NEWSನಮ್ಮರಾಜ್ಯರಾಜಕೀಯಲೇಖನಗಳು

ಸುಳ್ಳನ್ನು ವೈಭವೀಕರಿಸುವ ಮಾಧ್ಯಮಗಳಿಗೊಂದು ಕಿವಿ ಮಾತು: ಸ್ವತಃ ನೀವೇ ಕನ್ನಡಿ ಮುಂದೆ ನಿಂತು ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸತ್ಯದ ಕನ್ನಡಿ
ಬೆಂಗಳೂರು: ಇಂದು ಕೆಲವು ಸುದ್ದಿ ಮಾಧ್ಯಮಳು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ನೊಂದವರ ಪರವಾಗಿ ನಿಂತು ಕಾನೂನು ಹೋರಾಟ ಮಾಡುವುದಕ್ಕಿಂತ ಈ ಕಂತೆ ಕಂತೆ ನೋಟುಗಳನ್ನು ನಾಯಿಗೆ ಬಿಸ್ಕತ್‌ ಬಿಸಾಕಿದಂತೆ ಕೆಲ ಮಾಧ್ಯಮಗಳು ಹಣ ಬಿಸಾಕುವವರ (ಮಾನವೀಯತೆ ಮರೆತವರ) ಪರ ನಿಂತಿವೆ.

ಇದು ಕಟು ಸತ್ಯ. ಇದನ್ನು ಗಮನಿಸಿದರೆ ನಮ್ಮ ಇಂದಿನ ಕೆಲವು ಸುದ್ದಿ ಮಾಧ್ಯಮಗಳು ಹಣವಂತರಿಗೆ ತಮ್ಮ ತಾಯಿಯನ್ನೂ ಮಾರೆಕೊಂಡಂತೆ ಕಾಣಿಸುತ್ತಿವೆ ( ಇಲ್ಲಿ ತಾಯಿ ಎಂದರೆ ಇಂಥ ನೀಚರನ್ನು ಪೋಷಿಸಿ ಬೆಳೆಸುತ್ತಿರುವ ವೃತ್ತಿ ಮತ್ತು ಸುದ್ದಿ ಸಂಸ್ಥೆಗಳು). ಹಣ ಸಂಪಾದನೆಯನ್ನೇ ಒಂದು ಪ್ರಮುಖ ಗುರಿಯಾಗಿಸಿಕೊಂಡು ಸುದ್ದಿ ಸಂಸ್ಥೆಗಳನ್ನು ತೆರೆದಿದ್ದರೆ ಅಂತಹವರಿಗೊಂದು ಧಿಕ್ಕಾರ.

ಹೌದು ಇಂದು ಸಮಾಜ ಎತ್ತ ಸಾಗುತ್ತಿದೆ ಎಂದು ತಿಳಿಯದಾಗಿದೆ. ಒಂದು ಕಡೆ ಹಣವಂತರ ಪರವಾಗಿ ನಮ್ಮ ದೇಶದ ಸಂವಿಧಾನದ ವಿರುದ್ಧವಾಗಿ ನಿಂತಿರುವ ಇಂಥ ಸುದ್ದಿ ಮಾಧ್ಯಮಗಳು. ಬಡವರಿಗೆ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಮಾತನಾಡುತ್ತಿಲ್ಲ. ಬದಲಿಗೆ ಅಕ್ರಮ ದೌರ್ಜನ್ಯ ಎಸಗಿದವರ ಪರನಿಂತು ತಮ್ಮನ್ನು ತಾವು ಮಾರಿಕೊಂಡಿರುವೆ. ಇಂಥ ಸುದ್ದಿ ಮಾಧ್ಯಮಗಳಿಂದ ನಾವು ಏನನ್ನು ನಿರೀಕ್ಷೆ ಮಾಡಲು ಸಾಧ್ಯ?

ಭಾರತ ದೇಶದ ಸಂವಿಧಾನ ಇವರಿಗೆ ಲೆಕ್ಕಕ್ಕಿಲ್ಲ. ಇವರು ಬಿತ್ತರಿಸುವ ಸುದ್ದಿಗಳೇ ಸತ್ಯ ಎಂದು ಭಾವಿಸಬೇಕೆ. ಇಲ್ಲ ಇವರು ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂಬ ಕಟು ಸತ್ಯವನ್ನು ತಿಳಿದುಕೊಳ್ಳಬೇಕೆ. ಹಾಗಿದ್ದರೆ ಆ ಕಟು ಸತ್ಯದ ಬದಲಿಗೆ ಈ ರೀತಿ ಇಲ್ಲದಿರುವುದನ್ನು ಇದೇ ಸತ್ಯ ಎಂದು ಬಿಂಬಿಸಲು ಹೊರಟಿರುವ ಇಂಥ ಕೆಲ ಮಾಧ್ಯಮಗಳಿಗೆ ನಾವು ಇಂದು ಸಂವಿಧಾನ ಎಂದರೇನು ಎಂಬ ಪಾಠವನ್ನು ಎಲ್‌ಕಿಜಿ ಇಂದ ಪ್ರಾರಂಭಿಸಬೇಕೇನು?

ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಏಟು ಎಂಬ ನಾಣ್ನುಡಿಯಂತೆ ಇಂದು ನಾವು ಕೆಲ ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿಗೆ ಯಾವ ಪೆಟ್ಟುಕೊಡಬೇಕು ಎಂಬುದನ್ನು ಜನರೇ ನಿರ್ಧರಿಸಬೇಕಿದೆ. ನನಗೆ ಅನಿಸಿದ ಪ್ರಕಾರ ಹೇಳುವುದಾದರೆ ಅಂಥ ಮಾಧ್ಯಮಗಳಿಗೆ ಜನತಾ ನ್ಯಾಯಾಲದಲ್ಲಿ ಒಂದು ಒಳ್ಳೇ ತೀರ್ಪು ಕೊಡುವ ಕಾಲ ಸನ್ನಿಹಿತವಾಗುತ್ತಿದೆ. ಅದು ಆದಷ್ಟು ಶೀಘ್ರವಾಗಿ ಬರಲಿ ಎಂದು ಭಾವಿಸುತ್ತೇನೆ.

ಇನ್ನು ಕೆಲ ನೀಚರ ಪರ ನಿಂತು ಸುದ್ದಿಗಳನ್ನು ದಿನದ 24 ಗಂಟೆಗಳು ಗಂಟಲು ಹರಿದುಹೋಗುವ ರೀತಿ ಕಿರುಚಿಕೊಂಡು ಹೇಳುವುದೇನು. ನೀವು ಹೇಳುವುದಿದ್ದರೆ ಸತ್ಯದ ಪರ ನೊಂದವರ ಪರ ಹೇಳಿ. ಸಂವಿಧಾನವನ್ನು ಆ ಮೂಲಕ ಮೊದಲು ರಕ್ಷಣೆ ಮಾಡಿ. ಇದಿಂದ ನಿಮ್ಮ ರಕ್ಷಣೆಯೂ ಆಗುತ್ತದೆ ಎಂಬುದನು ತಿಳಿದುಕೊಳ್ಳಿ. ಅದನ್ನು ಬಿಟ್ಟು ಆ ಹರಿದು ಹೋಗುವ ಕಾಗದದ ನೋಟಿಗೆ ನಿಮ್ಮನ್ನು ನೀವು ಮಾರಿಕೊಳ್ಳುವುದು ಎಷ್ಟು ಸರಿ. ಈ ಸತ್ಯವನ್ನು ತಿಳಿಯಬೇಕಾದರೆ ಸ್ವತಃ ನೀವೇ ಕನ್ನಡಿ ಮುಂದೆ ನಿಂತು ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ.

ಭೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಅದನ್ನು ಯಾರು ಕಸಿದುಕೊಳ್ಳಬಾರದು ಎಂಬ ಸತ್ಯವನ್ನು ಈ ಕಾಗದದ ಕರೆನ್ಸಿ ತುಂಬಿಕೊಂಡಿರುವ ಕಾಮುಕರು, ಕಿಡಿಗೇಡಿಗಳಿಗೆ ತಿಳಿಸಲು ಪ್ರಾಮಾಣಿಕವಾದ ಸುದ್ದಿಗಳನ್ನು ಬಿತ್ತರಿಸಿ. ಆ ಮೂಲಕ ನಿಮ್ಮ ಆತ್ಮಸಾಕ್ಷಿ ಒಪ್ಪುವಂತಹ ಸುದ್ದಿಗಳನ್ನು ಪ್ರಸಾರ ಮಾಡುವುದನ್ನು ಕಲಿಯಿರಿ.

ಕಾಮುಕನಿಗಿಂತ ಹೆಚ್ಚಾಗಿ ನೀವೆ ಬೆತ್ತಲೆ ಮಾಡುತ್ತಿರುವುದು ಎಷ್ಟು ಸರಿ?
ಇನ್ನು ಒಬ್ಬ ಕಾಮುಕನ ಕಾಮಕ್ಕೆ ಬಲಿಯಾದ ಸಂತ್ರಸ್ತ ಯುವತಿಯ ವಿಚಾರಣೆ ನೆಪದಲ್ಲಿ ಆಕೆಯನ್ನು ಕಾಮುಕನಿಗಿಂತ ಹೆಚ್ಚಾಗಿ ನೀವೆ ಬೆತ್ತಲೆ ಮಾಡುತ್ತಿರುವುದು ಎಷ್ಟು ಸರಿ. ಇದನ್ನು ಮೊದಲು ನಿಲ್ಲಿಸಿ. ನಿಮ್ಮ ಮನೆಯ ಹೆಣ್ಣು ಮಕ್ಕಳಲ್ಲಿ ಈಕೆಯೂ ಒಬ್ಬಳು ಎಂದು ಭಾವಿಸಿ ನಂತರ ನಿಮ್ಮ ವಿಚಾರಣೆ ಸರಿಯೋ ತಪ್ಪೋ ಎಂಬ ಅರಿವು ನಿಮಗೆ ಆಗುವುದು. ಅದನ್ನು ಬಿಟ್ಟು ನಿಮ್ಮ ಕಣ್ಣಿಗೆ ಒಬ್ಬ ಕಾಮುಕ ಹೀರೋ ತರ ಕಂಡರೆ ಅದು ಅದು ನಿಮ್ಮ ಕಣ್ಣಿನಲ್ಲಿ ಬೆಳೆದಿರುವ ಪೊರೆ ಕಳಚಲು ಯಾರಿಂದಲೂ ಸಾಧ್ಯವಿಲ್ಲ.

ಅಂದರೆ, ನೀವು ನಾವು ಮಾಡುತ್ತಿರುವುದೇ ಸರಿ ಎಂದುಕೊಂಡಿದ್ದರೆ ಅದೂ ತಪ್ಪು. ಆ ನಿಮ್ಮ ಕಣ್ಣಿನ ಪೊರೆ ಕಳಚಲು ನಿಮ್ಮ ಆತ್ಮಕ್ಕೆ ಸಾಧ್ಯವಿದೆ. ಅದು ನಿಮಗೆ ಸತ್ಯದ ಅರಿವನ್ನು ಮೂಡಿಸುತ್ತದೆ. ಆ ನಿಮ್ಮ ಆತ್ಮದ ನ್ಯಾಯಾಲಯದಲ್ಲಿ ನಿಮಗೆ ಶಿಕ್ಷೆಯೂ ಬಹು ಬೇಗನೇ ಸಿಗುತ್ತದೆ ಎಂಬುದನ್ನು ನಾವು ನಂಬಿದ್ದೇವೆ. ಆದರೆ ಅದು ಹೊರ ಪ್ರಪಂಚಕ್ಕೆ ಕಾಣುವುದಿಲ್ಲ. ನಿತ್ಯ ಯಮ ಯಾತನೆ ಅನುಭವಿಸುವ ನಿಮಗೆ ಮಾತ್ರ ಗೋಚರಿಸುತ್ತದೆ.

ಸರಿಯಾದ ನಿದ್ರೆ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಸ್ವತಃ ನಿಮ್ಮ ಕುಟುಂಬದವರೊಂದಿಗೆ ನೀವು ಸಂತೃಪ್ತಿಯ ಜೀವನ ನಡೆಸಲು ಕಂಡಿತ ಸಾಧ್ಯವಿಲ್ಲ. ಇಂಥ ಜೀವನ ನಿಮಗೆ ಬೇಕಾ. ಇನ್ನು ಕಾಲಮಿಂಚಿಲ್ಲ. ನಿಮ್ಮ ತಪ್ಪುಗಳನ್ನು ಮೊದಲು ಸರಿಮಾಡಿಕೊಂಡು ಇನ್ನಾದರೂ ನೀವು ಮನುಜರಾಗಿ.

ನೊಂದವರಿಗೆ ಸಾಂತ್ವನ ಹೇಳಿ. ಸಮಾಧಾನದ ಮಾತುಗಳಿಂದ ಅವರ ಆತ್ಮ ಸ್ಥೈರ್ಯ ಹೆಚ್ಚಿಸಿ. ನಾವು ನಿಮ್ಮೊಂದಿಗಿದ್ದೇವೆ ಎಂಬ ಭರವಸೆ ಮೂಡಿಸಿ. ನಂತರ ನೀವು ಹೇಳಿದ ಮಾತುಗಳ ಬಗ್ಗೆ ಒಮ್ಮೆ ತಿರುಗಿ ನೋಡಿ ಆ ನೊಂದವರ ಕಣ್ಣೀರೊರಿಸಿದಕ್ಕೆ ನಿಮಗಾಗುವ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವಾ? ಅದನ್ನೇ ನಾವು ಹೇಳುತ್ತಿರುವುದು. ಇನ್ನಾದರು ಅಶಕ್ತರಿಗೆ ನೆರವಾಗಿ ಸಶಕ್ತ ಕಾಮುಕರ ಪರ ನಿಲ್ಲಲ್ಲು ನೀವು ಅಧಿಕಾರದಲ್ಲಿ ಇರಬೇಕಿಲ್ಲ ಎಂಬ ಸತ್ಯವನ್ನು ತಿಳಿದುಕೊಳ್ಳಿ. ನಮಸ್ಕಾರ…..

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...