ಬೆಂಗಳೂರು: ನ್ಯಾಯಾದೀಶರ ಮನೆಯಲ್ಲಿ ಮದುವೆಯಿದೆ ಎಂದು ಬಟ್ಟೆ ಅಂಗಡಿ ಮಾಲೀಕನಿಗೆ ಕರೆ ಮಾಡಿ ಸುಮಾರು 3 ಲಕ್ಷ ರೂ. ಮೌಲ್ಯದ 120 ಸೀರೆಗಳನ್ನು ಅಪಾರ್ಟ್ಮೆಂಟ್ವೊಂದಕ್ಕೆ ತರಿಸಿಕೊಂಡು ನೋಡಿದ ನಂತರ ಇವುಗಳನ್ನು ನ್ಯಾಯಾಧೀಶರಿಗೆ ತೋರಿಸಿ ಬಳಿಕ ಹಣ ನೀಡುವುದಾಗಿ ಹೇಳಿ ಪರಾರಿಯಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಶಶಿಕಲಾ ಎಂಬುವರೆ ಬಟ್ಟೆ ವ್ಯಾಪಾರಿಯನ್ನು ಯಾಮಾರಿಸಲು ಹೋಗಿ ಈಗ ಕಂಬಿ ಎಣಿಸುತ್ತಿರುವ ಕಳ್ಳಿಯಾಗಿದ್ದಾಳೆ. ಈಕೆ ನ್ಯಾಯಾಧೀಶರ ಮನೆಯಲ್ಲಿ ಮದುವೆಯಿದೆ ಎಂದು ಹೇಳಿ ಸೀರೆ ಖರೀದಿಸಿದ್ದು, ಬಳಿಕ ಹಣ ನೀಡದೆ ತಲೆ ಮರೆಸಿಕೊಂಡಿದ್ದಳು. ಈ ಸಂಬಂಧ ಬಟ್ಟೆ ವ್ಯಾಪಾರಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ದೂರುದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಯನ್ನು ಪತ್ತೆಹಚ್ಚಿ ಬಂಧಿಸಿದ್ದು, 120 ಸೀರೆಗಳನ್ನು ವಶಕ್ಕೆ ಪಡೆದಿದ್ದಾರೆ.