NEWSಕೃಷಿನಮ್ಮಜಿಲ್ಲೆ

ಉದಯಿಸುತ್ತಿದ್ದ ಸೂರ್ಯ, ತಂಗಾಳಿಯ ಮಧ್ಯೆ ರೈತರ ಗುಂಪೊಂದು ಕಲಿಯುತ್ತಿತ್ತು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಆಗ ತಾನೇ ಸೂರ್ಯ ಉದಯಿಸುತ್ತಿದ್ದ… ತಂಗಾಳಿಯ ಮಧ್ಯೆ… ರೈತರ ಗುಂಪೊಂದು ಜೊತೆಯಲ್ಲಿ ಕುಳಿತು ಕಲಿಯುತ್ತಿದ್ದರು..ಅರೇ ಇದೇನು ಎಂದು ಯೋಚಿಸುತ್ತಿರುವಿರಾ? ಈ ತರಹ ಶಾಲೆ ಭಾಗಶಹ: ನೀವು ನೋಡಿರುವುದಿಲ್ಲ ಈ ತರಹ ರೈತರ ಪಾಠ ಶಾಲೆ ಕಂಡಿದ್ದು ಚಿತವಾಡಗಿ ರಸ್ತೆಯ ವೀರಾಪುರದಲ್ಲಿರುವ ರೈತರಾದ ನಿಂಗಪ್ಪ ರಾಮವಾಡಗಿ ಹೊಲದಲ್ಲಿ.

ಕೆಬಿಜೆಎನ್‍ಎಲ್, ಕೃಷಿ ಇಲಾಖೆ, ಡಿಮ್ಯಾಕ್, ಅಮೃತ ರೈತ ಉತ್ಪಾದಕರ ಸಂಘ, ತೋಟಗಾರಿಕ ಇಲಾಖೆ ಜೈನ ನೀರಾವರಿ ಜಂಟಿ ಆಯೋಗದಲ್ಲಿ ಈ ಹೊಸ ಪ್ರಯೋಗವನ್ನು ಮಾಡಲಾಯಿತು ಈ ರೈತರ ಪಾಠಶಾಲೆಯಲ್ಲಿ ಮೆಣಸಿನಕಾಯಿ ಬೆಳೆಯ ಸಂಪೂರ್ಣ ಬೇಸಾಯ ಕ್ರಮ ತಿಳಿಸಿಕೊಡಲಾಯಿತು.

ಮೆಣಸಿನ ಕಾಯಿ ಬೆಳೆಯು ವಾಣಿಜ್ಯ ಬೆಳೆಯಾಗಿದ್ದು ಇದು ಮುಖ್ಯವಾಗಿ 180 ದಿನದಲ್ಲಿ ಬೆಳೆ ಬರುತ್ತದೆ. ಇಲ್ಲಿ ರೈತರ ಜೊತೆಯಲ್ಲಿ ಕೃಷಿ ಪದವೀಧರರು ಕೂಡ ಭಾಗವಹಿಸಿ ತಿಳಿವಳಿಕೆ ನೀಡಿದರು.

ಮುಖ್ಯವಾಗಿ ಈ ಪಾಠಶಾಲೆಯಲ್ಲಿ ತಂತ್ರಜ್ಞಾನದ ಮೂಲಕ ಹೇಗೆ ಅಧಿಕ ಇಳುವರಿ ಪಡೆಯಬಹುದು. ಇದರೊಂದಿಗೆ ಪ್ರತಿ ತಿಂಗಳಿಗೊಮ್ಮೆ ರೈತರ ಜಮಿನಿನಲ್ಲಿ ಬಂದು ವೈಜ್ಞಾನಿಕವಾಗಿ ರೈತರು ಬೇಸಾಯದ ಬಗ್ಗೆ ಕಲಿಯುವುದು ಇದರ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಎಎಚ್‍ಒ ಅಧಿಕಾರಿ ಶಕುಂತಲ, ಕೃಷಿ ಅಧಿಕಾರಿ ಹರಿಪ್ರಸಾದ್ ಪುರೋಹಿತ್, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ಸಂಗಮೇಶ್ ಸಜ್ಜನ್, ಜೈನ ನೀರಾವರಿಯ ಹಿರಿಯ ಸಲಹೆಗಾರಾರದ ಪ್ರಭಾಕರ್ಡಿ.

ಮ್ಯಾಕ್ ಸಂಸ್ಥೆಯ ಯೋಜನ ವ್ಯವಸ್ಥಾಪಕರಾದ ಸುರೇಶ್ ಷಣ್ಮುಗಂ, ದೋನಿ ( ವಿಸ್ತರಣಾ ಅಧಿಕಾರಿ), ಜೂನಿಯರ್ ಅಗ್ರೋನಮಿಸ್ಟ್ ಪರಶುರಾಮ್, ಆಕಾಶ್, ಯೋಜನಾ ಅಧಿಕಾರಿ ಮಾನಸ ಗೌಡ, ಡಾ. ವಿಕ್ಕಿ ( ಸಲಹೆಗಾರಾರದ) ಕ್ಷೇತ್ರ ಸಂಯೋಜಕರಾದ ಬಸವನಗೌಡ ಗೌಡರ್, ಪಾಠ ಶಾಲೆಯಲ್ಲಿ 50 ರೈತರು ಭಾಗವಹಿಸಿದ್ದರು.

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ