಹೆಚ್ಚಿನ ಸೀಟು ದೊರೆಯುತ್ತದೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...