Vijayapatha – ವಿಜಯಪಥ
Saturday, November 2, 2024
NEWSಲೇಖನಗಳು

ಆಟೋ ಹಿಂದೆ ಮಾಜಿ ಸಿಎಂ ಎಚ್‌ಡಿಕೆ ಫೋಟೋ ನೋಡಿ ಕೈ ಮುಗಿಯುತ್ತಿರುವ ವೃದ್ಧೆ… ಏನು ಕೇಳುತ್ತಿದ್ದಾರೆ?

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಎಚ್.ಡಿ. ಕುಮಾರಸ್ವಾಮಿಯವರು ಕರ್ನಾಟಕದ ಪ್ರಮುಖ ರಾಜಕಾರಣಿಗಳಲ್ಲೊಬ್ಬರಾಗಿದ್ದು, ಇವರು ಪ್ರಸ್ತುತ ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಿರಿಯ ಸುಪುತ್ರರಾಗಿರುವ ಇವರು ಕರ್ನಾಟಕ ಜೆಡಿಎಸ್ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಎಂಬುದು ಇವರ ಪೂರ್ಣ ನಾಮಧೇಯವಾಗಿದ್ದು ’ಕುಮಾರಣ್ಣ’ ಎಂದು ಅಭಿಮಾನಿ ಬಳಗದಲ್ಲಿ ಹೆಸರುವಾಸಿಯಾಗಿದ್ದಾರೆ. ಜೆಡಿಎಸ್‌ನ ಅತ್ಯಂತ ಕ್ರಿಯಾಶೀಲ ಹಾಗೂ ಯಶಸ್ವಿ ನಾಯಕರಾಗಿರುವ ಕುಮಾರಸ್ವಾಮಿಯವರು ರಾಜಕೀಯ ಅಷ್ಟೆ ಅಲ್ಲದೆ ಸಿನಿಮಾ ರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಚಲನ ಚಿತ್ರ ನಿರ್ಮಾಣದಲ್ಲಿ ಇವರು ತೊಡಗಿಸಿಕೊಂಡಿದ್ದಾರೆ.

ಇನ್ನಿತರ ಹಲವಾರು ರಾಜಕೀಯ ಮುಖಂಡರಂತೆ ಇವರಿಗೂ ಹಲವಾರು ವಿವಾದಗಳು ಸುತ್ತಿಕೊಂಡಿವೆ. ಮತ್ತೆ ಮತ್ತೆ ಸುತ್ತಿಕೊಳ್ಳುತ್ತಲ್ಲೂ ಇರುತ್ತವೆ. ಅದೇನೆ ಇರಲಿ 2006 ರಲ್ಲಿ ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ನಾಟಕದ ಜಿಡಿಪಿ ಅತ್ಯುನ್ನತ ಮಟ್ಟವನ್ನು ಮುಟ್ಟಿದ್ದು ದಾಖಲೆಯಾಗಿದೆ.

ಸೆಪ್ಟೆಂಬರ್ 2007 ರಲ್ಲಿ ಕುಮಾರಸ್ವಾಮಿ ತಮ್ಮದೇ ಆದ ’ಕಸ್ತೂರಿ’ ಕನ್ನಡ ವಾಹಿನಿ ಆರಂಭಿಸಿದರು. ಈಗ ಇದನ್ನು ಅವರ ಪತ್ನಿ ಅನಿತಾ ಕುಮಾರಸ್ವಾಮಿ ನೋಡಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಡಾ.ರಾಜಕುಮಾರ ಅವರ ಅಭಿಮಾನಿಯಾಗಿದ್ದು ಅವರಂತೆಯೇ ವೇಷಭೂಷಣ ಧರಿಸುತ್ತಿದ್ದರು. ತಮಗೆ ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿ ಇಲ್ಲ, ಚಿತ್ರ ನಿರ್ಮಾಣದಲ್ಲಿಯೇ ಆಸಕ್ತಿ ಜಾಸ್ತಿ ಎಂದು ಕೆಲ ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದರು.

ಕಾರುಗಳ ಬಗ್ಗೆ ಒಲವು ಹೊಂದಿರುವ ಕುಮಾರಸ್ವಾಮಿಯವರ ಬಳಿ ಲ್ಯಾಂಬೊರ್ಗಿನಿ, ಪೋರ್ಶ, ಹಮ್ಮರ್ ಮತ್ತು ರೇಂಜ್ ರೋವರ್ ಮುಂತಾದ ದುಬಾರಿ ಕಾರುಗಳಿವೆ. ಈ ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಿಂದ ಇವರು ಜನಪ್ರಿಯ ನಾಯಕರಾಗಿ ಹೆಸರು ಮಾಡಿದರು.

ಅವರ ಜನಪರ ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿ ಹಚ್ಚಳಿಯದೆ ಉಳಿದಿವೆ ಎಂಬುವುದಕ್ಕೆ ಇಲ್ಲಿ ನೋಡಿದಿರಲ್ಲ ಆಟೋ ಹಿಂದೆ ಹಾಕಿರುವ ಕುಮಾಸ್ವಾಂಇ ಅವರ ಫೋಟೋಗೆ ಅಜ್ಜು ಒಬ್ಬರು ಕೈಮುಗಿಯುತ್ತಿರುವುದು. ಇದೇ ಸಾಕ್ಷಿ ಎಂದರೆ ತಪ್ಪಾಗಲಾರದು.

ಹೀಗೆ ಜನರ ಹಿತಕ್ಕಾಗಿ ಅವರ ಏಳಿಗೆಗಾಗಿ ದುಡಿಯುವ ಕುಮಾಸ್ವಾಮಿ ಅವರಿಗೆ ಒಮ್ಮೆ ರಾಜ್ಯವನ್ನು ಕೊಟ್ಟರೆ ನಾವು ಕಾಣುತ್ತಿರುವ ರಾಮರಾಜ್ಯದ ಕನಸ್ಸು ನನಸಾಗದೆ ಇರದು ಎಂಬುವುದು ನಮ್ಮ ಅನಿಸಿಕೆ ಇದಕ್ಕೆ ನೀವು ಏನು ಹೇಳುತ್ತಿರಾ?

ಈ ನಡುವೆ ಅಜ್ಜಿಯೊಬ್ಬರು ಕುಮಾರಸ್ವಾಮಿ ಅವರನ್ನು ಒಂದು ರೀತಿ ದೇವರಂತೆ ಭಾವಿಸಿ ಅವರ ಫೋಟೋ ಆಟದಲಿ ಕಾಣಿಸಿದ ಕೂಡಲೇ ಕೈ ಎತ್ತಿ ಮುಗಿಯುತ್ತಿರುವುದು ನಿಜವಾಗಲು ಕುಮಾರಸ್ವಾಮಿ ಅವರು ರಾಜ್ಯಕ್ಕೆ ಮತ್ತು ರಾಜ್ಯದ ಜನರಿಗೆ ಏನು ಕೊಟ್ಟಿದ್ದಾರೆ ಎಂಬುದನ್ನು ಸಾವಿರ ಪದಗಳಲ್ಲಿ ಹೇಳಿದಂತ್ತಿದೆ. ರಾಜಕಾರಣಿಗಳು ಬದುಕಿದರೆ ಇವರಂತೆ ಇರಬೇಕು ಎಂಬುದನ್ನು ತೋರಿಸುತ್ತಿದ್ದಾರೆ ಅಜ್ಜಿ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ