ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಬದಲಿಗೆ 7೦ ರೂ. ದಿನದ ಪಾಸ್ ಪಡೆದು ಪ್ರಯಾಣಿಸಬೇಕಿತ್ತು. ಆದರೆ ಅದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಹಿಂದಿನಂತೆ ಸ್ಟೇಜ್‌ಲೆಕ್ಕದಲ್ಲಿ ಟಿಕೆಟ್ ವಿತರಣೆಗೆ ಕ್ರಮ ಕೈಗೊಳ್ಳಲಿದೆ.
ಈ ಬಗ್ಗೆ ಖಾಸಗಿ ಟಿವಿ ಮಾಧ್ಯಮಗಳು ನಡೆಸಿದೆ ಅಭಿಯಾದಿಂದ ಎಚ್ಚೆತ್ತುಕೊಂಡ ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ಈ ಹಿಂದಿನಂತೆ ಟಿಕೆಟ್‌ದರವನ್ನು ಪಡೆಯುವ ಬಗ್ಗೆ ಚರ್ಚಿಸುವ ಸಲುವಾಗಿ ಸಭೆ ನಡೆಸುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಸಭೆಯಲ್ಲಿ ಟಿಕೆಟ್ ದರದ ರೀತಿಯಲ್ಲೇ ಪ್ರಯಾಣಿಕರಿಂದ ದರ ಪಡೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಇನ್ನು 50 ಬಸ್‌ಪಾಸ್ ಇಂದಿನಿಂದ ಅಲ್ಲ ನಾಳೆಯಿಂದ ಚಾಲನೆಗೆ ಬರಲಿದೆ ಎಂದು ಹೇಳಲಾಗಿದೆ.
ಬಿಎಂಟಿಸಿ ಸ್ಟೇಜ್‌ಗೆ ಇರುವ ಟಿಕೆಟ್ ದರ
ಮೊದಲನೇ ಸ್ಟೇಜ್‌ಗೆ 5 ರೂ. 2ನೇ ಸ್ಟೇಜ್‌ಗೆ 10 ರೂ. 3ನೇ ಸ್ಟೇಜ್‌ಗೆ 15 ರೂ. 4ನೇ ಸ್ಟೇಜ್‌ಗೆ 17ರೂ., 5 ಸ್ಟೇಜ್‌ಗೆ 19, ರೂಪಾಯಿ. 6, 7, ನೇ ಸ್ಟೇಜ್ 20 ರೂ. 8,9ನೇ ಸ್ಟೇಜ್ 22 ರೂ. , 10,11 ಸ್ಟೇಜ್ 23 ರೂ. 12,13 ಸ್ಟೇಜ್ 24 ರೂ. 15,16, 25 ರೂ. 17, 18ನೇ ಸ್ಟೇಜ್‌ಗೆ 26 ಮತ್ತು 19, 20ನೇ ಸ್ಟೇಜ್ 27 ರೂ. ಟಿಕೆಟ್ ದರವನ್ನು ಬಿಎಂಟಿಸಿ ನಿಗದಿ ಮಾಡಿದೆ. ಆದರೆ ಕೊರೊನಾ ಭಯದಿಂದ ಒಂದು ಸ್ಟಾಪ್‌ನಲ್ಲಿ ಇಳಿದರೂ 70 ರೂಪಾಯಿಯ ಬಸ್ ಪಾಸ್ ಪಡೆದೆ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಪ್ರಯಾಣಿಕರಿಗೆ ತುಂಬ ತೊಂದರೆ ಆಗುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿದ್ದರವಾಗುತ್ತಿದ್ದಂತೆ ಎಚ್ಚತ್ತುಕೊಂಡ ಸಾರಿಗೆ ಇಲಾಖೆ ಈಗ ಟಿಕೆಟ್ ವಿತರಿಸುವುದು ಹೆಚ್ಚು ಸೂಕ್ತವಲ್ಲ ಆದ್ದರಿಂದ 70 ರೂ. ಇದ್ದ ಬಸ್ ಪಾಸ್ ದರವನ್ನು ತಾತ್ಕಾಲಿಕವಾಗಿ 50 ರೂ.ಗೆ ಇಳಿಸಲು ಸಭೆಯಲ್ಲಿ ತೀರ್ಮಾನಿಸಿರುವುದಾಗಿದೆ ಸಚಿವ ಲಕ್ಷಣ ಸವದಿ ತಿಳಿಸಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail