ಬೆಂಗಳೂರು: ಕೊರೊನಾಕ್ಕೆ ಬಿಎಂಟಿಸಿ ಬಸ್‌ಗಳೇ ಆಹ್ವಾನ ನೀಡುತ್ತಿವೆ. ಹೌದು ಇಂದು ರಸ್ತೆಗೆ ಇಳಿದಿರುವ ಬಹುತೇಕ ಬಸ್‌ಗಳಲ್ಲಿ ಸಾಮಾಜಿಕ ಅಂತರ ಇಲ್ಲವಾಗಿದ್ದು, ಜನರು ನೂಕುನುಗ್ಗಲಿನಲ್ಲೇ ಹತ್ತುತ್ತಿದ್ದಾರೆ. ಸಾಮಾಜಿಕ ಅಂತರವು ಇಲ್ಲದೆ ಬಸ್‌ನಲ್ಲಿ 50-60 ಜನ ಪ್ರಯಾಣಿಸುತ್ತಿದ್ದಾರೆ.
ಕೊರೊನಾ ಸೋಂಕಿನಿಂದ ಕಂಗೆಟ್ಟಿರುವ ಬೆಂಗಳೂರಿನ ಮಂದಿ ಹೊರಬಂದು ಒಂದಷ್ಟು ದುಡಿದು ಜೀವನ ಸಾಗಿಸಲು ಅನುವುಮಾಡಿಕೊಟ್ಟಿರುವ ಸರ್ಕಾರ ಅದಕ್ಕಾಗಿ ಬಿಎಂಟಿಸಿ ಬಸ್ ಸೌಲಭ್ಯವನ್ನು ನೀಡಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಬಸ್ ಸಂಚಾರಕ್ಕೂ ಅನುವು ಮಾಡಿಕೊಟ್ಟಿದೆ. ಅದರಂತೆ ಸಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಒಂದು ಬಸ್‌ನಲ್ಲಿ ಚಾಲಕ ನಿರ್ವಾಹಕರು ಸೇರಿ 22 ಜನ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಅದಕ್ಕಾಗಿ ಟಿಕೆಟ್ ಬದಲಿಗೆ ಪಾಸ್ ವಿತರಣೆಯನ್ನು ಮಾಡುತ್ತಿತ್ತು. ಆದರೆ, ಬಸ್‌ಪಾಸ್ ದರ 70 ರೂ. ಇರುವುದರಿಂದ ಹತ್ತಿರದಲ್ಲೇ ಪ್ರಯಾಣಿಸುವವರಿಗೆ ಅದು ಹೊರೆಯಾಗುತ್ತಿತ್ತು. ಅದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಂದಿನಿಂದ ಟಿಕೆಟ್ ಇಸ್ಯೂ ಮಾಡುತ್ತಿದೆ.
ಇದೇನೋ ಸರಿ ಆದರೆ, ಇಂದಿನಿಂದ ಸಾಮಾಜಿ ಅಂತರ ಕಾಯ್ದುಕೊಳ್ಳದೆ ಪ್ರಯಾಣಿಕರನ್ನು ಬೇಕಾಬಿಟ್ಟಿ ಹತ್ತಿಸಿಕೊಂಡು ಇಳಿಸಲಾಗುತ್ತಿದೆ. ಇದರಿಂದ ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಜನರು ಇದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇಷ್ಟು ದಿನದವರೆಗೆ ಸಾಮಾಜಿ ಅಂತರ ಕಾಯ್ದುಕೊಂಡು ಪ್ರಯಾಣಿಸುತ್ತಿದ್ದ ಜನರು ಟಿಕೆಟ್ ಇಸ್ಯೂ ಮಾಡುತ್ತಿರುವುದರಿಂದ ಬಸ್‌ನಿಲ್ದಾಣಗಳಲ್ಲಿ ತಾವು ಹೋಗುವ ಮಾರ್ಗದ ಬಸ್ ಬಂದ ಕೂಡಲೇ ನೂಕುನುಗ್ಗಲಿನಿಂದಲೇ ಹತ್ತುತ್ತಿದ್ದಾರೆ. ಇದರಿಂದ ಕೊರೊನಾ ಬರುವುದಕ್ಕೂ ಮುಂಚೆ ಇದ್ದ ರೀತಿಯಲ್ಲೇ ಪ್ರಯಾಣ ಮಾಡುತ್ತಿದಾರೆ.
ಬಹುತೇಕ ಜನರು ಮಾಸ್ಕ್ ಹಾಕುತ್ತಿಲ್ಲ, ಸ್ಯಾನಿಟೈಸ್ ಮಾಡುತ್ತಿಲ್ಲ. ಒಂದು ಮೀಟರ್ ಅಂತರ ಕಾಯ್ದುಕೊಳ್ಳುವುದು ಮೊದಲೇ ಇಲ್ಲವಾಗಿದೆ. ಈ ರೀತಿ ಆದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಸಂಪೂರ್ಣವಾಗಿ ಕೊರೊನಾ ಮುಕ್ತವಾಗುವ ಬದಲಿಗೆ ಯುಕ್ತವಾಗಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ.
ಇನ್ನಾದರು ಸಾರ್ವಜನಿಕರು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸಚಿವರು ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ. ಇಂದರಿಂದ ಮುಂದೆ ಆಗುವ ಭಾರಿ ಗಂಡಾಂತವರವನ್ನು ತಡೆಯಬೇಕಿದೆ. ಇಲ್ಲವಾದರೆ ಇದರಿಂದ ಮೊದಲು ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರು ಕೊರೊನಾಗೆ ತುತ್ತಾಗಿ ನಂತರ ಪ್ರಯಾಣಿಕರು ಬಲಿಯಾಗುತ್ತಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail