ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಇಂದೂ ಕೂಡ ರಣಕೇಕೆ ಹಾಕಿದ್ದು, 187 ಹೊಸ ಪ್ರಕರಣಗಳು ದೃಢಪಟ್ಟಿದ್ದು ಈ ಮೂಲಕ ರಾಜ್ಯದಲ್ಲಿ 3,408 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಇಂದು ಬೆಂಗಳೂರಿನಲ್ಲೇ 28 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈವರೆಗೆ ಕೊರೊನಾದಿಂದ ಅಸುನೀಗಿದವರ ಸಂಖ್ಯೆ 54 ಕ್ಕೆ ಏರಿಕೆ ಆಗಿದೆ. (ಇದರಲ್ಲಿ ಎರಡು ಅನ್ಯಕಾರಣದಿಂದ ಬಲಿಯಾಗಿದ್ದಾರೆ). ಅದರಲ್ಲಿ ಇಂದು ಬೆಂಗಳೂರಿನಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇಂದು ದೃಢಪಟ್ಟಿರುವ 187 ಪ್ರಕರಣಗಳ ಪೈಕಿ ಬಹುತೇಕರು ಅಂತಾರಾಜ್ಯ ಸಂಪರ್ಕ ಹೊಂದಿದ್ದಾರೆ. ಇನ್ನು ಕಲಬುರಗಿಯಲ್ಲಿ 24, ಮಂಡ್ಯದಲ್ಲಿ, ಉಡುಪಿಯಲ್ಲಿ 73, ಹಾಸನದಲ್ಲಿ 16, ಬೀದರ್ ಜಿಲ್ಲೆಯಲ್ಲಿ2, ಚಿಕ್ಕಬಳ್ಳಾಪುರದಲ್ಲಿ 5, ದಕ್ಷಿಣ ಕನ್ನಡದಲ್ಲಿ 4, ವಿಜಯಪುರ 1, ಬಾಗಲಕೋಟೆ 2, ಬಳ್ಳಾರಿಯಲ್ಲಿ 3, ಶಿವಮೊಗ್ಗದಲ್ಲಿ 9, ಧಾರವಾಡ 2, ಕೋಲಾರ, ಹಾವೇರಿ ಮತ್ತು ರಾಮನಗರ ಜಿಲ್ಲೆಯಲ್ಲಿ ತಲಾ ಒಂದೊಂದು ಸೋಂಕಿತ ಪ್ರಕರಣ ದೃಢಪಟ್ಟಿದೆ ಎಂದು ಸಂಜೆ ಆರೋಗ್ಯ ಇಲಾಖೆ ನೀಡಿದ ಬುಲೆಟಿನ್ನಲ್ಲಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇದುವರೆಗೆ 1328 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 2026 ಮಂದಿಯಲ್ಲಿ ಸಕ್ರಿಯವಾಗಿದೆ. ಪ್ರಸ್ತುತ 15 ಮಂದಿ ಕೊರೊನಾ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ 192,782 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 192,782 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 5,415 ಮಂದಿ ಮೃತಪಟ್ಟಿದ್ದಾರೆ. 92,474 ಮಂದಿ ರೋಗಮುಕ್ತರಾಗಿದ್ದಾರೆ. ಪ್ರಪಂಚಾದ್ಯಂತ ಈವರೆಗೆ 6,299,753 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 374,505 ಜನರು ಮೃತಪಟ್ಟಿದ್ದಾರೆ 2,865,463 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ. view by country
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail