CrimeNEWSದೇಶ-ವಿದೇಶ

9 ನೇ ತರಗತಿಯ ವಿದ್ಯಾರ್ಥಿನಿ ಅಪಹರಿಸಿ ಸಾಮೂಹಿಕ ಅತ್ಯಾಚಾರ: 8 ಮಂದಿ ಸೇರಿ, ಚಾಲಕನ ಹುಡುಕಾಟ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಭೋಪಾಲ್: 9 ನೇ ತರಗತಿಯ 13 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿದ ಎಂಟು ದಿನಗಳಲ್ಲಿ ಎರಡು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ 8ಮಂದಿ ಕಾಮುಕರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಟ್ರಕ್‌ ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಆಕಾಶ್ ಸಿಂಗ್, ರಾಹುಲ್ ಕುಶ್ವಾಹ, ಪರಸ್ ಸೋನಿ, ಮನು ಕೆವಾಟ್, ಓಂಕರ್ ರೈ, ಐತೇಂದ್ರ ಸಿಂಗ್, ರಜನೀಶ್ ಚೌಧರಿ ಮತ್ತು ರೋಹಿತ್ ಯಾದವ್ ಈ ಎಂಟು ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲಾ ಆರೋಪಿಗಳು 20 ರಿಂದ 30 ವರ್ಷದೊಳಗಿನವರಾಗಿದ್ದು, ಅವರನ್ನು (ಇಂದು)ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ಘಟನೆಯಿಂದಾಗಿ ಬಾಲಕಿ ಆಘಾತಕ್ಕೆ ಒಳಗಾಗಿದ್ದು, ಆಕೆಗೆ ಕೌನ್ಸಿಲಿಂಗ್​ ಮಾಡಲಾಗುತ್ತಿದೆ ಎಂದು ಉಮರಿಯಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶಹವಾಲ್ ತಿಳಿಸಿದ್ದಾರೆ.

ಈ ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ಜಬಲ್ಪುರದಲ್ಲಿ ಇದ್ದು, ಕಳೆದ ಡಿಸೆಂಬರ್‌ನಲ್ಲಿ ತಾಯಿಯನ್ನು ಭೇಟಿಯಾಗಲು ಜಬಲ್ಪುರದಿಂದ ಉಮರಿಯಾಕ್ಕೆ ಬಂದಿದ್ದಳು. ಬಾಲಕಿ ಮತ್ತೆ ಜಬಲ್‌ಪುರಕ್ಕೆ ಹೋಗುವಾಗ, ಆಕಾಶ್ ಸಿಂಗ್ ಎಂಬ ವ್ಯಕ್ತಿಯನ್ನು ಜನವರಿ 1 ರಂದು ಉಮರಿಯಾದಲ್ಲಿ ಭೇಟಿಯಾಗಿದ್ದಾಳೆ. ಜನವರಿ 4 ರಂದು ಆಕಾಶ್ ಸಿಂಗ್ ಮತ್ತೆ ಅವಳನ್ನು ಸಂಪರ್ಕಿಸಿ ಹತ್ತಿರದ ಉಪಾಹಾರ ಗೃಹಕ್ಕೆ ಕರೆದೊಯ್ದಿದ್ದಾನೆ.

ಈ ವೇಳೆ ಆಕಾಶ್​ ಸಿಂಗ್ ಧಾಬಾ ಮಾಲೀಕ ಪ್ಯಾರಾಸ್ ಸೋನಿ ಮತ್ತು ಓಂಕರ್ ರೈ ಎಂಬನೊಂದಿಗೆ ಸೇರಿ ಜನವರಿ 4 ರಂದು ಉಮೇರಿಯಾದ ಸೋನಿಯ ಡಾಬಾದಲ್ಲಿ ಮೊದಲ ಬಾರಿಗೆ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾರೆ. ಭಯದಿಂದ, ಅವಳು ಈ ಘಟನೆಯನ್ನು ಯಾರಿಗೂ ಹೇಳಿಕೊಳ್ಳಲಿಲ್ಲ.

ನಂತರ ಶಹವಾಲ್​, ಆಕಾಶ್​ ಸಿಂಗ್ ಮತ್ತು ರಾಹುಲ್ ಎಂಬ ಮೂವರು ತಮ್ಮ ಕೃತ್ಯಕ್ಕೆ ಕ್ಷಮೆ ಕೇಳುವ ಸೋಗಿನಲ್ಲಿ ಜನವರಿ 11 ರಂದು ಉಮರಿಯಾ ಮಾರುಕಟ್ಟೆಯಲ್ಲಿ ಮತ್ತೆ ಆಕೆಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಬಾಲಕಿಯನ್ನು ಕಾಡಿಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅಲ್ಲಿಂದ ಆಕೆಯನ್ನು ಡಾಬಾಗೆ ಕರೆದೊಯ್ದು ರಾತ್ರಿ ಇಡೀ ಒತ್ತೆಯಾಳಾಗಿ ಇರಿಸಿಕೊಂಡಿದ್ದರು.

ನಂತರ, ಪರಾಸ್ ಸೋನಿ ಮತ್ತು ಇತರ ನಾಲ್ವರು ಅವಳ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಾಲಕಿ ತನ್ನನ್ನು ಬಿಟ್ಟುಬಿಡುಂತೆ ಆರೋಪಿಗಳಲ್ಲಿ ವಿನಂತಿಸಿದಳು. ಅತ್ಯಾಚಾರ ಎಸಗಿ ಮರುದಿನ ಬಾಲಕಿಯನ್ನು ಟ್ರಕ್‌ನಲ್ಲಿ ಆಕೆಯ ಮನೆಗೆ ಕಳುಹಿಸಿದ್ದರು. ಈ ವೇಳೆ ತನಗೆ ನಡೆದ ಆಘಾತವನ್ನು ಆಕೆ ಟ್ರಕ್ ಚಾಲಕ ರೋಹಿತ್ ಯಾದವ್ ಜೊತೆ ಹಂಚಿಕೊಂಡಿದ್ದಳು.

ಆದರೆ, ಆತ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಬದಲು ಆತನೂ ಆಕೆಯ ಮೇಲೆ ಅತ್ಯಚಾರ ಎಸಗಿ ಉಮರಿಯಾ-ಕಾಟ್ನಿ ರಸ್ತೆಯ ಟೋಲ್ ಪ್ಲಾಜಾ ಬಳಿ ಬಿಟ್ಟು ಹೋಗಿದ್ದ. ಬಾಲಕಿ ಅಲ್ಲಿಂದ ಮತ್ತೊಂದು ಟ್ರಕ್​ನಲ್ಲಿ ಹೇಗೋ ಜನವರಿ 13 ರಂದು ತನ್ನ ಮನೆಗೆ ತಲುಪಿದ್ದಾಳೆ” ಎಂದು ಪೊಲೀಸ್​ ವರಿಷ್ಠಾಧಿಕಾರಿ ವಿಕಾಸ್​ ಶಹವಾಲ್​ ತಿಳಿಸಿದ್ದಾರೆ.

ಟ್ರಕ್​ ಚಾಲಕನನ್ನು ಇನ್ನೂ ಪತ್ತೆ ಮಾಡಲಾಗಿಲ್ಲ. ಆದರೆ, ಉಳಿದ 8 ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಶಹವಾಲ್​ ಮಾಹಿತಿ ನೀಡಿದ್ದಾರೆ.

ಇನ್ನು ಬಾಲಕಿ ಜನವರಿ 11 ರಂದು ನಾಪತ್ತೆಯಾಗಿದ್ದರೂ ಕುಟುಂಬಸ್ಥರು ಆಕೆಯನ್ನು ಊರಲ್ಲೆಲ್ಲಾ ಹುಡುಕಿದ್ದಾರೆಯೇ ವಿನಃ ಜನವರಿ 12ರ ವರೆಗೂ ದೂರು ದಾಖಲಿಸಿರಲಿಲ್ಲ. ಇದೀಗ ಘಟನೆಯಿಂದಾಗಿ ಇಡೀ ಕುಟುಂಬ ಖಿನ್ನತೆಗೆ ಒಳಗಾಗಿದೆ.

ತಂದೆ ಜಬಲ್ಪುರದ ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಉದ್ಯೋಗಿಯಾಗಿದ್ದರೆ, ತಾಯಿ ಉಮರಿಯಾದ ತಮ್ಮ ಪೂರ್ವಜರ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು