CrimeNEWSನಮ್ಮಜಿಲ್ಲೆ

5ವರ್ಷದಿಂದ ಅಕ್ಕನಿಗೆ ಕಿರುಕುಳ ನೀಡುತ್ತಿದ್ದವರನ್ನು ಹತ್ಯೆಗೈದ ತಮ್ಮ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತನ್ನ ಅಕ್ಕನಿಗೆ ಮದುವೆ ಆದಾಗಿನಿಂದಲೂ ಕೊಡುತ್ತಿದ್ದ ಕಿರುಕುಳದಿಂದ ಬೇಸತ್ತ ತಮ್ಮ ಅಕ್ಕನ ಅತ್ತೆ ಮಾವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಣನಕುಂಟೆಯ ಆರ್‌ಬಿಐ ಲೇಔಟ್‌ನಲ್ಲಿ ನಡೆದಿದೆ.

ಗೋವಿಂದಯ್ಯ (65), ಶಾಂತಮ್ಮ (58) ಹತ್ಯಗೊಳಗಾದವರು. ಆವಲಹಳ್ಳಿ ಎರಡನೇ ಮುಖ್ಯ ರಸ್ತೆಯ ನಿವಾಸಿ ಎಲೆಕ್ಟ್ರೀಷಿಯನ್‌  ಡಿ. ರಾಕೇಶ್‌ (26) ಕೊಲೆ ಆರೋಪಿ. ಈತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ದಂಪತಿಯ ಮಗ ನವೀನ್‌, ಆರೋಪಿ ರಾಕೇಶ್‌ನ ಅಕ್ಕನನ್ನು ಮದುವೆಯಾಗಿದ್ದ. ಮೂವರೂ ಸೇರಿ ಅಕ್ಕನಿಗೆ ಕೊಡಬಾರದ ಕಾಟ ಕೊಟ್ಟಿದ್ದರು. ಕಾಟ ತಡೆಯಲಾರದೆ ಅಕ್ಕ ಮನೆಗೆ ವಾಪಸ್‌ ಬಂದರೂ ಫೋನ್‌ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಹೀಗಾಗಿ, ನನ್ನ ಸಹನೆ ಕಟ್ಟೆ ಒಡೆದು ಈ ಕೃತ್ಯ ಎಸಗಿಬಿಟ್ಟೆ ಎಂದು ಆರೋಪಿ ಪೊಲೀಸರ ಬಳಿ ಬಾಯ್‌ಬಿಟ್ಟಿದ್ದಾನೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ನವೀನ್‌ ಮತ್ತು ಪತ್ನಿ ನಡುವೆ ಹೊಂದಾಣಿಕೆಯಿರಲಿಲ್ಲ. ಐದು ವರ್ಷಗಳಿಂದ ಪದೇಪದೆ ಜಗಳ, ಮನಸ್ತಾಪ ನಡೆಯುತ್ತಲೇ ಇತ್ತು. ವಿವಾದ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ಆಪ್ತ ಸಮಾಲೋಚನೆ ಕೂಡ ನಡೆದಿತ್ತು. ಆದರೂ ಕೆಲ ದಿನಗಳ ಕಾಲ ಮಾತ್ರ ಸಮಾಧಾನದ ವಾತಾವರಣ. ಬಳಿಕ ಮತ್ತೆ ಹಳೇ ಚಾಳಿಯನ್ನು ಮಾವನ ಮನೆಯವರು ಮುಂದುವರಿಸಿದ್ದರು ಇದರಿಂದ ನನ್ನ ಅಕ್ಕ ಆವಲಹಳ್ಳಿಯ ತವರು ಮನೆಗೆ ಹಿಂತಿರುಗಿದ್ದರು.

ಭಾನುವಾರ ರಾಕೇಶ್‌ಗೆ ಕರೆ ಮಾಡಿದ್ದ ನವೀನ್‌, ” ನಿನ್ನ ಅಕ್ಕನನ್ನು ವಾಪಸ್‌ ತಂದು ಬಿಡು” ಎಂದು ಹೇಳಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜೋರು ಮಾತಾಗಿತ್ತು. ನವೀನ ಅವಾಚ್ಯ ಪದಗಳಿಂದ ರಾಕೇಶನಿಗೆ ನಿಂದಿಸಿದ್ದ. ರೊಚ್ಚಿಗೆದ್ದ ರಾಕೇಶ,  ಧಮ್ಕಿ ಹಾಕಿದ್ದ. ಆದರೆ, ಅದನ್ನು ನವೀನ್ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಐದು ವರ್ಷಗಳ ರಂಪಾಟಕ್ಕೆ ಕೊನೆ ಹಾಡಲೇಬೇಕು ಎಂದು ತೀರ್ಮಾನ ಮಾಡಿ ರಾಕೇಶ್‌ ಚಾಕು ಸಮೇತ ನವೀನನ ಮನೆಗೆ ಹೋಗಿದ್ದಾನೆ. ಅಷ್ಟೊತ್ತಿಗೆ ನವೀನ ಮನೆಯಲ್ಲಿ ಇರಲಿಲ್ಲ. ಹೀಗಾಗಿ, ನವೀನನ ತಂದೆ- ತಾಯಿಯನ್ನು ಇರಿದು ಕೊಲೆ ಮಾಡಿದ ಅಲ್ಲಿಂದ ಪರಾರಿಯಾಗಿದ್ದಾನೆ. ಹೊರಗೆ ಹೋಗಿದ್ದ ನವೀನ್ ರಾತ್ರಿ ಮನೆಗೆ ಬಂದಾಗ ಕೊಲೆ ನಡೆದಿರುವುದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ರಾಕೇಶನ ಜತೆ ನಡೆದಿದ್ದ ಗಲಾಟೆಯನ್ನು ನವೀನನ ಮೂಲಕ ತಿಳಿದ ಕೋಣನಕುಂಟೆ ಠಾಣೆ ಇನ್ಸ್‌ಪೆಕ್ಟರ್‌ ಧರ್ಮೇಂದ್ರ, ಒಂದು ಕ್ಷಣವೂ ತಡ ಮಾಡದೆ ರಾಕೇಶನನ್ನು ಬಂಧಿಸಲು ತಂಡ ರಚಿಸಿದರು. ಆದರೆ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡದ, ರಾಕೇಶ ಮೊಬೈಲ್‌ ಕೂಡ ಆಫ್‌ ಮಾಡದೆ ಕೊಲೆ ಮಾಡಿದ ಕೆಲವೇ ಗಂಟೆಗಳಲ್ಲಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ರಾಕೇಶ ಕೊಲೆ ಮಾಡುವ ತೀರ್ಮಾನ ಮಾಡಿ ಹೊರಟಿದ್ದಾನೆ ಎನ್ನುವುದು ಅಕ್ಕನಿಗಾಗಲೀ, ಆಕೆಯ ಪೋಷಕರಿಗಾಗಲೀ ಗೊತ್ತೇ ಇರಲಿಲ್ಲ. ಕೊಲೆ ಮಾಡಿದ ಬಳಿಕವೂ ರಾಕೇಶ ಮನೆಯಲ್ಲಿ ಯಾರಿಗೂ ತಿಳಿಸಿರಲಿಲ್ಲ. ಪೊಲೀಸರು ಮನೆಗೆ ಹೋದಾಗಲೇ ಅವರಿಗೆ ಎಲ್ಲವೂ ಗೊತ್ತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಕನ ಗಂಡನನ್ನು ಕೊಲೆ ಮಾಡುವ ತೀರ್ಮಾನ ತೆಗೆದುಕೊಂಡೇ ಮನೆಯಿಂದ ಹೊರಟಿದ್ದ. ಆದರೆ ನವೀನ್‌ ಇರಲಿಲ್ಲ. ಆತ ಇದ್ದಿದ್ದರೆ ಮೊದಲು ಅವನನ್ನು ಕೊಲೆ ಮಾಡುತ್ತಿದ್ದೆ. ಐದು ವರ್ಷದಿಂದ ನಮ್ಮ ಕುಟುಂಬ ಕಣ್ಣೀರಲ್ಲಿ ಕೈ ತೊಳೆದಿದೆ. ನಮಗೂ ಸಾಕಾಗಿ ಹೋಗಿತ್ತು ಎಂದು ರಾಕೇಶ ಪೊಲೀಸರ ಮುಂದೆ ತನ್ನ ಅಕ್ಕನಿಗೆ ಮಾವನ ಮನೆಯವರು ನೀಡುತ್ತಿದ್ದ ಕಿರುಕುಳವನ್ನು ಹೇಳಿಕೊಂಡು ಕಣ್ಣೀರು ಇಟ್ಟಿದ್ದಾನೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ