ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ದಿನದಿಂದಕ್ಕೆ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, ರಾಜ್ಯದಲ್ಲಿ ಇಂದು 947 ಮಂದಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 15,242ಕ್ಕೆ ಏರಿಕೆಯಾಗಿದೆ.
ಕೊರೊನಾಗೆ ಇಂದು 20 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 250ಕ್ಕೆ (ಅನ್ಯಕಾರಣಕ್ಕೆ 4 ಮಂದಿ ಸೇರಿ) ಏರಿಕೆಯಾಗಿದೆ ಬಳ್ಳಾರಿಯಲ್ಲಿ 31 ವರ್ಷದ ಮಹಿಳೆ ಸೇರಿ 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಬೆಂಗಳೂರಿನಲ್ಲಿ 4, ಹಾವೇರಿ, ಧಾರವಾಡ, ವಿಜಯಪುರದಲ್ಲಿ ತಲಾ 2, ಕೋಲಾರ, ದಾವಣಗೆರೆ, ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಉತ್ತಮವಾಗಿದ್ದು, ಮಂಗಳವಾರ 235 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಈವರೆಗೆ 7918 ಮಂದಿ ಮುಣಮುಖರಾಗಿದ್ದಾರೆ. ಒಟ್ಟು 7074 ಸಕ್ರಿಯ ಪ್ರಕರಣಗಳಿದ್ದು, 271 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 503, ಬಳ್ಳಾರಿಯಲ್ಲಿ 61, ಹಾವೇರಿಯಲ್ಲಿ 49, ದಕ್ಷಿಣ ಕನ್ನಡದಲ್ಲಿ 44, ಉತ್ತರ ಕನ್ನಡದಲ್ಲಿ 40, ವಿಜಯಪುರ 39, ಶಿವಮೊಗ್ಗ 22, ಬೆಂಗಳೂರು ಗ್ರಾಮಾಂತರ 21, ಬೀದರ್, ಧಾರವಾಡದಲ್ಲಿ ತಲಾ17, ಹಾಸನ 16, ರಾಯಚೂರು, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರದಲ್ಲಿ ತಲಾ 12, ಚಿಕ್ಕಮಗಳೂರು 10, ಉಡುಪಿ, ಮೈಸೂರಿನಲ್ಲಿ ತಲಾ 9, ಬಾಗಲಕೋಟೆ, ಕೊಡಗಿನಲ್ಲಿ ತಲಾ 4, ಕೋಲಾರ, ಚಿತ್ರದುರ್ಗದಲ್ಲಿ ತಲಾ 3, ಯಾದಗಿರಿ, ಮಂಡ್ಯ, ಬೆಳಗಾವಿ, ಗದಗದಲ್ಲಿ ತಲಾ 2, ತುಮಕೂರಿನಲ್ಲಿ 1 ಪ್ರಕರಣ ವರದಿಯಾಗಿದೆ.