NEWSಕೃಷಿನಮ್ಮಜಿಲ್ಲೆ

ಪಿರಿಯಾಪಟ್ಟಣ: ರಾಗಿ ಖರೀದಿ ಕೇಂದ್ರದ ಮುಂದೆ ರೈತರ ದಿಢೀರ್ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಕಿಡಿ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ರಾಗಿ ಖರೀಧಿ ಕೇಂದ್ರದಲ್ಲಿ ಅಧಿಕಾರಿಗಳು ರೈತರಿಂದ ಹಣ ವಸುಲಿ ಹಾಗೂ ತೂಕ ಮತ್ತು ಅಳತೆಯಲ್ಲಿ ಗೋಲ್ ಮಾಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ರಾಗಿ ಖರೀದಿ ಕೇಂದ್ರ ಹಾಗೂ ಬೆಟ್ಟದಪುರ ವೃತ್ತದಲ್ಲಿ ಧಿಡೀರ್ ಪ್ರತಿಭಟನೆ ನಡೆಸಿದರು.

ರೈತರು ಬೆಳೆದಿರುವ ರಾಗಿ ಖರೀದಿಗೆ ಸರ್ಕಾರ 3,295 ರೂ.ಗಳ ಬೆಂಬಲ ಬೆಲೆ ನಿಗದಿಪಡಿಸಿ ಪಟ್ಟಣದ ಎಪಿಎಂಸಿ ಆವರಣ ಮತ್ತು ಬೆಟ್ಟದಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ಕೇಂದ್ರಗಳಲ್ಲಿ ರಾಗಿ ಖರೀದಿಗೆ ಅವಕಾಶ ಕಲ್ಪಿಸಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಜವಾಬ್ದಾರಿ ನೀಡಿದೆ.

ಆದರೆ ರೈತರು ಖರೀದಿ ಮಾಡಲು ಮಾರುಕಟ್ಟೆಗೆ ಬಂದರೆ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ರೈತರಿಂದ ಪ್ರತಿ ಕ್ವಿಂಟಲಿಗೆ 4 ಕೆಜಿ ರಾಗಿಯನ್ನು ಉಚಿತವಾಗಿ ಕೊಡಬೇಕು. ಅಲ್ಲದೆ ಪ್ರತಿ ಕ್ವಿಂಟಲ್ ರಾಗಿಗೆ ಇಂತಿಷ್ಟು ಕಮಿಷನ್ ನೀಡಬೇಕು. ಇಲ್ಲದಿದ್ದರೆ ಸಬೂಬು ಹೇಳಿ ವಿಳಂಬ ಮತ್ತು ವಾಪಾಸ್ ಕಳುಹಿಸುತ್ತಾರೆ.

ರಾಗಿಯನ್ನು ಮಾರಾಟಕ್ಕೆ ತಂದು ವಾರಗಟ್ಟಲೇ ಕಳೆದಿದೆ ಆದರೂ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಇಲ್ಲ ಸಲ್ಲದ ನೆಪ ಹೇಳಿ ನಮ್ಮನ್ನು ವಾಪಾಸ್ ಕಳುಹಿಸುತ್ಥಾರೆ ಎಂದು ದೂರಿದರು.

ಸರ್ಕಾರದ ಮಾನದಂಡ ಪ್ರಕಾರ 12 ಪರ್ಸೆಂಟು ತೇವಾಂಶ ಉಳ್ಳ ಮತ್ತು ಉತ್ತಮ ಗುಣಮಟ್ಟದ ರಾಗಿ ಖರೀದಿ ಮಾಡಲು ನಿರ್ಧರಿಸಲಾಗಿದೆ. ರಾಗಿಯನ್ನು ರೈತರು ಮತ್ತು ಅಧಿಕಾರಿಗಳ ಒಡಂಬಡಿಕೆ ಅಂತೆ ರಾಗಿ ಖರೀದಿ ಮಾಡುತ್ತಿದ್ದು ರಾಗಿಯನ್ನು ಮೈಸೂರಿನ ಉಗ್ರಾಣ ನಿಗಮದ ದಲ್ಲಿ ಶೇಕರಣೆ ಮಾಡದೆ. ತಾಲೂಕಿನ ರೈತರ ರಾಗಿಯನ್ನು ನಿರಾಕರಿಸಿ ಬೇರೆ ತಾಲೂಕಿನ ರಾಗಿಯನ್ನು ಉಗ್ರಾಣದಲ್ಲಿ ಶೇಖರಣೆ ಮಾಡುತ್ತಿದ್ದಾರೆ.

ಇಲ್ಲಿನ ಅಧಿಕಾರಿಗಳು ಮೈಸೂರಿನಲ್ಲಿ ನಿರಾಕರಿಸುತ್ತಿರುವ ರಾಗಿಯನ್ನು ಉಗ್ರಾಣಗಳಿಗೆ ಶೇಖರಣೆ ಮಾಡುವವರೆಗೂ ರಾಗಿ ಖರೀದಿಸುವುದಿಲ್ಲ ಹಾಗೂ ಉತ್ತಮ ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿಸಲು ಸೂಚಿಸಲಾಗಿದೆ ಎಂದು ರೈತರ ರಾಗಿಯನ್ನು ಖರೀದಿಸದೆ ನಿರ್ಲಕ್ಷೆ ಮಾಡುತ್ತಿದ್ದಾರೆ.

ರೈತರು ತಮ್ಮ ಟ್ರ್ಯಾಕ್ಟರ್ ಗಳಲ್ಲಿ ಮತ್ತು ಬಾಡಿಗೆ ಟ್ಯಾಕ್ಟರ್ ಗಳಲ್ಲಿ ಒಂದು ವಾರಗಳಿಂದ ಎಪಿಎಂಸಿ ಆವರಣದಲ್ಲಿ ಬೀಡು ಬಿಟ್ಟಿದ್ದು ಅಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಕುಡಿಯಲು ನೀರಿಲ್ಲದೆ ಶೌಚಾಲಯವಿಲ್ಲದೆ ಪರದಾಡುತ್ತಿದ್ದೇವೆ.

ಉಗ್ರಾಣ ನಿಗಮದ ಖರೀದಿಯ ವ್ಯವಸ್ಥಾಪಕ ಹರೀಶ್ ರೈತರನ್ನು ಕಡೆಗಣಿಸುತ್ತಿದ್ದು, ಇದನ್ನು ಮನಗಂಡ ರೈತರು ದಿಢೀರನೆ ತಮ್ಮ ಟ್ರ್ಯಾಕ್ಟರ್ ಗಳ ಮೂಲಕ ಬೆಟ್ಟದಪುರ ಸರ್ಕಲ್ ಬಳಿ ಬಂದು ರಸ್ತೆ ತಡೆ ನಡೆಸಿ ನ್ಯಾಯ ಒದಗಿಸುವಂತೆ ತಹಸೀಲ್ದಾರ್ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಉಗ್ರಾಣ ನಿಗಮದ ಖರೀದಿಯ ವ್ಯವಸ್ಥಾಪಕ ಹರೀಶ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಶಿರಸ್ತೇದಾರ್ ಸಣ್ಣಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್, ಸೇರಿದಂತೆ ನೂರಾರು ರೈತರುಇದ್ದರು.

Leave a Reply

error: Content is protected !!
LATEST
KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ ಮೇಲುಸೇತುವೆ-ಕೆಳಸೇತುವೆಗಳ ನಿರ್ವಹಣೆ ಸರಿಯಾಗಿ ಮಾಡಿ: ತುಷಾರ್ ಗಿರಿನಾಥ್ ದೆಹಲಿ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಅತಿಶಿ: ಎಎಪಿ ನಾಯಕರ ಸಭೆಯಲ್ಲಿ ನಿರ್ಧಾರ BMTC 1500 ನಿವೃತ್ತ ನೌಕರರ ಗ್ರಾಚ್ಯುಟಿ, EL ಹಣ 400 ಕೋಟಿ ರೂ.ಬಾಕಿ: 16-18 ತಿಂಗಳಿನಿಂದ ಕೇಂದ್ರ ಕಚೇರಿಗೆ ಅಲೆದಾಟ!! ಸುಪ್ರೀಂ ಕೋರ್ಟ್ ಅಧಿಕೃತ  ಭಾಷೆ ಇಂಗ್ಲಿಷ್- ಹಿಂದಿಯಲ್ಲಿ ವಾದಕ್ಕೆ ಅನುಮತಿ ಇಲ್ಲ: ವಕೀಲರಿಗೆ ನೆನಪಿಸಿದ ಕೋರ್ಟ್‌ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿ ಮಾಡದಂತ ಕಟ್ಟುನಿಟ್ಟಿನ ಕಾನೂನು ಜಾರಿಗೆ ರೈತ ಮುಖಂಡರ ಆಗ್ರಹ KSRTC ಬಸ್‌ -ಕಾರು ನಡುವೆ ಅಪಘಾತ: ಅನಾರೋಗ್ಯದ ನಡುವೆ ಕಾರು ಚಲಾಯಿಸಿದ ಪತಿ ಮೃತ- ಪತ್ನಿ ಪ್ರಾಣಾಪಾಯದಿಂದ ಪಾರು