ಬೆಳಗಾವಿ: ಓದಿದ ವಿಷಯ ತಲೆಗೆ ಹತ್ತುತ್ತಿಲ್ಲ ಎಂದು ಮನನೊಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮಾರ್ಕಂಡೇಯ ನಗರದಲ್ಲಿ ನಡೆದಿದೆ.
ಹದಿನಾರು ವರ್ಷದ ಯುವರಾಜ್ ಬಾಗಿಲೇಕಾರ್ ಮೃತ ವಿದ್ಯಾರ್ಥಿ. ಯುವರಾಜ್ ನಿನ್ನೆ ತಡರಾತ್ರಿ ಮನೆಯ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಲತಃ ಬೆಳಗಾವಿ ತಾಲೂಕಿನ ಬೆಳಗುಂದಿ ನಿವಾಸಿಯಾಗಿರುವ ಯುವರಾಜ್ ಸ್ಥಳೀಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಮೃತ ಬಾಲಕನ ಪಾಲಕರು ತಾನು ಏನೂ ಓದಿದರು ತಲೆಗೆ ಹತ್ತುತ್ತಿಲ್ಲ ಎಂದು ಮಗ ಹೇಳುತ್ತಿದ್ದ. ಅದಕ್ಕೆ ನಾವು ಧೈರ್ಯವನ್ನು ಹೇಳುತ್ತಿದ್ದೇವು. ದೇವರು ಮಾಡಿದಂತೆ ಆಗುತ್ತದೆ ನೀನು ಪರೀಕ್ಷೆಯಲ್ಲಿ ನಿನಗೆ ಬಂದಷ್ಟು ಬರೆದುಬಿಟ್ಟು ಬಾ ಎಂದು ಹೇಳಿದ್ದೆವು. ಆದರೂ ಮನನೊಂದು ಈ ರೀತಿ ಮಾಡಿಕೊಂಡಿದ್ದಾನೆ ಎಂದು ಗೋಳಾಡುತ್ತಿದ್ದರು.