ಬೆಂಗಳೂರು: ರಾಜ್ಯದ ಸುಮಾರು 52.50 ಲಕ್ಷ ಕೃಷಿ ಕುಟುಂಬಗಳಿಗೆ ಲಾಭದಾಯಕವಾಗಿರುವ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಈ ವರ್ಷದ ಮೂರು ಕಂತುಗಳಲ್ಲಿ ಮೊದಲ ಕಂತಿನ ಮೊತ್ತ 1049 ಕೋಟಿ ರೂ. ಬಿಡುಗಡೆ ಮಾಡಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಕರ್ನಾಟಕದ ರೈತರ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧನ್ಯವಾದ ಅರ್ಪಿಸಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅವರು ದೇಶದ ರೈತರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗೋಡೌನ್‌ಗಳ ನಿರ್ಮಾಣ ಸೇರಿ ವಿವಿಧ ಕೃಷಿ ಪರಿಕರಗಳ ಸೌಲಭ್ಯ ನೀಡಲು 1 ಲಕ್ಷ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಬಿಎಸ್‌ವೈ ರೈತರ ಪರವಾಗಿ ಪ್ರಧಾನಿಯವರನ್ನು ಅಭಿನಂದಿಸಿದ್ದಾರೆ.
ರಾಜ್ಯದ ಸುಮಾರು 52.50 ಲಕ್ಷ ಕೃಷಿ ಕುಟುಂಬಗಳಿಗೆ ಲಾಭದಾಯಕವಾಗಿರುವ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಈ ವರ್ಷದ ಮೂರು ಕಂತುಗಳಲ್ಲಿ ಮೊದಲ ಕಂತಿನ ಮೊತ್ತ 1049 ಕೋಟಿ ರೂ. ಬಿಡುಗಡೆ ಮಾಡಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಕರ್ನಾಟಕದ ರೈತರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. #AatmaNirbharKrishi@narendramodi @nstomar pic.twitter.com/x34mKHi06T
— B.S. Yediyurappa (@BSYBJP) August 9, 2020