NEWSಲೇಖನಗಳುಸಂಸ್ಕೃತಿ

ಆಸೆಯೇ ಅಧಃಪತನಕ್ಕೆ ಕಾರಣ

ದಿನಕ್ಕೊಂದು ಕಥೆ- ಡಾ.ಈಶ್ವರಾನಂದ ಸ್ವಾಮೀಜಿ

ವಿಜಯಪಥ ಸಮಗ್ರ ಸುದ್ದಿ

ಒಂದು ಊರಲ್ಲಿ ರಾಮಯ್ಯಶೆಟ್ಟಿ ಎಂಬ ದುರಾಸೆಯ ವ್ಯಕ್ತಿ ಕಿರಾಣಿ ವ್ಯಾಪಾರ ಮಾಡುತ್ತಿದ್ದನು. ತಾನು ಮಾಡುವ ಸರಕಿನ ಮೇಲೆ ವಿಪರೀತವಾಗಿ ಲಾಭಗಳನ್ನು ಆಶಿಸುತ್ತಾ. ತನಗೆ ಮಾರುವವರಿಗೆ ನಷ್ಟ ಮಾಡಿ ಆನಂದಿಸುವ ಮನಸ್ಸು ಅವನದು.

ರಾಮಯ್ಯ ಪಟ್ಟಣದಿಂದ ಸರಕುಗಳನ್ನು ತರುವಾಗ ದಾರಿ ಮಧ್ಯದಲ್ಲಿರುವ ಒಂದು ನದಿಯನ್ನು ತೆಪ್ಪದ ಮೂಲಕ ದಾಟಬೇಕಾಗಿತ್ತು. ತೆಪ್ಪದಲ್ಲಿ ಒಬ್ಬ ಮನುಷ್ಯ ಏರಿದಾಗ ತನ್ನೊಂದಿಗೆ ಒಂದು ಮೂಟೆಯನ್ನು ತೆಗೆದುಕೊಂಡು ಹೋದರೆ ಅದಕ್ಕೆ ಪ್ರತ್ಯೇಕ್ಷ ಹಣ ಸಲ್ಲಿಸುವ ಅವಶ್ಯಕತೆ ಇಲ್ಲ. ಈ ಪದ್ಧತಿ ಬಂಡವಾಳ ಮಾಡಿಕೊಂಡು ರಾಮಯ್ಯಶೆಟ್ಟಿ ಅದರಲ್ಲೆಲ್ಲಾ ಕಿರಾಣಿ ಮೂಟೆಗಳನ್ನು ತುಂಬುತ್ತಿದ್ದನು. ತಾನು ಮಾತ್ರ ತಕ್ಕ ಹಣ ಸಲ್ಲಿಸಿ, ಸರಕುಗಳಿಗೆ ಯಾವ ವಿಧವಾಗಿ ಹಣವಿಲ್ಲದೆ ನದಿ ದಾಟಿಸುತ್ತಿದ್ದ. ತೆಪ್ಪವನ್ನು ನಡೆಸುವ ಮಲ್ಲಯ್ಯ ಎಂಬುವವ ಬಹಳ ಒಳ್ಳೆಯವನು. ಅಲ್ಲದೆ ಅಮಾಯಕ. ರಾಮಯ್ಯಶೆಟ್ಟಿ ತೆಪ್ಪದಲ್ಲಿ ಇತರರಿಗೆ ಸ್ಥಳ ಇಲ್ಲದಂತೆ ಮಾಡುವುದರಿಂದ, ತನಗೆ ನಷ್ಟ ಸಂಭವಿಸುತ್ತಿದ್ದರೂ ಏನೂ ಹೇಳದ ಸಭ್ಯವಂತನು. ಇದರಿಂದ ರಾಮಯ್ಯಶೆಟ್ಟಿ ದುರಾಸೆ ಮತ್ತಷ್ಟು ಹೆಚ್ಚಾಯಿತು.

ಹೀಗಿರಲು ಒಂದು ದಿನ ರಾಮಯ್ಯಶೆಟ್ಟಿ ತೆಪ್ಪದಲ್ಲಿ ಅಗತ್ಯಕ್ಕಿಂತಲೂ ಭಾರದ ಸರಕುಗಳನ್ನು ತುಂಬಿಸಿದನು. ಇದನು ನೋಡಿದ ಮಲ್ಲಯ್ಯ ರಾಮಯ್ಯಶೆಟ್ಟಿಗೆ “ಇದರಲ್ಲಿನ ಅರ್ಧ ಸರಕುಗಳನ್ನು ತುಂಬಿಸಿದನು. ಇದನ್ನು ನೋಡಿದ ಮಲ್ಲಯ್ಯ ಏನಾದರೂ ಪ್ರಮಾದ ಜರುಗಬಹುದೆಂಬ ಭಯಪಟ್ಟನು. ಆಗ ಮಲ್ಲಯ್ಯ ರಾಮಯ್ಯಶೆಟ್ಟಿಗೆ “ಇದರಲ್ಲಿನ ಅರ್ಧ ಸರಕುಗಳನ್ನು ಕೆಳಗಿಳಿಸಿ, ಮತ್ತರ್ಧ ಸರಕನ್ನು ಮತ್ತೊಮ್ಮೆ ಬಂದು ಕೊಂಡುಹೋಗೋಣ, ದಯಮಾಡಿ ನನ್ನ ಮಾತನ್ನು ಕೇಳಿರಿ” ಎಂದನು.

ಜಿಪುಣರಿಗೆ ಖರ್ಚು ಕಡಿಮೆ ಮಾಡುವ ವಿಧಾನವೇ ದೃಷ್ಟಿಯಲ್ಲಿರುವುದರಿಂದ ಹಿತವಚನ ರುಚಿಸುವುದಿಲ್ಲ. ಮೂರ್ಖತ್ವವೆಂಬ ಅಂಧಕಾರ ಉಂಟಾದಾಗ ಜರುಗಿ ಹೊಗುವ ಪ್ರಮಾದದ ಬಗ್ಗೆ ಯೋಚಿಸುವುದಿಲ್ಲ. ಒಮ್ಮೆ ಮನುಷ್ಯನನ್ನು ತೆಪ್ಪದ ಮೂಲಕ ನದಿಯನ್ನು ದಾಟಿಸಲು ಒಂದು ಕಾಸು ಆಚೆ ದಡದಲ್ಲಿ ಬಿಟ್ಟು ಬಂದ ಅರ್ಧ ಸರಕನ್ನು ತರಲು ಮತ್ತೊಂದು ಕಾಸು, ಅಲ್ಲಿಂದ ತಿರುಗಿಬರಲು ಮತ್ತೊಂದು ಕಾಸು, ಹೀಗಾದರೆ ಮೂರು ಕಾಸು ಖರ್ಚಾಗುತ್ತದೆ. ಒಮ್ಮೆ ಮಾತ್ರ ಹೋಗಿ ಬಂದರೆ ಅದರಿಂದ ಉಳಿಯುವುದು ಎರಡು ಕಾಸು. ಹೀಗೆ ಶೆಟ್ಟಿಯು ದುರಾಸೆಯಿಂದ ಮಲ್ಲಯ್ಯನ ಎಚ್ಚರಿಕೆಯನ್ನು ಲೆಕ್ಕಿಸಲಿಲ್ಲ.

ತೆಪ್ಪ ಅರ್ಧ ದೂರ ಸಾಗುತ್ತಿರಲು ಊಹಿಸಿದಂತೆ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯಿತು. ಅದರಿಂದ ತೆಪ್ಪ ಚೂರು ಚೂರಾಗಿ ಅದರಲ್ಲಿನ ಕಿರಾಣಿ ಮೂಟೆಗಳು ನದಿಯಲ್ಲಿ ಕೊಚ್ಚಿಹೋದವು. ನೀರಿನಲ್ಲಿ ಬಿದ್ದು ಈಜು ಬಾರದ ರಾಮಯ್ಯ ನೀರು ಕುಡಿದು ಮೃತ್ಯುವಿಗೆ ಹತ್ತಿರವಾದನು. ಮಲ್ಲಯ್ಯನು ಶೆಟ್ಟಿಯ ದುಃಸ್ಥಿತಿಯನ್ನು ಭುಜದ ಮೇಲೆ ಹೊತ್ತುಕೊಂಡು ಅತಿ ಕಷ್ಟದಿಂದ ಈಜುತ್ತಾ ದಡ ಸೇರಿಕೊಂಡನು. ಇಬ್ಬರ ಪ್ರಾಣ ಉಳಿಯಿತು.

ಎರಡು ಕಾಸುಗಳಿಗೋಸ್ಕರ ಸಾವಿರಾರು ಕಾಸು ಬೆಲೆ ಬಾಳುವ ಸರಕು ನೀರಲ್ಲಿ ಮುಳುಗಿ ನಷ್ಟವಾಯಿತು. ಜೊತೆಗೆ ಮೂರು ನೂರು ಕಾಸು ಜುಲ್ಮಾನೆಯಲನ್ನು ಮಲ್ಲಯ್ಯನಿಗೆ ನೀಡಬೇಕಾಯಿತು. ಇದರಿಂದ ರಾಮಯ್ಯನಿಗೆ ಆದ ಭಯ ಅಷ್ಟಿಷ್ಟಲ್ಲ. ಮಲ್ಲಯ್ಯಗೆ ತನ್ನ ಹಳೇ ತೆಪ್ಪದ ಸ್ಥಾನದಲ್ಲಿ ಹೊಸ ತೆಪ್ಪ ದಕ್ಕಿತ್ತು. ಅದರ ಜೊತೆ ಧನಲಾಭ ಕೂಡ ಲಭಿಸಿತು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು