ಬೆಂಗಳೂರು: ನಿಮಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯವನ್ನು ಮಾಡಿಕೊಡುತ್ತೇವೆ ದಯಮಾಡಿ ಮಹಾನಗರವನ್ನು ತೊರೆಯಬೇಡಿ ಮಹಾಜನರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಕಾರಣ ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಬೆಂಗಳೂರಿನಲ್ಲಿ ಮುಂದುವರಿಸಿರುವುದರಿಂದ ಜನರು ಭಯಭೀತರಾಗಿದ್ದಾರೆ, ಮತ್ತೊಂದು ಕಡೆ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಬಿಬಿಎಂಪಿ ಮತ್ತು ಸರ್ಕಾರ ವಿಫಲವಾಗಿರುವುದರಿಂದ ಜನರು ನಗರವನ್ನು ತೊರೆಯುತ್ತಿದ್ದಾರೆ.
ಇದನ್ನು ಮಗಗಂಡ ಸಿಎಂ ಬಿಎಸ್‌ವೈ ನೀವು ನಗರವನ್ನು ತೊರೆಯಬೇಡಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಇಲ್ಲೇ ಇರಿ. ಕೊರೊನಾ ಪೀಡಿತರಿಗೆ ಈಗಾಗಲೇ 10 ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ವಾಸ್ತವದಲ್ಲಿ ಕೊರೊನಾ ಪೀಡಿತರನ್ನು ಸಮಯಕ್ಕೆ ಸರಿಯಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿದ್ದು, ಸೂಕ್ತ ಚಿಕಿತ್ಸೆ ಸಿಗದೆ ಈಗಾಗಲೇ 10ಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣವನ್ನು ಕಳೆದುಕೋಮಡಿದ್ದಾರೆ.
ಇಷ್ಟಾದರೂ ಸರ್ಕಾರ ನಾವು ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದಷ್ಟೆ ಬೊಗಳೆ ಬಿಡುತ್ತಿದೆ. ಇದನ್ನು ಕೇಳಿಸಿಕೊಂಡು ಕೂರಲು ಜನರೇನು ದಡ್ಡರೆ ಎಂದು ಸಾಮಾನ್ಯರು ಕೂಡ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಕೊರೊನಾ ಪಾಸಿಟಿವ್ ಎಂದು ತಿಳಿದು ಬಂದ ಕೂಡಲೇ ಅವರನ್ನು ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲು ಮುಂದಾಗಬೇಕಿದೆ. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಈ ಹಿಂದೆ ಇದ್ದ 1.20 ಕೋಟಿ ಜನರಲ್ಲಿ ಈಗಾಗಲೇ ಅರ್ಧಕ್ಕರ್ಧ ಮಂದಿ ನಗರವನ್ನು ತೊರೆದಿದ್ದು, ಇನ್ನೂ ಹಲವರು ತೊರೆಯುತ್ತಿದ್ದಾರೆ. ಅವರನ್ನು ತಡೆದು ನಿಲ್ಲಿಸಬೇಕಾದರೆ ನೀವು ಮೊದಲು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಹೀಗಾಗಿ ಸರ್ಕಾರ ಎಚ್ಚರಿಕೆ ವಹಿಸುವುದು ಇಂದಿನ ಅಗತ್ಯಗಳಲ್ಲಿ ಇದು ಕೂಡ ಪ್ರಮುಖವಾದದ್ದಾಗಿದೆ. ಇಲ್ಲದಿದ್ದರೆ ಮುಂದಿನ ಆಗಸ್ಟ್ 15ರ ವೇಳೆಗೆ ನಗರದಲ್ಲಿ 50 ಲಕ್ಷ ಜನರೂ ಕೂಡ ಇರುವುದಿಲ್ಲ ಎಂಬುದರ ಬಗ್ಗೆ ಗಮನವಿರಲಿ.
Inna en maadoke aguthe heli ivaranella nambhikondu idre sayli bidi anthare olle kelsa madtha iddare madli bidi