NEWSನಮ್ಮರಾಜ್ಯಲೇಖನಗಳು

ಅಡಕತ್ತರಿಯಲ್ಲಿ ವರ್ಗಾವಣೆಗೊಂಡ ಸಾರಿಗೆ ನೌಕರರು: ವಿಶೇಷ ಪ್ರಕರಣವೆಂದು ಕೋರ್ಟ್‌ಮೊರೆ ಹೋಗಲು ಸಿದ್ಧತೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಏಪ್ರಿಲ್‌ 7ರಿಂದ ಏಪ್ರಿಲ್‌ 22ರವರೆಗೆ ನಡೆದ ಮುಷ್ಕರದ ವೇಳೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನಾಲ್ಕೂ ಸಂಸ್ಥೆಗಳಲ್ಲೂ ಬೇರೆಡೆಗೆ ವರ್ಗಾವಣೆ ಮಾಡಿರುವ ನೌಕರರಲ್ಲಿ ಆನೇಕ ನೌಕರರ ವರ್ಗಾವಣೆಯನ್ನು ಇನ್ನೂ ರದ್ದು ಮಾಡದ ಕಾರಣ ಆ ನೌಕರರು ಗೊಂದಲಕ್ಕೆ ಸಿಲುಕಿದ್ದಾರೆ.

ಕೊರೊನಾ ಲಾಕ್‌ಡೌನ್‌ನಿಂದ ದೂರದ ಸ್ಥಳಗಳಿಗೆ ವರ್ಗಾವಣೆಗೊಂಡಿರುವ ನೌಕರರು ಇನ್ನೂ ಆ ಸ್ಥಳಗಳಿಗೆ ಹೋಗಿ ಡ್ಯೂಟಿ ರಿಪೋರ್ಟ್‌ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಮುಷ್ಕರದ ವೇಳೆ ನಡೆದ ಅಮಾನತು, ವಜಾ ಮತ್ತು ವರ್ಗಾವಣೆ ಸಂಬಂಧ ಈಗಾಗಲೇ ಕೋರ್ಟ್‌ನಲ್ಲಿ ಪ್ರಕರಣವಿದ್ದು, ಆ ಪ್ರಕರಣ ಇನ್ನೂ ಅಂತಿಮ ಹಂತ ತಲುಪದ ಕಾರಣ, ಈಗ ದೂರದ ಸ್ಥಳಗಳಿಗೆ ವರ್ಗಾವಣೆಗೊಂಡಿರುವ ನೌಕರರು ಆ ಸ್ಥಳಕ್ಕೆ ಹೋಗಿ ಡ್ಯೂಟಿ ವರದಿ ಮಾಡಿಕೊಳ್ಳಬೇಕು ಇಲ್ಲ ನಾವು ಈಗ ಇದ್ದ ಸ್ಥಳದಲ್ಲೇ ಕರ್ತವ್ಯ ನಿರ್ವಹಿಒಸಬೇಕೊ ಎಂಬುವುದು ಇನ್ನು ಖಾತರಿಯಾಗದ ಕಾರಣ ಗೊಂದಲಕ್ಕೆ ಸಿಲುಕಿದ್ದಾರೆ.

ಈ ಹಿನ್ನೆಲೆಯಲ್ಲಿ ವರ್ಗಾವಣೆ ಆದೇಶವನ್ನಾದರೂ ಕೂಡಲೇ ಹಿಂಪಡೆಯುವಂತೆ ಮನವಿ ಮಾಡಲು ವಿಶೇಷ ಪ್ರಕರಣ ಎಂದು  ಈ ಸಂಬಂಧ ಇನ್ನೆರಡು ದಿನದಲ್ಲಿ ಕೋರ್ಟ್‌ನಲ್ಲಿ ಅರ್ಜಿಸಲಿಸಲು ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.

ಯಾವ ರೀತಿ ಕೋರ್ಟ್‌ ಮೊರೆ ಹೋದರೆ ನೌಕರರಿಗೆ ಅನುಕೂಲವಾಗುತ್ತದೆ ಎಂಬ ಬಗ್ಗೆ ಸಭೆಯಲ್ಲಿ ಕೂಟದ ಲೀಗಲ್‌ ವಕೀಲರೊಂದಿಗೂ ಚರ್ಚೆ ನಡೆಸುತ್ತಿರುವುದಾಗಿ ಕೂಟದ ಪದಾಧಿಕಾರಿಗಳು ವಿಜಯಪಥಕ್ಕೆ ತಿಳಿಸಿದ್ದಾರೆ.

ಶೇ.75ರಷ್ಟು ನೌಕರರಿಗೆ ವೇತನವೇ ಸಿಕ್ಕಿಲ್ಲ
ಇನ್ನು ಏಪ್ರಿಲ್‌ ಮತ್ತು ಮೇ ತಿಂಗಳಿನ ವೇತನವನ್ನು ಶೇ.75ರಷ್ಟು ನೌಕರರಿಗೆ ಕೊಟ್ಟಿಲ್ಲ. ಕಾರಣ ಏಪ್ರಿಲ್‌ 7ರಿಂದ ಇಲ್ಲಿಯವರೆಗೂ ಮುಷ್ಕರ ಮತ್ತು ಲಾಕ್‌ಡೌನ್‌ ಕಾರಣದಿಂದ ನೌಕರರು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಇದನ್ನೇ ಅಸ್ತ್ರವಾಗಿ ಉಪಯೋಗಿಸುತ್ತಿರುವ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ನೌಕರರಿಗೆ 00, 200, 300 ಸೇರಿದಂತೆ ಸುಮಾರು 3000 ಸಾವಿರ ರೂ. ವರೆಗೆ ವೇತನ ಬಿಡುಗಡೆ ಮಾಡಿದ್ದಾರೆ.

ಈ ವೇತನವನ್ನು ಯಾವ ಮಾನದಂಡದ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ನೌಕರರಿಗೆ ತಿಳಿಸಿಲ್ಲ. ಇದರಿಂದ ನೌಕರರು ನಮಗೆ ಒಂದು ದಿನದ ವೇತನವೂ ಬಂದಿಲ್ಲ. ಆದರೆ, ಮುಷ್ಕರಕ್ಕೂ ಮೊದಲು 5-6ದಿನ ಏಪ್ರಿಲ್‌ ತಿಂಗಳಲ್ಲಿ ಸೇವೆ ಸಲ್ಲಿಸಿದ್ದು ಆ ವೇಳೆಯ ವೇತನ ನೀಡಿದರೂ ಸುಮಾರು 5-6ಸಾವಿರ ಬರಬೇಕಿದೆ. ಆದರೆ ಇದಾವುದು ಇಲ್ಲದೆ ಕೇಲವ 200-3000 ರೂ. ಬಿಡುವಡೆ ಮಾಡಿರುವುದು ಯಾವ ಮಾನದಂಡದಡಿ ಎಂದು ತಿಳಿಸಿಲ್ಲ. ಇದರಿಂದ ನೌಕರರು ಒಂದು ರೀತಿಯ ಸಂಕಷ್ಟವನ್ನು ಅನುಭವಿಸುವಂತ್ತಾಗಿದೆ.

ಕೋವಿಡ್‌ ಪರೀಕ್ಷಾ ವರದಿ ತರುವಂತೆ ಮೌಖಿಕ ಆದೇಶ
ಈ ನಡುವೆ ಮುಷ್ಕರ ತೆರವುಗೊಂಡ ಬಳಿಕ ನೌಕರರು ಡ್ಯೂಟಿಗೆ ಹೋದ ವೇಳೆ ಅಧಿಕಾರಿಗಳು ಕೋವಿಡ್‌ ಪರೀಕ್ಷಾ ವರದಿ ತರುವಂತೆ ಮೌಖಿಕವಾಗಿ ಆದೇಶ ಮಾಡಿದ್ದಾರೆ. ಅಂದರೆ ಏ.22, 23ರಂದು ಡ್ಯೂಟಿಗೆ ಹೋದ ನೌಕರರು ಅಧಿಕಾರಿಗಳ ಆದೇಶದಂತೆ ಕೋವಿಡ್‌ ಪರೀಕ್ಷಾ ವರದಿ ತರಲು ಹೋದಾಗ ಏ.24ರ ಶನಿವಾರ ಮತ್ತು 25 ರ ಭಾನುವಾರಗಳಂದು ಸರ್ಕಾರ ಕೊರೊನಾ ಕರ್ಫ್ಯೂವಿಧಿಸಿದ್ದರಿಂದ ಕೆಲಸಕ್ಕೆ ವರದಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಬಳಿಕ ಸೋಮವಾರ ಹೋದ ನೌಕರರಿಗೆ ಡ್ಯೂಟಿ ಕೊಟ್ಟಿಲ್ಲ. ಇನ್ನು ಏ.27ರಿಂದ ಲಾಕ್‌ಡೌನ್‌ ಘೋಷಣೆಗಾಗಿದ್ದರಿಂದ ಶೇ.75ರಷ್ಟು ನೌಕರರು ಸೇವೆಗೆ ರಿಪೋರ್ಟ್‌ ಮಾಡಿಕೊಳ್ಳಲಾಗಿಲ್ಲ.

ಅಧಿಕಾರಿಗಳೇ ನೌಕರರಿಗೆ ಶತ್ರುವಾಗಿ ಕಾಡುತ್ತಿದ್ದಾರೆಯೇ?
ಇದನ್ನೇ ಅಸ್ತ್ರವಾಗಿ ಬಳಿಸಿಕೊಂಡಿರುವ ಅಧಿಕಾರಿಗಳು ನೌಕರರು ದೀರ್ಘಾವಧಿ ಗೈರಾಗಿದ್ದಾರೆ, ಹೀಗಾಗಿ ಅವರಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದು ಈವರೆಗೂ ಏಪ್ರಿಲ್‌ ಮತ್ತು ಮೇ ತಿಂಗಳ ವೇತನವನ್ನು ಬಿಡುಗಡೆ ಮಾಡಿಲ್ಲ. ಜತೆಗೆ ಜೂನ್‌ 14ರವರೆಗೂ ಲಾಕ್‌ಡೌನ್‌ ಇರುವುದರಿಂದ ಅಲ್ಲಿಯವರೆಗೂ ನೌಕರರಿಗೆ ಗೈರು ಹಾಜರಿ ಎಂದು ತೋರಿಸುವ ಜತೆಗೆ ಅವರಿಂದ ಮತ್ತೆ ದೀರ್ಘಾವಧಿ ಗೈರಾಗಿರುವುದಕ್ಕೆ ಕಾರಣ ಕೇಳಿ ನೋಟಿಸ್‌ ನೀಡಿ ಬಳಿಕ ಆ ನೋಟಿಸ್‌ಗೆ ಉತ್ತರ ಕೊಡುವವರೆಗೆ ಡ್ಯೂಟಿ ಕೊಡುವುದಿಲ್ಲ. ಹೀಗಾದರೆ ನಾವು ಬದುಕುವುದಾದರೂ ಹೇಗೆ ಎಂದು ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಎಲ್ಲ ಅಂಶಗಳನ್ನು ಗಮನಿಸಿದರೆ ಅಧಿಕಾರಿಗಳೇ ನೌಕರರಿಗೆ ಶತ್ರುವಾಗಿ ಕಾಡುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ. ಕಾರಣ ತಮ್ಮ ನೌಕರರ ಪರವಾಗಿ ಅದೂ ಕಾನೂನು ಪ್ರಕಾರ ಮತ್ತು ಮಾನವೀಯತೆಯ ನೆಲೆಗಟ್ಟಿನ ಮೂಲಕ ನಿಲ್ಲಬೇಕಾದ ಅಧಿಕಾರಿಗಳೆ ನೌಕರರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿರುವು ಎಷ್ಟರಮಟ್ಟಿಗೆ ಸರಿ. ಈ ರೀತಿ ನಡೆದುಕೊಂಡರೆ ನಾವು ಯಾರ ಬಳಿ ನ್ಯಾಯ ಕೇಳೋದು ಎಂದು ನೌಕರರು ನೋವಿನಿಂದ ಹೇಳುತ್ತಿದ್ದಾರೆ.

ಅದೇನೆ ಇರಲಿ ಸರ್ಕಾರ ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವೃತ್ತಿಪರರಿಗೆ ಆರ್ಥಿಕ ಸಹಾಯ ಮಾಡುತ್ತಿದೆ.  ಆದರೆ ಇತ್ತ ತಮ್ಮದೇ ಸಂಸ್ಥೆಗಳ ನೌಕರರಿಗೆ ವೇತನವನ್ನು ನೀಡದೇ ಅವರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದುದಲ್ಲವೇ ? ಇನ್ನಾದರೂ ಸರ್ಕಾರ, ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ತಮ್ಮ ಈಗೋ ಬಿಟ್ಟು ನೌಕರರ ಸಮಸ್ಯೆಯನ್ನು ಆಲಿಸಿ ಪರಿಹರಿಸಬೇಕಿದೆ.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು