ಬೆಂಗಳೂರು: ಬಿಎಂಟಿಸಿ ಜಯನಗರದ ಡಿಪೋ 4ರಲ್ಲಿ ಮೆಕ್ಯಾನಿಕ್ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಅವರೊಂದಿಗೆ ಪ್ರಥಮ ಸಂಪರ್ಕದಲ್ಲಿದ್ದ 10ಮಂದಿ ಮೆಕ್ಯಾನಿಕ್‌ಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಜೂನ್ 25ರಂದು ಅವರ ರಕ್ತ ಮಾದರಿಯನ್ನು ಟೆಸ್ಟ್‌ಗೆ ಕಳುಹಿಸಲಾಗಿತ್ತು. ಈ ಹಿನ್ನೆಲೆ ಭಾನುವಾರ ಅವರ ಸ್ವ್ಯಾಬ್ ಪರೀಕ್ಷೆ ಬಂದಿದ್ದು ಕೊರೊನಾ ಸೋಂಕು ಇರುವುದು ದೃಢಪಟ್ಟಿ. ಹೀಗಾಗಿ ಅವರೊಂದಿಗೆ ಪ್ರಥಮ ಸಂಪರ್ಕದಲ್ಲಿದ್ದ ಇತರ 10 ಮೆಕ್ಯಾನಿಕ್‌ಗಳನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಿದ್ದು, ಅವರ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ.
ನಿನ್ನೆ ಮೆಕ್ಯಾನಿಕ್‌ಗೆ ಸೋಂಕು ಇರುವುದು ದೃಢಪಟ್ಟಿದ್ದರಿಂದ ಸೋಮವಾರ ಬೆಳಗ್ಗೆ ಅಧಿಕಾರಿಗಳು ಘಟಕ್ಕೆ ಭೇಟಿನೀಡಿ ರೋಗ ನಿರೋಧಕ ಔಷಧವನ್ನು ನಿಪಡಣೆ ಮಾಡಿಸಿದ್ದಾರೆ.
ಇನ್ನು ಡಿಪೋನಲ್ಲಿ ಇರುವ ಉಳಿದ 30 ಮಂದಿ ಮೆಕ್ಯಾನಿಕ್‌ಗಳು ಕಾರ್ಯ ನಿವರ್ಹಿಸುತ್ತಿದ್ದಾರೆ. ಜತೆಗೆ ಇಂದು ಬೆಳಗ್ಗೆಯಿಂದ ನಮ್ಮ ಡಿಪೋ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಡಿಪೋ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ವಿಜಯಪಥಕ್ಕೆ ತಿಳಿಸಿದ್ದಾರೆ.
ಇನ್ನು ಸಾರಿಗೆ ಇಲಾಖೆಯ ಒಟ್ಟು 32 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಅವರಲ್ಲಿ 5ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.