ಬೆಂಗಳೂರು: ವಿಶ್ವಮಾರಿ ಕೊರೊನಾ ಸೋಂಕು ದಿನದಿಂದಕ್ಕೆ ತನ್ನ ಅಟ್ಟಹಾಸವನ್ನು ಮುಂರುವರಿಸಿದ್ದು, ರಾಜ್ಯದಲ್ಲಿ ಇಂದು 1,105 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 14,295ಕ್ಕೆ ಏರಿಕೆಯಾಗಿದೆ.
ಕೊರೊನಾಗೆ ಇಂದು 19 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 230ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 3, ಬಳ್ಳಾರಿಯಲ್ಲಿ 12, ಬಾಗಲಕೋಟೆ, ರಾಮನಗರ, ದಕ್ಷಿಣ ಕನ್ನಡ, ಹಾಸನದಲ್ಲಿ ತಲಾ 1 ಕೊರೊನಾ ಸಾವಿನ ಪ್ರಕರಣ ವರದಿಯಾಗಿದೆ.
ಬೆಂಗಳೂರಿನಲ್ಲಿ 178 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಜ್ಯದಲ್ಲಿ ಒಟ್ಟಾರೆ 268 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು
ಬೆಂಗಳೂರು ನಗರದಲ್ಲಿ 738, ಬಳ್ಳಾರಿಯಲ್ಲಿ 76, ದಕ್ಷಿಣ ಕನ್ನಡದಲ್ಲಿ 32, ಬೀದರ್‌ನಲ್ಲಿ 28, ಉತ್ತರ ಕನ್ನಡದಲ್ಲಿ 24, ಕಲಬುರಗಿಯಲ್ಲಿ 23, ಹಾನಸ, ವಿಜಯಪುರದಲ್ಲಿ ತಲಾ 22, ತುಮಕೂರು, ಉಡುಪಿಯಲ್ಲಿ ತಲಾ 18, ಧಾರವಾಡ, ಚಿಕ್ಕಮಗಳೂರಿನಲ್ಲಿ ತಲಾ 17, ಚಿಕ್ಕಬಳ್ಳಾಪುರದಲ್ಲಿ 15, ಯಾದಗಿರಿಯಲ್ಲಿ 9, ಮಂಡ್ಯದಲ್ಲಿ 8, ಮೈಸೂರಿನಲ್ಲಿ 6, ಶಿವಮೊಗ್ಗದಲ್ಲಿ 5, ರಾಯಚೂರು, ಬಾಗಲಕೋಟೆ, ಗದಗ, ಕೋಲಾರದಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರದಲ್ಲಿ 3, ದಾವಣಗೆರೆ, ರಾಮನಗರ, ಚಿತ್ರದುರ್ಗದಲ್ಲಿ ತಲಾ 2, ಹಾವೇರಿ, ಕೊಡಗಿನಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ.