NEWSನಮ್ಮರಾಜ್ಯಲೇಖನಗಳು

ನಮ್ಮ ಸಾರಿಗೆಯ 4 ನಿಗಮಗಳ ಚಾಲನಾ ಸಿಬ್ಬಂದಿ ಮಿತ್ರರಲ್ಲಿ ನಮ್ಮದೊಂದು ಮನವಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಸಹೋದ್ಯೋಗಿಗಳಿಗೆ….

ಸಾರಿಗೆ ಸಂಸ್ಥೆಗಳ ನಷ್ಟಕ್ಕೆ ಹಲವು ಕಾರಣಗಳ ಪೈಕಿ ಈ ಒಂದು ಕಾರಣವು ಬಹುಮುಖ್ಯವಾಗಿದೆ. ಅದು “ಬಾರ್ ಶೇಡೂಲ್ಡ್ ಗಳು”(ಬಾರ್ ಡ್ಯೂಟಿ) ಇವುಗಳಿಂದ ನಮ್ಮ ಚಾಲನಾ ಸಿಬ್ಬಂದಿಗಳ ಮೇಲೆ ಕರ್ತವ್ಯದ ಹೊರೆ ಅತಿಯಾಗುತ್ತಿದೆ. ಇದರಿಂದ ನಮ್ಮ ಆರೋಗ್ಯ ಹಾಳಾಗುತಿದೆ. ನಮ್ಮ ಚಾಲನಾ ಸಿಬ್ಬಂದಿಗಳ ಪೈಕಿ ಶೇ.80 ಜನ ತಮ್ಮ ಸ್ವಂತ ಊರು ಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವುದರಿಂದ ಊರುಗಳಿಗೆ ಹೋಗಿ ಬರಲು ಕಷ್ಟವಾಗುತಿದೆ.

ಹಳ್ಳಿಗಳಲ್ಲಿ ನೈಟ್ ಹಾಲ್ಟ್ ಗಳಲ್ಲಿ ರಾತ್ರಿ ಮಲಗುವ ವ್ಯವಸ್ಥೆ ಶೇ.90 ಸೂಕ್ತವಾಗಿ ಇಲ್ಲ. ಮಳೆಗಾಲದಲ್ಲಿ, ಮತ್ತು ಬೇಸಿಗೆಯಲ್ಲಿ ನರಕಕ್ಕೆ. ಸರಿಯಾಗಿರುತ್ತದೆ. ಇದರಿಂದಾಗಿ ಸರಿಯಾಗಿ ನಿದ್ರೆ ಆಗದೆ ಆರೋಗ್ಯ ಹಾಳಾಗುತಿದೆ.

ಹಳ್ಳಿಗಳ ಕಡೆ ಮತ್ತು ಕಲ್ಯಾಣ ಕರ್ನಾಟಕದ ಹಲವು ಕಡೆಗಳಲ್ಲಿ ಮದ್ಯಾಹ್ನ ದ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆ ಇರುತ್ತದೆ. ಆ ಸಮಯದಲ್ಲಿ ನಾವು ಆಯಾ ದಿನದ ಸರಾಸರಿ ಕಿ.ಮಿ. ಗುರಿ ಮುಟ್ಟುವ ಮೇಲಧಿಕಾರಿಗಳ ಒತ್ತಡದಲ್ಲಿ ಬಸ್‌ಗಳನ್ನು ಖಾಲಿಯಾಗಿ ಓಡಿಸುತ್ತೇವೆ. ಇದರಿಂದಾಗಿ ಸಂಸ್ಥೆಗೆ ಭಾರಿ ನಷ್ಟವಾಗುತ್ತದೆ. ಈ ಆರ್ಡಿನರಿ ಬಾರ್ ರೂಟ್ ಗಳು ನಮ್ಮ ಸಂಸ್ಥೆಗಳಿಗೆ ಒಂದು ಕೆಟ್ಟ ವೈರಸ್ ಇದ್ದಹಾಗೆ.

ಘಟಕಗಳಲ್ಲಿ ನಡೆಯುತ್ತಿವೆ ಕಾರ್ಮಿಕರ ಕುಂದುಕೊರತೆಗಳ ಸಭೆಗಳು: 4 ನಿಗಮಗಳ ಎಲ್ಲ ಘಟಕಗಳಲ್ಲಿ ವಿಭಾಗೀಯಾ ಮೇಲಧಿಕಾರಿಗಳಿಂದ ಕಾರ್ಮಿಕರ ಕುಂದುಕೊರತೆಗಳ ಸಭೆಗಳು ನಡೆಯುತ್ತಿವೆ.

ಈ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾಲನಾ ಸಿಬ್ಬಂದಿಗಳು ಭಾಗವಹಿಸಿ ತಮ್ಮ ತಮ್ಮ ಘಟಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ B.A.ರೂಟ್ ಗಳನ್ನು ಸುಮಾರು 15-20 ವರ್ಷಗಳ ಹಿಂದೆ ಇರುವ ರೀತಿ ಬಗ್ಗೆ ಮನವಿ ಪತ್ರಗಳನ್ನು ಸಲ್ಲಿಸಿ. ಇಂದಿನ ಸ್ಥಿತಿಯನ್ನು ವಿವರಿಸಬೇಕಿದೆ.

ನಮಗೆ ಅವಶ್ಯಕತೆಗೆ ಅನುಗುಣವಾಗಿ ರಜೆಗಳು ಸಿಗುವುದಿಲ್ಲ. ಚಿಕ್ಕ ಪುಟ್ಟತುರ್ತು ಕೆಲಸಗಳಿಗೂ ಗೈರು ಹಾಜರಿಯಾಗಬೇಕಿರುತ್ತದೆ. ಘಟಕಗಳಲ್ಲಿ B. A. ರೂಟ್ ಗಳು ಜಾಸ್ತಿ ಇದ್ರೆ ಕರ್ತವ್ಯ ನಿರ್ವಹಣೆ ಎಲ್ಲರಿಗೂ ಸುಲಭವಾಗುತ್ತದೆ.

ಆದ್ದರಿಂದ ಎಲ್ಲ ಘಟಕಗಳ ಚಾಲನಾ ಸಿಬ್ಬಂದಿಗಳು B. A ರೂಟ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭಿಸಲು ಎಲ್ಲರೂ ತಪ್ಪದೆ ಮನವಿಗಳನ್ನು ತಮ್ಮ ತಮ್ಮ ವಿಭಾಗೀಯಾ ಕಚೇರಿಗಳಿಗೆ ಕಳುಹಿಸಲು ಮನವಿ.
ಇಂತಿ ಸಾರಿಗೆ ನೌಕರರು

Leave a Reply

error: Content is protected !!
LATEST
"ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ 2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ