ಬಾಗಲಕೋಟೆ: ಜಿಲ್ಲೆಯಲ್ಲಿ ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಟಿಕೆಟ್ ಕಲೆಕ್ಟರ್ 57 ವರ್ಷದ ನೌಕರ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ 500 ನೌಕರರಲ್ಲಿ ಆತಂಕ ಮನೆ ಮಾಡಿದೆ.
ಇವರ ಸಾವಿನ ನಂತರದ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇದು ಜಿಲ್ಲೆಯಲ್ಲಿಎರಡನೇ ಸಾವಾಗಿದೆ.
ಇವರು ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿ. ಈ ವ್ಯಕ್ತಿ ಕರ್ತವ್ಯದ ಮೇಲೆ ಮಹಾರಾಷ್ಟ್ರದ ಮಿರಜ್‌ಗೆ ತೆರಳಿ ವಾಪಸ್ ಹುಬ್ಬಳ್ಳಿಗೆ ಬಂದು ಕಳೆದ ಶುಕ್ರವಾರ ಸ್ವಗ್ರಾಮ ಚಿಕ್ಕಮ್ಯಾಗೇರಿ ಗ್ರಾಮಕ್ಕೆ ಹೋಗಿದ್ದರು. ಮೈಕೈ ನೋವು, ಜ್ವರ ಕಾಣಿಸಿಕೊಂಡ ಬಳಿಕ ಸೋಮವಾರ ಬಾಗಲಕೋಟೆ ಆಸ್ಪತ್ರೆಗೆ ತೆರಳುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ನಂತರ ಕೋವಿಡ್ ಆಸ್ಪತ್ರೆಯಲ್ಲಿನ ಮಿನಿಲ್ಯಾಬ್‌ನಲ್ಲಿ ಗಂಟಲುದ್ರವ ಪರೀಕ್ಷೆ ವೇಳೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಆದರೆ ಅಧಿಕಾರಿಗಳು ಕರ್ತವ್ಯದ ಮೇಲೆ ಮಹಾರಾಷ್ಟ್ರದ ಮಿರಜ್‌ಗೆ ತೆರಳಿ ವಾಪಸ್ ಬಂದ ಮೃತರನ್ನು 14ದಿನಗಳು ಕ್ವಾರಂಟೈನ್ ಮಾಡಬೇಕಿತ್ತು ಅದನ್ನು ಮಾಡದ ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ ಆಗಿದ್ದು ಇದರಿಂದ ಇತರ ಸಿಬ್ಬಂದಿಯೂ ಕೊರೊನಾ ಭಯದಲ್ಲಿ ಇರುವಂತಾಗಿದೆ.
ಅಲ್ಲದೆ ಮೃತ ರೈಲ್ವೇ ನೌಕರನಲ್ಲಿ ಕಂಡು ಬಂದ ಕೊರೊನಾ ಪಾಸಿಟಿವ್ ಪ್ರಕರಣದಿಂದ ಚಿಕ್ಕಮ್ಯಾಗೇರಿ ಗ್ರಾಮದಲ್ಲೂ ಆತಂಕ ಮನೆ ಮಾಡಿದೆ. ಮೃತ ಸೋಂಕಿತರ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ. ಜತೆಗೆ ಮೃತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆಹಾಕುತ್ತಿರುವ ಆರೋಗ್ಯ ಇಲಾಖೆ ಚಿಕ್ಕಮ್ಯಾಗೇರಿ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತಿಸಿದೆ.
ಸಾವಿನ ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಕೋವಿಡ್ ನಿಯಮಾವಳಿಯಂತೆ ಅಂತ್ಯಕ್ರಿಯೆ ನಡೆಸಿದೆ. ಮತ್ತೊಮ್ಮೆ ಪಾಸಿಟಿವ್ ಖಚಿತತೆ ಮಾಡಿಕೊಳ್ಳುವ ಸಲುವಾಗಿ ಬೆಂಗಳೂರು ಲ್ಯಾಬ್‌ಗೆ ಸ್ಯಾಂಪಲ್ ಕಳುಹಿಸಿದೆ.
Idu ondu riti jaana peddara aata adanthe agide